ದೌರ್ಬಲ್ಯ ಕಳಚಿ ಮುನ್ನಡೆಯುವವನೇ ಬುದ್ಧ

KannadaprabhaNewsNetwork |  
Published : May 13, 2025, 11:49 PM IST
೧೩ಕೆಎಲ್‌ಆರ್-೩ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶ್ರೀ ಭಗವಾನ್ ಬುದ್ಧ ಜಯಂತಿ ದೀಪಬೆಳಗಿಸಿ ಪು?ರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗತ್ತಿನಲ್ಲಿ ಯಾವುದಾದರೂ ಧರ್ಮ ವೈಜ್ಞಾನಿಕ ರೀತಿಯಲ್ಲಿ ಇದೇ ವೈಚಾರಿಕವಾಗಿ ಒಪ್ಪಿಕೊಳ್ಳಬಹುದಾದ ಧರ್ಮ ಇದೆ ಅಂದರೆ ಅದು ಕೇವಲ ಬೌದ್ಧಧರ್ಮ ವಾಗಿದೆ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಹೇಳಿದ್ದಾರೆ. ಒಂದು ಧರ್ಮ ಎಂದರೆ ಕೇವಲ ಗುರುಗಳು ಹೇಳುವುದನ್ನು ಒಪ್ಪಿಕೊಳ್ಳುವುದಲ್ಲ ಅಥವಾ ಮೌಢ್ಯಗಳನ್ನು ನಂಬುವುದಲ್ಲ.ಆಲೋಚನೆ ಮಾಡುವುದು ಉತ್ತಮ.

ಕನ್ನಡಪ್ರಭ ವಾರ್ತೆ ಕೋಲಾರ ಬುದ್ಧ ಎಂದರೆ ಕೇವಲ ಹೆಸರಲ್ಲ. ಒಬ್ಬ ವ್ಯಕ್ತಿಯು ತನ್ನಲ್ಲಿರುವ ಎಲ್ಲಾ ದೌರ್ಬಲ್ಯಗಳನ್ನು ಕಳೆದುಕೊಂಡು ಮುಂದಿನ ಹಂತಕ್ಕೆ ಹೋಗುವುದೇ ಬುದ್ಧ. ಭಗವಾನ್‌ ಬುದ್ಧ ತಮ್ಮ ದೌರ್ಬಲ್ಯಗಳನ್ನು ಕಳೆದುಕೊಂಡು ಮುಂದಿನ ಹಂತಕ್ಕೆ ಬಂದು ಜಗತ್ತಿಗೆ ಬೆಳಕಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೀ ಭಗವಾನ್ ಬುದ್ಧ ಜಯಂತಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅತಿಥಿಗಳು ದೀಪಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ವೈಜ್ಞಾನಿಕ ಧರ್ಮ ಬೌದ್ಧಧರ್ಮ

ಜಗತ್ತಿನಲ್ಲಿ ಯಾವುದಾದರೂ ಧರ್ಮ ವೈಜ್ಞಾನಿಕ ರೀತಿಯಲ್ಲಿ ಇದೇ ವೈಚಾರಿಕವಾಗಿ ಒಪ್ಪಿಕೊಳ್ಳಬಹುದಾದ ಧರ್ಮ ಇದೆ ಅಂದರೆ ಅದು ಕೇವಲ ಬೌದ್ಧಧರ್ಮ ವಾಗಿದೆ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಹೇಳಿದ್ದಾರೆ. ಒಂದು ಧರ್ಮ ಎಂದರೆ ಕೇವಲ ಗುರುಗಳು ಹೇಳುವುದನ್ನು ಒಪ್ಪಿಕೊಳ್ಳುವುದಲ್ಲ ಅಥವಾ ಮೌಢ್ಯಗಳನ್ನು ನಂಬುವುದಲ್ಲ. ಬುದ್ಧರು ಹೇಳಿದಂತೆ ಓದುವುದು ಒಳ್ಳೆಯದು ಆದರೆ ಆಲೋಚನೆ ಮಾಡುವುದು ಉತ್ತಮ ಎಂದರು.

ಹೆಣ್ಣು ಹೊನ್ನು ಮಣ್ಣು ಇಂತಹ ವ್ಯಾಮೋಹಗಳಿಗೆ ಒಳಗಾಗುತ್ತಿದ್ದು ಪ್ರಸ್ತುತ ಅಧಿಕಾರವೂ ವ್ಯಾಮೋಹವಾಗಿ ಸೇರ್ಪಡೆಯಾಗುತ್ತಿದೆ ಉಲ್ಲವರೆ ಅಧಿಕಾರವನ್ನು ಅನುಭವಿಸುವಾಂತಗುತ್ತಿದ್ದಾರೆ ಒಟ್ಟಾರೆ ಬೌದ್ಧಧರ್ಮ ನಿಂತಿರುವುದು ಒಳ್ಳೆಯವನಾಗು, ಒಳ್ಳೆಯದನ್ನು ಮಾಡುವುದರಿಂದ ಮಾತ್ರ ಎಂಬ ತಳಹದಿಯ ಮೇಲೆ ಎಂದು ತಿಳಿಸಿದರು.ಬುದ್ಧ ಎಂದರೆ ಜ್ಞಾನ,ಅರಿವು

ಬೌದ್ಧಧರ್ಮದ ಗುರು ಪಾಂತೇಜಿ, ಬೌದ್ಧಧರ್ಮದ ಮಹತ್ವ ಬುದ್ಧರು ಅನುಸರಿಸುತ್ತಿದ್ದ ಮಾರ್ಗ ಅವರ ಜೀವನ ಚರಿತ್ರೆ ಅವರ ಪಂಚಶೀಲ ತತ್ವಗಳನ್ನು ತಿಳಿಸಿ ಬುದ್ಧ ಎಂದರೆ ಜ್ಞಾನ,ಅರಿವು, ಬುದ್ಧ ವಂದನ, ಬಗ್ಗೆ ಮಾಹಿತಿ ನೀಡಿದರು.

ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಏಷ್ಯದ ಹೆಚ್ಚಿನ ಭಾಗಗಳಲ್ಲಿ ಆಚರಿಸಲಾಗುವ ಪ್ರಾಥಮಿಕವಾಗಿ ಬೌದ್ಧ ಹಬ್ಬವಾಗಿದ್ದು, ಗೌತಮ ಬುದ್ಧನಾದ ಮತ್ತು ಬೌದ್ಧಧರ್ಮವನ್ನು ಸ್ಥಾಪಿಸಿದ ರಾಜಕುಮಾರ ಸಿದ್ಧಾರ್ಥ ಗೌತಮನ ಜನನವನ್ನು ಸ್ಮರಿಸಲಾಗುತ್ತದೆ .

ಮಹಾನ್ ಬುದ್ಧರು ಶಾಂತ ಪ್ರಿಯರು ಆದ್ದರಿಂದಲೇ ಬುದ್ಧನ ಜನ್ಮದಿನ ಹೌದು ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದಲ್ಲಿಯೂ ಇಂದೆ ಎರಡು ದೇಶದವರು ಶಾಂತಿ ಸಭೆ ನಡೆಸಿ ಸಂಧಾನ ಮಾಡಿಕೊಂರುವುದು ವಿಶೇಷವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಕೊತ್ತೂರು ಡಾ.ಜಿ.ಮಂಜುನಾಥ್,ವಿಧಾನ ಪರಿ?ತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ,ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಸದಸ್ಯರಾದ ರಾಮಯ್ಯ, ಅರಿವು ಶಿವಪ್ಪ,ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಮುಖಂಡರಾದ ವಿಜಿಕುಮಾರ್, ಚಂದ್ರಶೇಖರ್, ವೆಂಕಟಾಚಲಪತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ