ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಪದಾಧಿಕಾರಿಗಳ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾಯಾವತಿ ಅವರ ಜನ್ಮ ದಿನವನ್ನು ಜ.15ರಂದು ಸ್ಫೂರ್ತಿ ಮತ್ತು ಪ್ರೇರಣೆಯ ದಿನವಾಗಿ ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸೇರಿ ವಿಜೃಂಭಣೆಯಿಂದ ಅವರ ಜನ್ಮದಿನವನ್ನು ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.ಇತ್ತೀಚಿಗೆ ದಿ.ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸುದೀರ್ಘ ಅಧಿಕಾರ ಅವಧಿಯ ಸಿಎಂ ದಾಖಲೆ ಮುರಿದಿರುವುದು ಸಂತೋಷ ತರುವ ವಿಷಯವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೇರಲು ದಲಿತರು ಹಾಗೂ ಮುಸಲ್ಮಾನ ಮತಗಳು ಕಾರಣ. ಅವರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕೇ ಹೊರತು ಅವರಿಗೆ ಮೀಸಲು ಹಣವನ್ನೇ ಗ್ಯಾರಂಟಿ ಯೋಜನೆಗಳ ಜಾರಿ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡಿರುವುದು ಸಂವಿಧಾನ ವಿರೋಧಿ ಕೆಲಸವಾಗಿದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಚಲುವರಾಜು, ಜಿಲ್ಲಾ ಉಸ್ತುವಾರಿ ಗೋವಿಂದರಾಜು, ಜಿಲ್ಲಾ ಕಾರ್ಯದರ್ಶಿ ಜಿ.ಡಿ.ಗಂಗಾಧರ್, ತಾಲೂಕು ಉಸ್ತುವಾರಿ ಬಸ್ತಿ ಪ್ರದೀಪ್, ತಾಲೂಕು ಬಿ.ಎಸ್.ಪಿ ಅಧ್ಯಕ್ಷ ಬಿಲ್ಲೇನಹಳ್ಳಿ ನವೀನ್, ತಾಲೂಕು ಕಾರ್ಯದರ್ಶಿ ಚಿಕ್ಕಗಾಡಿಗನಹಳ್ಳಿ ಸಿ.ಜೆ ಪ್ರದೀಪ್, ತಾಲೂಕು ಬಿ.ವಿ.ಎಫ್ ಸಂಚಾಲಕ ನಂಜುಂಡಿ, ಮುಖಂಡರಾದ ಜಯಶೀಲಾ, ರಾಮಾಚಾರಿ,ದೇವಾನಂದ್, ಕಾರ್ತಿಕ್ ಸಾಕ್ಯ, ಕುಮಾರ್, ಗುರುಲಿಂಗಯ್ಯ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.