ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗುವ ಮಕ್ಕಳ ಮನಸ್ಸಿನಲ್ಲಿ ಭ್ರಮಾಲೋಕ ಸೃಷ್ಟಿಯಾಗುತ್ತದೆ. ಇದರಿಂದ ಬಿಡುಗಡೆಗೊಳ್ಳಲು ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆ ನೆರವಾಗುತ್ತವೆ.
ಅಂಕೋಲಾ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅಂಕೋಲಾಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗುವ ಮಕ್ಕಳ ಮನಸ್ಸಿನಲ್ಲಿ ಭ್ರಮಾಲೋಕ ಸೃಷ್ಟಿಯಾಗುತ್ತದೆ. ಇದರಿಂದ ಬಿಡುಗಡೆಗೊಳ್ಳಲು ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆ ನೆರವಾಗುತ್ತವೆ. ಮಕ್ಕಳು ವರ್ತಮಾನದ ಅರಿವಿನ ಮೂಲಕ ಉತ್ತಮ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಚಲನಚಿತ್ರ, ಕಿರುತೆರೆ ನಟಿ ಯಮುನಾ ಶ್ರೀನಿಧಿ ಹೇಳಿದರು.
ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಎನ್.ಸಿ.ಸಿ., ಎನ್.ಎಸ್.ಎಸ್., ಅರಣ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ಕರ್ನಾಟಕ, ಗೋವಾ ರಾಜ್ಯ ಎನ್‌ಸಿಸಿ ಅಲ್ಯುಮಿನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕರಾವಳಿ ಸಾಮರ್ಥ್ಯ ಬ್ಯಾನರ್ ಅಡಿಯಲ್ಲಿ ವನಮಹೋತ್ಸವ, ಡ್ರೋನ್ ತರಬೇತಿ, ಮಾದಕ ವಸ್ತುಗಳ ಜಾಗೃತಿ ಹಾಗೂ ಆಪರೇಷನ್ ಸಿಂದೂರ ಕುರಿತು ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪಿಎಸ್‌ಐ ಸುನೀಲ ಹುಲ್ಲೋಳ್ಳಿ ಮಾತನಾಡಿ, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಅಕ್ರಮ ಬಳಕೆ ಪ್ರಕರಣಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗಳು ಇಂತಹ ಚಟುವಟಿಯಿಂದ ದೂರವಿರಬೇಕು ಎಂದರು.
ಎನ್‌ಸಿಸಿ ಅಧಿಕಾರಿ ಹರಿಪ್ರಸಾದ ಸ್ವಾಗತಿಸಿದರು. ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಅಧಿಕಾರಿ ಗೌತಮ ಎಚ್.ಜಿ. ಅರಣ್ಯಾಧಿಕಾರಿ ಜಗದೀಶ ದೇವಾಡಿಗ ಉಪಸ್ಥಿತರಿದ್ದರು. ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ ಅಧ್ಯಕ್ಷತೆವಹಿಸಿದ್ದರು.ವಿಜೇತರು:
ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಪಿ.ಎಂ. ಪ್ರೌಢಶಾಲೆ ರಕ್ಷಿತ್, ಜೈಹಿಂದ್ ಪ್ರೌಢಶಾಲೆಯ ಶ್ರೇಯಾ ಎಸ್. ನಾಯ್ಕ, ಜಿಸಿ ಪಿಯುಸಿ ಕಾಲೇಜಿನ ನಿಷ್ಮಾ, ಹಿಮಾಲಯ ಕಾಲೇಜಿನ ಅನನ್ಯಾ ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶಾಲ್ ಬಿ. ಗೌಡರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.