ಮಂಗಳೂರು: ಡೆಂಘೀ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಬಾಲಕನ ಅಂಗಾಂಗ ಹಾಗೂ ದೇಹ ದಾನ ಮಾಡುವ ಮೂಲಕ ಆತನ ಹೆತ್ತವರು ಹಲವರ ಬಾಳಿಗೆ ಬೆಳಕಾಗಲು ಅವಕಾಶ ಕಲ್ಪಿಸಿ ಸಾರ್ಥಕತೆ ಮೆರೆದಿದ್ದಾರೆ. ಮೃತ ಬಾಲಕನನ್ನು ಅತ್ತಾವರದ ಅಲ್ಫೋನ್ಸ್ ಡಿಸೋಜಾ ಹಾಗೂ ಸೋನಿಯಾ ಡಿಸೋಜಾ ದಂಪತಿ ಪುತ್ರ, 8 ನೇ ತರಗತಿಯ ವಿದ್ಯಾರ್ಥಿ ಆಶಿಸ್ ಡಿಸೋಜಾ (13) ಎಂದು ಗುರುತಿಸಲಾಗಿದೆ. ಡೆಂಘೀ ಜ್ವರದಿಂದ ಬಳಲುತ್ತಿದ್ದ ಆಶಿಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿರುವಂತೆಯೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಸದಾ ಚುರುಕುತನದಿಂದ ಇದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸದಸ್ಯನಾಗಿದ್ದರು.