ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಸಿದ್ಧ ಶ್ರೀರಂಗನಾಥ ದೇವಾಲಯ, ಶ್ರೀಲಕ್ಷ್ಮಿ ನರಸಿಂಹ ಹಾಗೂ ಶ್ರೀಕೋದಂಡ ರಾಮ ದೇವರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಬೃಂದಾವನ ನಂತರ ಈಶ್ವರ, ಲಕ್ಷ್ಮಿದೇವಿ, ಸುಬ್ರಮಣ್ಯಸ್ವಾಮಿ, ಜ್ಯೋತಿರ್ ಮಹೇಶ್ವರ ಸ್ವಾಮಿ ಹಾಗೂ ಆಂಜನೇಯ ಸೇರಿದಂತೆ ಒಟ್ಟು 9 ದೇವರುಗಳ ಉತ್ಸವದ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಜರುಗಿತು.
ವಿಶೇಷತೆಯೊಂದಿಗೆ ರಥದಲ್ಲಿ ದೇವರುಗಳ ಮೂರ್ತಿ ಪ್ರತಿಸ್ಥಾಪಿಸಿ ವಿವಿಧ ರೀತಿಯ ಹೂಗಳಿಂದ ಬೃಂದಾವನಾಕಾರದಲ್ಲಿ ಕಟ್ಟಿ ಅದಕ್ಕೆ ಅಲಂಕರಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಿ ನೋಡುವ ಭಕ್ತರ ಕಣ್ಮನ ಸೆಳೆಯುವಂತೆ ಮಾಡಲಾಗಿತ್ತು.ಕಾರ್ತಿಕ ಮಾಸದ ಸೋಮವಾರದ ತುಳಸಿ ಪೂಜೆಯಂದು ಒಂದೇ ದಿನದಲ್ಲಿ 9 ದೇವರುಗಳ ಮೂರ್ತಿಗಳ ಪ್ರತಿಸ್ಥಾಪಿಸಿ ಉತ್ಸವ ನಡೆಯುವುದು, ಮಂಗಳವಾದ್ಯದೊಂದಿಗೆ ಮನೆ ಬಾಗಿಲಿಗೆ ಬಂದ ಬೃಂದಾವನ ದೇವರುಗಳಿಗೆ ಹಣ್ಣು ಕಾಯಿ ಹೊಡೆದು ಆರತಿ ಪ್ರಸಾದ ವಿತರಣೆ ನಡೆಯಿತು.
ವಿದೇಶಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ: ಆಲಂಗೂರು ಮಂಜುನಾಥ್
ರಾಜ್ಯದಲ್ಲಿ ಮಾತ್ರವಲ್ಲ. ವಿದೇಶಗಳಲ್ಲಿಯೂ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಅಭಿಮಾನ ಮೆರೆಯುತ್ತಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ತಿಳಿಸಿದರು.
ಕನ್ನಡಿಗರು ನಮ್ಮ ನಾಡು-ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಂಡು ಹೆಚ್ಚು ವಾಸ ಮಾಡುತ್ತಿದ್ದಾರೆ. ಅಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನಮಸ್ಕರಿಸುವ ಪರಿಪಾಠವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಕನ್ನಡ ಉಪನ್ಯಾಸಕರಾದ ಮೂರ್ತಿ, ಇತಿಹಾಸ ವಿಭಾಗದ ರವಿ, ದೈಹಿಕ ಶಿಕ್ಷಣ ನಿರ್ದಶಕರಾದ ಡಾ. ಶ್ರೀನಿವಾಸ್ ಮಾತನಾಡಿದರು. ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.