ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಕ್ಕೆ ಉಜ್ವಲ ಭವಿಷ್ಯ

KannadaprabhaNewsNetwork |  
Published : Jan 26, 2026, 01:15 AM IST
೨೫ಶಿರಾ೧: ಶಿರಾದಲ್ಲಿ ಉದ್ಘಾಟನೆಗೊಂಡ ನೂತನ ಶ್ರೀ ಭವಾನೇಶ್ವರಿ (ಅಂಭಾಭವಾನಿ) ದೇವಾಲಯಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಭಾರತ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಚಿಂತನೆ ಭವಿಷ್ಯ ಭಾರತವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತಿವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಭಾರತ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಚಿಂತನೆ ಭವಿಷ್ಯ ಭಾರತವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತಿವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ಶಿರಾದಲ್ಲಿ ಉದ್ಘಾಟನೆಗೊಂಡ ನೂತನ ಶ್ರೀ ಭವಾನೇಶ್ವರಿ (ಅಂಭಾಭವಾನಿ) ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ತುಮಕೂರು ಜಿಲ್ಲೆಯ ಮಾರ್ಗವಾಗಿ ಊರುಕೆರಿಯಿಂದ ತಿಮ್ಮರಾಜನಹಳ್ಳಿ ಯವರೆಗೆ ಸುಮಾರು ೨೪ ಕಿ.ಮೀ. ದೂರದವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು ಪ್ರಾಯೋಗಿಕವಾಗಿ ರೈಲು ಸಂಚರಿಸಿ ಪರಿಶೀಲನೆ ಕೂಡ ನಡೆದಿದೆ, ಮುಂದುವರೆದ ಭಾಗವಾಗಿ ತಿಮ್ಮರಾಜನಹಳ್ಳಿ ಹಾಗೂ ತಾವರೆಕೆರೆ ಜುಂಕ್ಷನ್ ವರೆಗೆ ಕಾಮಗಾರಿ ನಡೆಸಲು ಟೆಂಡರ್ ಸಹ ಹಾಗಿದ್ದೂ ಬಹುಬೇಗ ಕಾಮಗಾರಿ ನಡೆಯಲಿದೆ ಜೊತೆಗೆ ಹಿರಿಯೂರು, ಧರ್ಮಸಾಗರ, ಚಿತ್ರದುರ್ಗ, ದಾವಣೆಗೆರೆ ವರೆಗೆ ಕಾಮಗಾರಿ ಪ್ರಗತಿಯಲ್ಲಿವೆ, ಶ್ರೀಘ್ರವೇ ರೈಲ್ವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ವಿಧಾನ ಪರಿಷತ್ ಶಾಸಕ ಚಿದಾನಂದ್ಎಂ.ಗೌಡ ಮಾತನಾಡಿ ಇಡೀ ರಾಜ್ಯದಲ್ಲೇ ಬೃಹತ್ತಾದ ಶ್ರೀ ಅಂಬಾಭವಾನಿ ದೇವಸ್ಥಾನ ಎಲ್ಲಿಯೂ ಇಲ್ಲಾ ಮಹಾರಾಷ್ಟ್ರ ಹೊರತು ಪಡಿಸಿದರೆ ನಮ್ಮ ಕರ್ನಾಟಕದ ಶಿರಾದಲ್ಲಿ ನಿರ್ಮಾಣವಾಗಿರುವುದು ನಮ್ಮನ್ನು ಸೇರಿ ಸಹಸ್ರಾರು ಭಕ್ತರಲ್ಲಿ ಸಂತಸ ತಂದಿದೆ. ಬಹುದೊಡ್ಡ ಇತಿಹಾಸವುಳ್ಳ ಈ ದೇವಸ್ಥಾನ ಶಿವಾಜಿ ಮಹಾರಾಜರು ಯುದ್ಧ ಮಾಡಿ ಈ ಪ್ರಾಂತ್ಯವನ್ನು ಗೆದ್ದಂತಹ ಸಂದರ್ಭದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಈ ಪುರಾತನ ದೇವಸ್ಥಾನದ ಜಾಗ ಬಹಳ ವರ್ಷಗಳಿಂದ ಅಭಿವೃದ್ದಿ ಕಾಣದೆ ಹಲವಾರು ತೊಂದರೆ, ಸಮಸ್ಯೆಗಳಿಂದ ಮೂಲೆಗುಂಪಾಗಿತ್ತು, ದಿವಂಗತ ಎಸ್. ಎಂ.ಕೃಷ್ಣಯ್ಯ ನವರ ಅಭಿಲಾಷೆಯಂತೆ ಈ ಭಾಗದ ಸಮಸ್ತ ಭಕ್ತವೃಂದ ಸೇರಿ ಶಿರಾ ತಾಲೂಕಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಪ್ರಮುಖ ದೇವಾಲಯಗಳಂತೆ ಇದನ್ನು ಕೂಡ ವ್ಯವಸ್ಥಿತವಾಗಿ ನಿರ್ಮಾಣ ಮಾಡಿ ಲೋಕಾರ್ಪಣೆ ಗೊಳಿಸಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಈ ಸ್ಥಳ ಬಹು ದೊಡ್ಡ ಹಿಂದೂ ಧಾರ್ಮಿಕ ಯಾತ್ರಾ ಸ್ಥಳವಾಗಿ ಪ್ರಖ್ಯಾತಿ ಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ, ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್, ರೂಪೇಶ್ ಕೃಷ್ಣಯ್ಯ, ವಕೀಲರಾದ ಬಸವರಾಜು, ಮಂಜುನಾಥ್, ಟ್ರಸ್ಟಿಗಳಾದ ಆರ್.ಉದಯ್ ಕುಮಾರ್, ಬಿ.ಎಸ್. ವಿಜಯ್ ಕುಮಾರ್, ರೂಪೇಶ್ ಕೃಷ್ಣಯ್ಯ, ಲಾಡರ ಸಂಘದ ಉಪಾಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ರಂಗನಾಥ್ ಲಾಡ್, ಖಜಾಂಚಿ ಎನ್.ನರಸಿಂಹಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ