ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಮಹಿಷವಾಡಗಿ ಸೇತುವೆ ಪೂರ್ಣಗೊಳಿಸಲು ಆಗ್ರಹಿಸಿ ಡಾ.ರವಿ ಜಮಖಂಡಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿ, ಇಂದು ವಾಸ್ತುಶಾಸ್ತ್ರ ಮತ್ತು ಕಾಮಗಾರಿ ನಡೆಸುವ ಪರಿ ಉನ್ನತ ತಂತ್ರಜ್ಞಾನದ ಪರಾಕಾಷ್ಠೆ ತಲುಪಿದೆ. ಎಂತಹುದೇ ಜಟಿಲ ಸ್ಥಿತಿಯಲ್ಲೂ ಕಾಮಗಾರಿ ನಡೆಸುವ ಕೌಶಲ್ಯತೆ ಭಾರತೀಯ ಅಭಿಯಂತರರಿಗಿದೆ. ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಸ್ಥಳೀಯ ಅಭಿಯಂತರ ಸಂಘದ ಸದಸ್ಯರೆಲ್ಲರೂ ಸರ್ಕಾರ ನೀಡಿರುವ ಅನುದಾನ ಮರಳಿ ಪಡೆದು ನಮಗೆ ನೀಡಿದಲ್ಲಿ ನಿಗದಿತ ಕಾಲದಲ್ಲಿ ಪೂರ್ಣಗೊಳಿಸುತ್ತೇವೆಂದು ಸವಾಲು ಹಾಕಿದರು. ಸರ್ಕಾರದ ಇಚ್ಛಾಶಕ್ತಿಯ ಮುಂದೆ ಯಾವ ತಂತ್ರ-ಕುತಂತ್ರಗಳಿಗೂ ಮಣೆ ಹಾಕದೇ ಅಡ್ಡಿಯಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಾಮಗಾರಿಗೆ ಹಸಿರು ನಿಶಾನೆ ತೋರಿಸಬೇಕೆಂದು ಆಗ್ರಹಿಸಿದರು.ಹೋರಾಟಕ್ಕೆ ಬೆಂಬಲಿಸಿ ರಬಕವಿ-ಬನಹಟ್ಟಿ, ತೇರದಾಳ ಅಭಿಯಂತರರ ಸಂಘದ ಬಸವರಾಜ ನುಚ್ಚಿ, ಕಲ್ಮೇಶ ಮಾಳಿ, ಸುನೀಲ ಹುಲಗಬಾಳಿ, ವಿನೋದ ಮಾಲಾಪುರ, ರಘು ಕುಲಗೋಡ, ಸುಧಾಕರ ಅಮ್ಮಣಗಿಮಠ, ಪವನ ಪತ್ತಾರ, ಸಂಜಯ ತೆಗ್ಗಿ, ರಾಜೀವ ಸಾಬೋಜಿ, ಶಿವಾನಂದ ಮಠದ, ಶಿವಾನಂದ ಗಿಡವೀರ ಮುಂತಾದವರಿದ್ದರು.