- ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಬುದ್ಧ ಪೂರ್ಣಿಮಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬುದ್ಧನ ಸಂದೇಶಗಳು ಅಮರ. ಮಹತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವೈಚಾರಿಕ ಚಿಂತನೆ ಗಳನ್ನು ಪಾಲಿಸುವವರು ಬುದ್ಧನ ಅನುಯಾಯಿಗಳಾಗುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪರಿಶಿಷ್ಟ ಜಾತಿ, ಪಂಗಡ ಗೌತಮಬುದ್ಧ ಸಹಕಾರ ಸಂಘದಿಂದ ಗುರುವಾರ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಬುದ್ಧನ ಸಂದೇಶಗಳು ಅಮರ, ಅವುಗಳನ್ನು ನಮ್ಮ ಜೀವನದಲ್ಲಿ ಅಳ ವಡಿಸಿಕೊಂಡು ಪ್ರಜ್ಞಾವಂತ ಹಾಗೂ ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಬೇಕಿದೆ.ಬುದ್ಧನ ಬೋಧನೆಗಳು ಯಾವುದೇ ಒಂದು ಪ್ರದೇಶ ಅಥವಾ ಜನಾಂಗಕ್ಕೆ ಸೀಮಿತವಾದುದಲ್ಲ ಜಗತ್ತಿನಲ್ಲಿ ಶಾಂತಿ, ಸಹೋದರತ್ವ, ಸಹಬಾಳ್ವೆಯ ಜೀವನ ಬಯಸುವವರು ಬುದ್ಧನ ಮಾರ್ಗವನ್ನು ಪಾಲಿಸಬೇಕು ಎಂದರು.
ಬುದ್ಧನ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಜ್ಞಾನ ಸಂಪತ್ಭರಿತವಾಗುತ್ತದೆ ಹಾಗೂ ನೆಮ್ಮದಿ ಬದುಕನ್ನು ನಡೆಸಲು ಸಾಧ್ಯವಾಗಲಿದೆ. ಪ್ರತಿಯೊಂದು ಜೀವಿಯನ್ನು ಪ್ರೀತಿಸುವ, ರಕ್ಷಿಸುವ ಮನೋಭಾವ ಬುದ್ಧನ ಮಾರ್ಗ ಅನುಸರಿಸುವುದರಿಂದ ಬರಲಿದ್ದು ಬುದ್ಧನನ್ನು ಪೂಜಿಸುವುದಕ್ಕಿಂತ ಅವನ ಬೋಧನೆಗಳನ್ನು ತಿಳಿದು ವಿಚಾರ ವಂತರಾಗಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಮಾತನಾಡಿ, ಸತ್ಯ ಹಾಗೂ ದುಃಖದ ಕಾರಣಗಳನ್ನು ಹುಡುಕುವ ಸಲುವಾಗಿ ಸುಖ ಭೋಗಗಳು, ರಾಜ್ಯವನ್ನು ಬಿಟ್ಟು ಸನ್ಯಾಸಿಯಾಗಿ ಧ್ಯಾನಕ್ಕೆ ಕುಳಿತವರು. ಅವರ ಹುಟ್ಟು, ಜ್ಞಾನೋದಯ ಹಾಗೂ ಮರಣ ಹುಣ್ಣಿಮೆ ದಿನದಂದೆ ಸಂಭವಿಸಿರುವುದು ವಿಸ್ಮಯಕಾರಿಯಾಗಿದೆ ಎಂದು ತಿಳಿಸಿದರು.ಹುಣ್ಣಿಮೆ ಪೂರ್ಣತೆಯ ಸಂಕೇತ ಬುದ್ಧ. ಅವರು ಪರಿಪೂರ್ಣತೆಯನ್ನು ಹೊಂದಿದವರು ಜಗತ್ತಿನ ಸತ್ಯದ ಬಗ್ಗೆ ಅರಿತು ದುಃಖದಲ್ಲಿರುವವರಿಗೆ ಸುಖದ ದಾರಿ ತೋರಿಸಿಕೊಟ್ಟವರು. ಅವರನ್ನು ದೇವರೆಂದು ಪೂಜಿಸುವುದಕ್ಕಿಂತ ಜೀವನ ಮಾರ್ಗದರ್ಶಕರೆಂದು ಪೂಜಿಸುವುದು ಉತ್ತಮ ಎಂದರು.ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಬುದ್ಧನು ಕೇವಲ ಒಂದು ಧರ್ಮಕ್ಕೆ ಸೀಮಿತ ರಾದವರಲ್ಲ, ಅವರು ಜಗತ್ತಿನ ಬೆಳಕು. ಸತ್ಯ ಬೋಧನೆಗಳಿಂದ ಏಷ್ಯಾದೆಲ್ಲೆಡೆ ಅವರ ಅನುಯಾಯಿಗಳಿದ್ದು ಬುದ್ಧನು ತನ್ನನ್ನು ದೇವರು ಅಥವಾ ದೇವದೂತನೆಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ ಎಂದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಬುದ್ಧರ ವಿಚಾರಧಾರೆಗಳನ್ನು ತಿಳಿದವರು ಜೀವನವನ್ನು ಸುಲಭ ಮಾರ್ಗದಲ್ಲಿ ಹಾಗೂ ಸುಖಮಯದಿಂದ ನೆಮ್ಮದಿ ಜೀವನವನ್ನು ಸಾಗಿಸುವರು, ಪ್ರತಿಯೊಬ್ಬರೂ ಅವರ ಅನುಯಾಯಿ ಗಳಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಹಂಪಯ್ಯ, ನಿರ್ದೇಶಕರಾದ ನಾಗರಾಜ್, ಗಂಗಾಧರ, ಪರಮೇಶ್ವರ್, ಮುಖಂಡರಾದ ಹರೀಶ್ ಮಿತ್ರ, ರವೀಶ್ ಕ್ಯಾತನಬೀಡು, ಬಿಳೇಕಲ್ಲು ಬಾಲಕೃಷ್ಣ, ಗುರುಶಾಂತಪ್ಪ, ಶಹಾಬುದ್ದೀನ್, ಕಬ್ಬಿಕೆರೆ ಮೋಹನ್‌ಕುಮಾರ್ ಇದ್ದರು.--
ಬುದ್ಧನ ಮಾನವೀಯ ಸಂಕೇತಗಳು ವಿಶ್ವಕ್ಕೆ ಮಾದರಿ : ರಾಧಾಕೃಷ್ಣಚಿಕ್ಕಮಗಳೂರು: ಗೌತಮ ಬುದ್ಧ ಪರಿತ್ಯಾಗಿಯಾದವರು. ಪ್ರಕೃತಿ ನಡುವಿನ ನೈಸರ್ಗಿಕ ಬದುಕನ್ನು ತಮ್ಮಲ್ಲಿ ಅಳವಡಿಸಿಕೊಂಡು ಪ್ರಪಂಚಕ್ಕೆ ಸಂದೇಶ ಕೊಟ್ಟವರು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಹೇಳಿದರು.ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಭಾವಚಿತ್ರಕ್ಕೆ ಗುರುವಾರ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದೇಶದ ಪ್ರಧಾನಿಗಳು ವಿದೇಶಗಳಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಬುದ್ಧ ನಾಡಿನವರೆಂದು ಹೆಮ್ಮೆ ಯಿಂದ ಹೇಳುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬುದ್ಧನ ತತ್ವ, ಸಂದೇಶ ಗಳನ್ನು ಯಥಾವತ್ತಾಗಿ ಸಂವಿಧಾನದಡಿ ಜಾರಿಗೊಳಿಸಿದರೆ ಭಾರತ ಪ್ರಬುದ್ಧವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರನೂತನ. ಅವರ ಮಾನವೀತೆಯ ಸಂದೇಶ ಇಡೀ ವಿಶ್ವಕ್ಕೆ ಅನ್ವಯ. ಬುದ್ದನು ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆಯ ಪ್ರತೀಕ. ಸೌಹಾರ್ದ, ಸಹಾನು ಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಪೂರ್ತಿನೀಡಿದ್ದಾರೆ ಎಂದರು.
ದಾರ್ಶನಿಕ, ವಿರಾಗಿ ಭಗವಾನ್ ಗೌತಮ ಬುದ್ದರ ಆದರ್ಶ ನಾವಿಂದು ಅಳವಡಿಸಿಕೊಳ್ಳಬೇಕು. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡಲಿವೆ ಎಂದ ಅವರು, ಸಕಲ ಜೀವರಾಶಿಗಳು ಒಂದೇ ಎಂಬ ಮನೋಕಲ್ಪನೆ ಹೊಂದಿದ ಮಹತ್ಮರು ಎಂದು ತಿಳಿಸಿದರು.ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ರಾಜಮನೆತನದ ಕುಟುಂಬದ ಜನಿಸಿದ ಭಗವಾನ್ ಬುದ್ಧರು, ಹೊರಗಿನ ಪ್ರಪಂಚದ ಅರಿವು ಕಂಡಿರಲಿಲ್ಲ. ಸಮಯ ಕಳೆದಂತೆ ಒಂದೊಮ್ಮೆ ರಾಜ್ಯದಲ್ಲಿ ಸಂಚಾರ ವೇಳೆಯಲ್ಲಿ ಜನ ಸಾಮಾನ್ಯರ ಸಂಕಟ, ಅನಾರೋಗ್ಯ, ವೃದ್ಧಾಪ್ಯ ಮತ್ತು ಸಾವು, ವಾಸ್ತವ ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದರು ಎಂದರು.
ಬಿಎಸ್ಪಿ ತಾಲೂಕು ಅಧ್ಯಕ್ಷ ಎಚ್.ಕುಮಾರ್, ವಿಶ್ವಕ್ಕೆ ಶಾಂತಿ, ಬೋಧನೆ, ಅಹಿಂಸೆ ಸಾರಿದ ಗೌತಮ ಬುದ್ಧರ ಸಂದೇಶ ಪ್ರಸ್ತುತ ಜಗತ್ತಿಗೆ ಅವಶ್ಯ. ಪ್ರತಿಯೊಬ್ಬರು ಜೀವನದಲ್ಲಿ ಬುದ್ಧನ ಚಿಂತನೆ ಅಳವಡಿಸಿಕೊಂಡರೆ ಎಂತಹ ಕಷ್ಟವನ್ನು ಎದುರಿಸಲು ಮುಂದಾಗಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪಕ್ಷದ ಉಡುಪಿ-ಚಿಕ್ಕಮಗಳೂರು ಸಂಯೋಜಕ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ತಾಲ್ಲೂಕು ಉಪಾಧ್ಯಕ್ಷ ಸಿದ್ದಯ್ಯ, ಕಾರ್ಯದರ್ಶಿ ಆರ್.ವಸಂತ್, ಖಜಾಂಚಿ ರತ್ನ, ಮುಖಂಡ ಗಿರೀಶ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 23 ಕೆಸಿಕೆಎಂ 2ಚಿಕ್ಕಮಗಳೂರಿನ ಬಿಎಸ್ಪಿ ಕಾರ್ಯಾಲಯದಲ್ಲಿ ಗುರುವಾರ ಬುದ್ಧ ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಕೆ.ಟಿ. ರಾಧಾಕೃಷ್ಣ, ಕೆ.ಬಿ. ಸುಧಾ, ಕುಮಾರ್, ಗಂಗಾಧರ್ ಇದ್ದರು.ಪೋಟೋ ಫೈಲ್ ನೇಮ್ 23 ಕೆಸಿಕೆಎಂ 1ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಎಂ.ಎಲ್. ಮೂರ್ತಿ, ಬಸವರಾಜ್, ಮರ್ಲೆ ಅಣ್ಣಯ್ಯ, ರವೀಶ್ ಕ್ಯಾತನಬೀಡು, ಗುರುಶಾಂತಪ್ಪ ಇದ್ದರು.