ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕಾರಿಪುರದಲ್ಲಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಹರಿಹಾಯ್ದರು.
ನಿಮ್ಮ ಹೊಂದಾಣಿಕೆಯಿಂದ ಕಾರ್ಯಕರ್ತರಿಗೆ ನಷ್ಟವಾಗಿದೆ. ನಿಮ್ಮಿಬ್ಬರಗೂ ಯಾವುದೇ ಸಿದ್ಧಾಂತ ಇಲ್ಲ. ಇದು ಸ್ವಾರ್ಥದ ರಾಜಕಾರಣವಾಗಿದೆ. ಶಿಕಾರಿಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ನಡೆದಿರಬಹುದು. ಎರಡು ಪಕ್ಷದ ಕಾರ್ಯಕರ್ತರನ್ನು ವಂಚಿಸಲಾಗಿದೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಮೂಢರ ಬೀದಿಬದಿ ಜಗಳ:
ಬಡವರಿಗೆ ಆಶ್ರಯ ಮನೆಗಳನ್ನು ನೀಡಿ:
ಆಶ್ರಯಮನೆಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿದ ಫಲವಾಗಿ 288 ಮನೆಗಳನ್ನು ಈಗಾಗಲೇ ಹಂಚಲಾಗಿದೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ವಸತಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ಆಗಸ್ಟ್ ತಿಂಗಳೋಳಗೆ 600 ಮನೆಗಳನ್ನು ಹಂಚಲಾಗುವುದು ಎಂದು ಭರವಸೆ ನೀಡಿದ್ದು, ಆದರೆ ಅಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳು ನೀಡದೇ ಹಂಚಬಾರದು. ಇವೆಲ್ಲ ಸೌಲಭ್ಯಗಳನ್ನು ನೀಡಿದ ನಂತರವೇ ಮನೆಗಳನ್ನು ವಿತರಿಸಬೇಕು ಎಂದರು.ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಹಿಂದೂಗಳನ್ನು ಹುಡುಕಿ ಕಗ್ಗೊಲೆ ಮಾಡುತ್ತಿದ್ದಾರೆ. ಹಿಂದುಗಳು ಯಾವ ತಪ್ಪು ಮಾಡಿದ್ದರು? ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಲ್ಲೆ, ಅತ್ಯಾಚಾರಗಳು ತಕ್ಷಣವೇ ನಿಲ್ಲಬೇಕು. ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು. ಭಾರತ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಶಂಕರ್‌ಗನ್ನಿ, ಎಂ.ಶಂಕರ್, ಮಹಾಲಿಂಗಶಾಸ್ತ್ರಿ, ಅ.ಮಾ.ಪ್ರಕಾಶ್, ಬಾಲು, ಚಿದಾನಂದ, ನಾಗರಾಜು, ಮೋಹನ್ ಮುಂತಾದವರು ಇದ್ದರು.ಪಾಲಿಕೆ ಚುನಾವಣೆ: ಸುಪ್ರೀಂ ಆದೇಶ ಪಾಲಿಸಿಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಆದೇಶ ಪಾಲನೆ ಮಾಡಿ ಕೂಡಲೇ ಪಾಲಿಕೆ ಚುನಾವಣೆ ನಡೆಸಬೇಕು. ಚುನಾವಣೆ ಆಯೋಗದ ಅಧಿಕಾರಿಗಳು ಚುನಾವಣೆ ನಡೆಸುವುದಾಗಿ ತಿಳಿಸಿದ್ದಾರೆ. ಪಾಲಿಕೆಯಲ್ಲಿ ಚುನಾಯಿತಿ ಪ್ರತಿನಿಧಿಗಳಿಂದಲೇ ಅಧಿಕಾರಿಗಳ ಆಡಳಿತದಿಂದ ಜನರು ನಲುಗಿ ಹೋಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳು ಇವೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿ ಕೂಡಲೇ ಚುನಾವಣೆ ನಡೆಸಬೇಕು ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಆಶ್ರಯಮನೆ ವಿತರಣೆಗೆ ಆಗ್ರಹಿಸಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸೌಲಭ್ಯಗಳ ಒದಗಿಸಲು ಆಗ್ರಹಿಸಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಒತ್ತಾಯಿಸಿ ಆ.13ರಂದು ದೈವಜ್ಞವೃತ್ತದಿಂದ, ದುರ್ಗಿಗುಡಿ, ನೆಹರು ರಸ್ತೆ, ಶಿವಪ್ಪನಾಯಕ ಪ್ರತಿಮೆ ಮೂಲಕ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪಾಲಿಕೆಗೆ ಮನವಿ ಸಲ್ಲಿಸಲಾಗುವುದು. ಸುಮಾರು 3000 ಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದು ತಿಳಿಸಿದರು.‘ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್ ಭಿಕ್ಷೆ ಎಂದ ಡಿಕೆಶಿ!’
ಸ್ವತಃ ಡಿ.ಕೆ.ಶಿವಕುಮಾರ್ ಅವರೇ ವಿಜಯೇಂದ್ರ ಅವರಿಗೆ ಕಾಂಗ್ರೆಸ್ಸಿನ ಭಿಕ್ಷೆಯಿಂದ ನೀನು ಶಾಸಕನಾಗಿ ಆಯ್ಕೆಯಾಗಿದ್ದೀಯ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಆಗಲಿ, ಅವರ ತಂದೆಯವರಾಗಲಿ ಅಥವಾ ಬಿಜೆಪಿಯವರಾಗಲಿ ಯಾವುದೇ ಪ್ರತ್ಯುತ್ತರವನ್ನು ನೀಡಿಲ್ಲ. ಹಾಗಾಗಿ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದ ಕೆ.ಎಸ್.ಈಶ್ವರಪ್ಪ,ಬಿ.ಎಸ್.ಯಡಿಯೂರಪ್ಪನವರು ಸ್ವಾರ್ಥಕ್ಕಾಗಿ ಈ ಹೊಂದಾಣಿಕೆ ಮಾಡಿಕೊಂಡಿರು ವುದನ್ನು ವಿರೋಧಿಸಿಯೇ ನಾನು ಚುನಾವಣೆಗೆ ನಿಂತಿದ್ದೆ. ಈಗ ಅದು ಬಹಿರಂಗಗೊಂಡಿದೆ ಎಂದು ವಾಗ್ದಾಳಿ ನಡೆಸಿದರು.