ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಬೆಂಗಳೂರಿನ ಸುಬ್ರಮಣ್ಯ ನಗರದ ದೊಡ್ಡ ಕಲ್ಲಸಂದ್ರದಲ್ಲಿ ಶನಿವಾರ ರಾತ್ರಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಬರ್ಭರ ಹತ್ಯೆ ನಡೆದಿದ್ದು, ಈ ಘಟನೆ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ತೀರ್ಥಹಳ್ಳಿ ಪಟ್ಟಣದಲ್ಲಿರುವ ಮೃತರ ಗಂಡನ ಮನೆ ಮತ್ತು ತಾಲೂಕಿನ ಸಾಲೂರಿನಲ್ಲಿರುವ ಹೆತ್ತವರ ಮನೆಗಳಲ್ಲಿ ದುಃಖ ಮಡುಗಟ್ಟಿದೆ.
ತಾಲೂಕಿನ ಸಾಲೂರು ಸಮೀಪದ ಕಲ್ಕಟ್ಟೆ ಕುಟುಂಬದಲ್ಲಿ ಜನಿಸಿದ ಮೃತರ ಗಂಡನ ಮನೆ ಪಟ್ಟಣ ಸಮೀಪದ ತುಡ್ಕಿಯಾಗಿದ್ದು, 2006 ರಲ್ಲಿ ವಿವಾಹವಾಗಿರುವ ಅವರಿಗೆ 10ನೇ ತರಗತಿಯಲ್ಲಿ ಓದುತ್ತಿರುವ ಓರ್ವ ಮಗನಿದ್ದಾನೆ. ಪಟ್ಟಣ ಸಮೀಪದ ತುಡ್ಕಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆ ಗೃಹಪ್ರವೇಶವನ್ನು ಎರಡು ವಾರದ ಹಿಂದೆ ವಿಜಯದಶಮಿಯ ಮುನ್ನಾದಿನವಷ್ಟೇ ನೆರವೇರಿಸಿದ್ದು, ಅ.26 ರಂದು ಬೆಂಗಳೂರಿಗೆ ತೆರಳಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.ಮೃತರ ಈ ಪ್ರಕರಣಕ್ಕೆ ಸಂಭಂದಿಸಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮೃತರ ಗಂಡನ ತಾಯಿ ಪ್ರೇಮಾ ಜಗದೀಶ್ ಅವರು, ಪ್ರತಿಮಾ ತನ್ನ ಗಂಡನಿಂದ ದೂರವಿದ್ದಳು. ವಿವಾಹ ವಿಚ್ಛೇದನವಾಗಿತ್ತು, ಮುಂತಾದ ಅವಾಸ್ತವಿಕ ವಿಚಾರಗಳು ನಮಗೆ ತುಂಬಾ ನೋವನ್ನು ತಂದಿದೆ ಎಂದಿದ್ದಾರೆ. ಮೃತರ ಅಂತ್ಯಕ್ರಿಯೆ ಇಲ್ಲಿಯೇ ನಡೆಯಲಿದ್ದು, ಶವವನ್ನು ಭಾನುವಾರ ಸಂಜೆ ಇಲ್ಲಿಗೆ ತರಲಾಗುವುದು ಎಂದು ಕುಟುಂಬದ ಸಮೀಪವರ್ತಿಗಳು ತಿಳಿಸಿದ್ದಾರೆ.
- - --05ಟಿಟಿಎಚ್ 01: ಪ್ರತಿಮಾ