ಕನ್ನಡಪ್ರಭ ವಾರ್ತೆ ಹೊಸದುರ್ಗ
ಗ್ರಾಮೀಣ ಪ್ರದೇಶದಲ್ಲಿ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಸದ್ಗುರು ಪ್ರದೀಪ್ ಹೇಳಿದರು.ತಾಲೂಕಿನ ಕಸಬಾ ಹೋಬಳಿ ಜೋಡಿ ತುಂಬಿನಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದ ಚಿಣ್ಣರ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಗ್ರಾಮೀಣ ಪ್ರತಿಭೆಗಳ ಮಹತ್ವದ ಸಾಧನೆ ಇದೆ. ಡಾ.ಅಂಬೇಡ್ಕರ್, ಅಬ್ದುಲ್ ಕಲಾಂ ರಂತವರು ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಅದ್ಭುತ ಪ್ರತಿಭೆಗಳು ಇವರ ಸಾಧನೆ ಜಗತ್ತಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿದ್ದೆ ಆದರೆ ಪ್ರಪಂಚದಲ್ಲಿಯೇ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ ಬೆಳೆಯಲು ಈ ಪ್ರತಿಭೆಗಳು ಮಹತ್ತರ ಪಾತ್ರ ವಹಿಸುತ್ತಾರೆ ಎಂದರು.
ಮಕ್ಕಳಿಗೆ ಬೇಕಾದ ಕ್ಷೇತ್ರಗಳಲ್ಲಿ ತಂದೆ ತಾಯಿಗಳು ಅವರನ್ನು ಬೆಳೆಸಬೇಕು. ಬರೀ ಅಂಕದ ಶಿಕ್ಷಣ ಪಡೆಯುವುದರ ಜೊತೆಗೆ ತಂದೆ-ತಾಯಿ ಗುರು ಹಿರಿಯನ್ನು ಗೌರವಿಸುವಂತಹ ಮೌಲ್ಯಾಧಾರಿತ ಶಿಕ್ಷಣ ಅತ್ಯವಶ್ಯಕವಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಿಗುತ್ತಿರುವುದು ಅತ್ಯಂತ ಸಂತೋಷದಾಯಕ ಸಂಗತಿ ಎಂದರು.ಮುಖಂಡ ಗೂಳಿಹಟ್ಟಿ ಕೃಷ್ಣಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಜ್ಯೋತಿಷ್ ಚೌದರಿ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಯೋಗೀಶ್ ಮೆಟಿಕುರ್ಕೆ, ಗ್ರಾಪಂ ಸದಸ್ಯ ರಾಜಾಹುಲಿ, ಮುಖ್ಯ ಶಿಕ್ಷಕ ಕೇಶವಮೂರ್ತಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಲ್ಲೇಶಪ್ಪ, ಶಿಕ್ಷಕರ ಸಂಘದ ನಿರ್ದೇಶಕ ಅಶೋಕ್ ಬಿ ಕೆ, ಶಿಕ್ಷಕರಾದ ಶಿವಣ್ಣ ಕೆ, ಜಯಪ್ಪ, ಕವಿತಾ, ರತ್ನಮ್ಮ, ಮಹೇಶ್ ಎನ್, ಶಿವಮೂರ್ತಿ, ಎಂ.ಟಿ.ಉಮೇಶ್, ವೀರಭದ್ರಪ್ಪ, ತುಂಬಿನಕೆರೆ ಬಸವರಾಜ್, ಟಿ.ಸಿ.ಶಿವಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ರವಿ, ಜಿ.ರಾಜಪ್ಪ, ಗಿರೀಶ್ ಮಲ್ಲಿಕಾರ್ಜುನ್, ಟಿ.ಎ.ಬಸವರಾಜಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.