ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 9ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಉತ್ಸವ, ಬುದ್ಧ, ಬಸವ, ಅಂಬೇಡ್ಕರ್ ಪ್ರಸ್ತುತತೆ ವಿಚಾರಧಾರೆಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ, ರಾಷ್ಟ್ರೀಯ ಬುದ್ಧ ಶಾಂತಿ ಪ್ರಶಸ್ತಿ, ಶ್ರೀ ಜಗಜ್ಯೋತಿ ಬಸವೇಶ್ವರ ಕಾಯಕ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ತಳ ಸಮುದಾಯ, ಶೋಷಿತರು, ಮಹಿಳೆಯರಿಗೆ ಅವಕಾಶ ನೀಡಿ ಬದಲಾವಣೆಗೆ ಮುನ್ನುಡಿ ಬರೆದವರು ಬಸವಣ್ಣ ಎಂದು ತಿಳಿಸಿದರು.‘ಎಮ್ಮೆಗೊಂದು ಚಿಂತೆ, ಸಮಗಾರಗೊಂದು ಚಿಂತೆ, ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ, ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ, ಒಲ್ಲೆ ಹೋಗು. ಸೆರಗ ಬಿಡು ಮರುಳೆ...’ ಎನ್ನುವ ವೈರಾಗ್ಯದ ನುಡಿಗಳನ್ನಾಡಿದ ಅಕ್ಕ ಮಹಾದೇವಿ ತನ್ನ ಕೂದಲನ್ನೇ ವಸ್ತ್ರವಾಗಿ ಮಾಡಿಕೊಂಡ ವೈರಾಗ್ಯ ಮೂರ್ತಿ ಎಂದರು.
ಬೆಂಗಳೂರಿನ ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಚಿತ್ರನಟ, ಸಾಹಿತಿ ಡಾ.ಗುಣವಂತ ಮಂಜು ಮಾತನಾಡಿ, ಪ್ರತಿಯೊಬ್ಬರಲ್ಲೂ ಬುದ್ಧ, ಬಸವ, ಅಂಬೇಡ್ಕರ್ ಇರುತ್ತಾರೆ ಎಂದರು.
ಹದಡಿ ವಿದ್ಯಾವರಣ್ಯ ಯೋಗೇಶ್ವರ ಮಠದ ಶ್ರೀ ಮುರುಳಿಧರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮಲ್ಲೇಶ ಎನ್.ಕುಕ್ಕವಾಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನಕುಮಾರ ದಾಸಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಬೆಂಗಳೂರಿನ ಮಕ್ಕಳ ಆಸ್ಪತ್ರೆ ನಿಕಟ ಪೂರ್ವ ಎಂಡಿ, ಉದ್ಯಮಿ, ಸಾಹಿತಿ ಡಾ.ಎಸ್.ಅಕ್ಬರ್ ಬಾಷಾ, ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿ.ದ ಫಾರ್ಮಸಿ ವೈದ್ಯಾಧಿಕಾರಿ ಶಿವಾನಂದ ದಳವಾಯಿ, ಎಆರ್‌ಎಂ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಿ.ಅಂಜಿನಪ್ಪ, ಅಕಾಡೆಮಿ ವ್ಯವಸ್ಥಾಪಕ ಅಧ್ಯಕ್ಷ ಎಂ.ಸಂತೋಷಕುಮಾರ, ಯುವ ಸಾಹಿತಿ ಬಿ.ಎಲ್.ಗಂಗಾಧರ ನಿಟ್ಟೂರು ಇತರರು ಇದ್ದರು.
ಮಧ್ಯ ಕರ್ನಾಟಕ ದಾವಣಗೆರೆಗೆ ಅದರದ್ದೇ ಆದ ಹಿನ್ನೆಲೆ, ಮಹತ್ವ, ಸಾಧನೆ, ಇತಿಹಾಸವಿದೆ. ಬೆಣ್ಣೆ ನಗರಿ, ಬೆಣ್ಣೆ ದೋಸೆ ನಗರಿ ಅಂತಾ ಕರೆದು, ಊರಿನ ಸಾಧನೆ, ಕೊಡುಗೆಗಳನ್ನು ಮರೆಮಾಡುವ ಕೆಲಸವನ್ನು ಯೂರೂ ಸಹ ಮಾಡಬಾರದು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ನಾಗರಾಜ ಎಸ್.ಬಡದಾಳ್ ಮನವಿ ಮಾಡಿದರು.