ವ್ಯಕ್ತಿತ್ವ ವಿಕಸನಕ್ಕೆ ಬುದ್ಧನ ಪಂಚಶೀಲ ತತ್ವಗಳು ಪೂರಕ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : May 13, 2025, 11:50 PM IST
13ಕೆಎಂಎನ್ ಡಿ24 | Kannada Prabha

ಸಾರಾಂಶ

ಸುಳ್ಳು, ಮೋಸ, ಕಳ್ಳತನ, ವ್ಯಭಿಚಾರ, ಮದ್ಯಪಾನ, ಪ್ರಾಣಹತ್ಯೆ ಹೀಗೆ ಮನಸ್ಸಿಗೆ ಹಾನಿ ಉಂಟುಮಾಡುವ ಚಟುವಟಿಕೆಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ. ದ್ವೇಷ ಅಸೂಯೆಗಳು ತುಂಬಿರುವ ಜನರು ತಮಗೂ ಹಾನಿಮಾಡಿಕೊಂಡು ತನ್ನ ಸುತ್ತಲಿನ ಪರಿಸರಕ್ಕೂ ಕೂಡ ಹಾನಿ ಉಂಟು ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವ್ಯಕ್ತಿತ್ವ ವಿಕಸನಕ್ಕೆ ಬುದ್ಧನ ಪಂಚಶೀಲ ತತ್ವಗಳು ಪೂರಕವಾಗಿವೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದಲ್ಲಿ ಜೈ ಭೀಮ್ ದಲಿತ ಜಾಗೃತಿ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಬುದ್ಧ ಪೂರ್ಣಿಮಾ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಳ್ಳು, ಮೋಸ, ಕಳ್ಳತನ, ವ್ಯಭಿಚಾರ, ಮದ್ಯಪಾನ, ಪ್ರಾಣಹತ್ಯೆ ಹೀಗೆ ಮನಸ್ಸಿಗೆ ಹಾನಿ ಉಂಟುಮಾಡುವ ಚಟುವಟಿಕೆಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ. ದ್ವೇಷ ಅಸೂಯೆಗಳು ತುಂಬಿರುವ ಜನರು ತಮಗೂ ಹಾನಿಮಾಡಿಕೊಂಡು ತನ್ನ ಸುತ್ತಲಿನ ಪರಿಸರಕ್ಕೂ ಕೂಡ ಹಾನಿ ಉಂಟು ಮಾಡುತ್ತಾರೆ. ಹಾಗಾಗಿ ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಜೀವನ ನಡೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜೈ ಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ಸಮಿತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದ್ದೇವೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬುದು ನಮ್ಮಸಮಿತಿಯ ಧ್ಯೇಯವಾಗಿದೆ ಎಂದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಿ.ಎ.ಪ್ರಶಾಂತ್, ಕೆ.ಎಂ.ಯಶವಂತ್ ಕುಮಾರ್, ಎಸ್.ಮಧುರಾ ಅವರನ್ನು ಅಭಿನಂದಿಸಲಾಯಿತು. ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಪದಾಧಿಕಾರಿಗಳಾದ ಅಣ್ಣೂರು ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ, ಜಾಣಪ್ಪ, ಅಂಬರಹಳ್ಳಿ ಸ್ವಾಮಿ, ಮುಡೀನಹಳ್ಳಿ ತಿಮ್ಮಯ್ಯ, ಕೆ. ಶೆಟ್ಟಹಳ್ಳಿ ನಾಗರಾಜು, ಮಾಲಯ್ಯ, ರಾಮಣ್ಣ, ದೇವರಾಜು, ಟೈಲರ್ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.

ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ಮಳವಳ್ಳಿ: ತಾಲೂಕಿನ ಕಿರುಗಾವಲು ಮತ್ತು ವಡಕೆಪುರದ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಮೇ 15 ಮತ್ತು 16ರಂದು ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮೇ 15ರಂದು ಕೇಂದ್ರ ವ್ಯಾಪ್ತಿಯ ಕಿರುಗಾವಲು, ದೊಡ್ಡೇಗೌಡನಕೊಪ್ಪಲು, ಚಿಕ್ಕಮಾಳಿಗೆಕೊಪ್ಪಲು, ನೆಣನೂರು, ಸಂಶೆಟ್ಟಿಪುರ, ಚಿಕ್ಕಮುಲಗೂಡು, ಮಿಕ್ಕೆರೆ, ಕಲ್ಕುಣಿ, ದೋರನಹಳ್ಳಿ, ಹಿಟ್ಟನಹಳ್ಳಿಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚರಣೆಯಾಗಲಿದೆ.

16ರಂದು ತಾಲೂಕಿನ ವಡಕೆಪುರ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಅವ್ವೇರಹಳ್ಳಿ, ಸುಜ್ಜಲೂರು, ನಂಜೇಗೌಡನದೊಡ್ಡಿ, ವಡಕೆಪುರ, ಚನ್ನಪಿಳ್ಳೆಕೊಪ್ಪಲು, ಹಣಕೊಳ, ಉಪ್ಪನಗೇರಿಕೊಪ್ಪಲು, ಗಣಗನೂರು, ರಾವಣಿ, ರಾಗಿಬೊಮ್ಮನಹಳ್ಳಿ, ಹಂಗ್ರಾಪುರ, ಶಿರಮಹಳ್ಳಿ, ಲಕ್ಷ್ಮಿಪುರದದೊಡ್ಡಿ, ಕ್ಯಾತನಹಳ್ಳಿ, ಯಮದೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚರಣೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ