1.12ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್

KannadaprabhaNewsNetwork |  
Published : Sep 18, 2024, 01:47 AM IST
ಗುಂಡೇರಿ ಗ್ರಾಮದಲ್ಲಿ ಒಂದು ಕೋಟಿ 12 ಲಕ್ಷ ರೂ.ವೆಚ್ಚದ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.  | Kannada Prabha

ಸಾರಾಂಶ

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೂ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. ತಾಲೂಕಿನ ಗುಂಡೇರಿ ಗ್ರಾಮದಲ್ಲಿ ₹112 ಲಕ್ಷ ವೆಚ್ಚದಲ್ಲಿ ನೂತನ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೂ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. ತಾಲೂಕಿನ ಗುಂಡೇರಿ ಗ್ರಾಮದಲ್ಲಿ ₹112 ಲಕ್ಷ ವೆಚ್ಚದಲ್ಲಿ ನೂತನ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಾದ್ಯಂತ ಎಲ್ಲಾ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರದ ಮಧ್ಯೆ ₹60 ಕೋಟಿ ವೆಚ್ಚದಲ್ಲಿ ಫಿಲ್ಟರ್ ಕೂರಿಸಲಾಗಿದೆ. ಶೇ.90 ರಷ್ಟು ಕೆಲಸ ಮುಗಿದಿದ್ದು, ಇನ್ನು ಶೇ. ಹತ್ತರಷ್ಟು ಕಾಮಗಾರಿ ಬಾಕಿಯಿದೆ ಎಂದು ಹೇಳಿದರು. ಹೆಚ್.ಡಿ.ಪುರ, ನಂದನಹೊಸೂರು, ಶಿವಗಂಗ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪೈಪ್‍ಲೈನ್ ಅಳವಡಿಸಲಾಗಿದೆ. ಇದರಿಂದ ರೈತರ ತೋಟಗಳು ಒಣಗುವುದಿಲ್ಲ. ಮತಿಘಟ್ಟದಿಂದ ತಿರುಮಲಾಪುರದವರೆಗೆ ₹33 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವುದು. ಇನ್ನು ಇನ್ನೂರು ವರ್ಷಗಳಾದರೂ ಈ ರಸ್ತೆ ಹಾಳಾಗುವುದಿಲ್ಲ ಎಂದು ತಿಳಿಸಿದರು.

ನಗರಘಟ್ಟ ಗ್ರಾಮದಲ್ಲಿ ₹1.2 ಕೋಟಿ ವೆಚ್ಚದಲ್ಲಿ ನೂತನ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಮ್ ಬ್ಯಾರೇಜ್, ಬೋರನಹಳ್ಳಿ ಗ್ರಾಮದಲ್ಲಿ ₹98 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ಸಲ್ಲಿಸಿದರು.

ಚಿತ್ರಹಳ್ಳಿ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪರಮೇಶ್ವರಪ್ಪ, ರಂಗಸ್ವಾಮಿ, ನಾಗರಾಜ್, ತಾಲೂಕು ಪಂಚಾಯಿತಿ ಸದಸ್ಯ ದುಗ್ಗಣ್ಣ, ರಂಗಪ್ಪ, ಅಂಕಳಪ್ಪ, ಪ್ರವೀಣ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‍ಗಳಾದ ನಾಗರಾಜ್, ಶರಣಯ್ಯ, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.------

17ಎಚ್‌ಎಲ್ ಕೆ 3: ಗುಂಡೇರಿ ಗ್ರಾಮದಲ್ಲಿ ₹1.12ಕೋಟಿ ವೆಚ್ಚದ ಚೆಕ್‍ಡ್ಯಾಮ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ. ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.

PREV