ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ದಿ.ಬಿ.ಶಂಕರಾನಂದ ವೃತ್ತದಲ್ಲಿ ಬುಧವಾರ ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ದೇಶದಲ್ಲಿ ಪ್ರಭಾವಿ ರಾಜಕಾರಣಿಗಳಲ್ಲಿ ದಿ. ಬಿ.ಶಂಕರಾನಂದ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಕಾಲಿ ಬಿ.ಪಾರ್ಮ್ ತಂದಿದ್ದನ್ನು ನಾವು ಕೂಡ ನೋಡಿದ್ದೇವೆ. ಶಂಕರಾನಂದ ಅವರು ರಾಜಕೀಯ ಕೊನೆಯ ಹಂತದಲ್ಲಿ ಇದ್ದಾಗ, ನಾವು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇವೆ. ಹೀಗಾಗಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಹಾಗೂ ಸಕ್ಕರೆ ಕಾರ್ಖಾನೆಗಳ ನಿರ್ಮಾಣಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಬಿ.ಶಂಕರಾನಂದ ಅವರ ಪುತ್ಥಳಿ ನಿರ್ಮಾಣದಿಂದ ಯುವ ಪೀಳಿಗೆಗೆ ಮಾದರಿಯಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಶಂಕರಾನಂದ ಅವರನ್ನು ಪರಿಚಯಿಸುವ ಕೆಲಸವಾಗಲಿ, ಅವರ ಕುಟುಂಬಸ್ಥರು ರಾಜಕೀಯಕ್ಕೆ ಬರಲಿ, ಅದಕ್ಕೆ ಬೇಕಾದ ಸಹಾಯ, ಸಹಕಾರವನ್ನು ನಾನು ನೀಡುತ್ತೇನೆಂದು ಇದೇ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಬಿ.ಶಂಕರಾನಂದ ಅವರು ನನ್ನ ಸಹೋದರ ಚಿದಾನಂದ ಕೋರೆ ನಿಧನದ ಬಳಿಕ ನನ್ನನ್ನು ರಾಜಕೀಯಕ್ಕೆ ಕರೆತಂದು ಬೆಳೆಸಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿ ಪವರ್ ಫುಲ್ ರಾಜಕಾರಣಿಯಾಗಿದ್ದರು. ಚುನಾವಣೆ ವೇಳೆ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳ ಟಿಕೆಟ್‌ಗಳನ್ನು ಅವರೆ ಫೈನಲ್ ಮಾಡಿ ಬಿ- ಫಾರ್ಮ್ ನೀಡುತ್ತಿದ್ದರು. ವಿರೋಧ ಪಕ್ಷದವರಿಗೆ ಎಂದೂ ತೊಂದರೆ ಕೊಡಲಿಲ್ಲ. ಪಕ್ಷಾತೀತವಾಗಿ ಸಹಾಯ ಮಾಡುತ್ತಿದ್ದ ಅವರ ಗುಣ ಮಾದರಿಯಾಗಿತ್ತು. ಕರ್ನಾಟಕ ಸೇರಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳ ನೇಮಕದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕೆಎಲ್‌ಇ ಆಸ್ಪತ್ರೆ ನಿರ್ಮಾಣದ ಸಂದರ್ಭದಲ್ಲಿ ಅವರು ನೀಡಿದ ಸಹಕಾರ ಅಪಾರವಾಗಿದೆ ಎಂದು ಬಿ.ಶಂಕರಾನಂದ ಅವರ ಸಹಕಾರವನ್ನು ಕೋರೆ ಕಾರ್ಯಕ್ರಮದಲ್ಲಿ ಸ್ಮರಿಸಿದರು.ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಶಂಕರಾನಂದ ಅವರಿದ್ದಾಗ ನಮಗೆಲ್ಲ ಸೂಕ್ತ ಸ್ಥಾನ ನೀಡಿದ್ದರು. ರೋಣದಿಂದ ಮೊದಲ ಬಾರಿಗೆ ನನಗೆ ಟಿಕೆಟ್ ನೀಡಿ ನನ್ನ ಗೆಲುವಿಗೆ ಶ್ರಮಿಸಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದು ಬಣ್ಣಿಸಿದರು.
ಪ್ರದೀಪ ಕಣಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ ಸೇರಿದಂತೆ ದಿ.ಬಿ.ಶಂಕರಾನಂದ ಅವರ ಕುಟುಂಬದ ಜೋಶಿ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಮಾಜಿ ಸಚಿವ ಶಶಿಕಾಂತ ನಾಯಕ ಮುಂತಾದವರು ಉಪಸ್ಥಿತರಿದ್ದರು.