ಶಿಕಾರಿಪುರ:
ಅವರು ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷದಲ್ಲಿ ಮಕ್ಕಳು ಮೊಬೈಲ್ ಗೀಳಿನ ವ್ಯಸನಕ್ಕೆ ದಾಸರಾಗುತ್ತಿದ್ದು ಇಂತಹ ಚಟದಿಂದ ಹೊರಬಂದು ಕಲೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕಾದ ಅಗತ್ಯತೆ ಇದೆ ಎಂದರು. ನಮ್ಮ ಹಿರಿಯರು ಮಕ್ಕಳಿಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಇಂದಿನ ತಾಯಂದಿರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿ ಗೊಂಬೆ ತೋರಿಸಿ ಊಟ ಮಾಡಿಸುವ ಪರಿಸ್ಥಿತಿ ಬಂದು ಒದಗಿದೆ ಎಂದು ವಿಷಾಧಿಸಿದರು. ಇದರಿಂದ ಮಕ್ಕಳ ಮನಸ್ಸು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಏಕಾಂಗಿಯಾಗುತ್ತದೆ. ಅದು ತೀರಾ ಅಪಾಯಕಾರಿ ಬೆಳವಣಿಗೆ. ಈ ದಿಸೆಯಲ್ಲಿ ರಂಗ ಶಿಬಿರ ಮಕ್ಕಳಿಗೆ ಕಲೆ ಸಂಸ್ಕೃತಿ ಕಿರುಪರಿಚಯ ನೀಡುವ ಬಹು ಮಹತ್ವದ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಹೆಸರಾಂತರ ರಂಗಕರ್ಮಿ, ಗುಡಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ರಂಗ ಶಿಬಿರದ ಈ ಪರಿಸರದಲ್ಲಿ ಮನ ಬಿಚ್ಚಿ ಸ್ನೇಹಿತರೊಂದಿಗೆ ಕಲೆ ಆಸ್ವಾದಿಸಬೇಕು ಮತ್ತು ಕಲಾಸಕ್ತಿ ಬೆಳೆಸಿಕೊಳ್ಳಬೇಕು. ನಿರ್ಮಲ ಮನಸ್ಸಿನಿಂದ ಮಕ್ಕಳು ಶಿಕ್ಷಣ ಕಲಿತಾಗ ಸ್ವತಂತ್ರವಾಗಿ ಬೆಳೆಯುತ್ತಾರೆ ಎಂದರು.