ರಾಮನಗರ: ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಸೌಹಾರ್ದ ಕರ್ನಾಟಕ ವಿಶ್ವ ಮಾನವ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಹಾತ್ಮನನ್ನು ಸ್ಮರಿಸಿ ಗೌರವ ಸಲ್ಲಿಸಿದರು.
ನಾಡಿನ ಸೌಹಾರ್ದ ಕದಡುತ್ತಿರುವ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಂಘಟನೆಗಳ ಮುಖಂಡರು, ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಿಸಿದರು.
ಈ ವೇಳೆ ಮಾತನಾಡಿದ ಅವೇರಹಳ್ಳಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಮಾಜದಲ್ಲಿ ಸೌಹಾರ್ದ ಜೀವಂತವಾಗಿದ್ದಾಗ ಮಾತ್ರ ಜನ ಶಾಂತಿ-ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.ವಿಶ್ವ ಮಾನವ ವೇದಿಕೆ ಸಮನ್ವಯ ಸಮಿತಿ ವೇದಿಕೆ ಜಿಲ್ಲಾ ಸಂಚಾಲಕ ಬಿ.ಬಿ. ರಾಘವೇಂದ್ರ ಮಾತನಾಡಿ, ಪ್ರಪಂಚದಲ್ಲಿ ಮನುಷ್ಯಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಗಾಂಧೀಜಿ ಅವರು ಸಾರಿದ ಸೌಹಾರ್ದದ ಮೌಲ್ಯಗಳನ್ನು ಸಮಾಜ ಅಳವಡಿಸಿಕೊಳ್ಳಬೇಕು. ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಸಹೋದರರಂತೆ ಬದುಕ ಬೇಕು ಎಂದರು.
ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಸಿ.ಆರ್.ನಾಗೇಶ್, ಸಿಐಟಿಯು ಯೋಗೇಶ್, ದಸಂಸ ಸಂಚಾಲಕ ಪುನೀತ್‌ರಾಜ್, ಮುಖಂಡರಾದ ಮೈಕೊ ಮಂಜುನಾಥ್, ರಹಮತ್, ಅಶೋಕ್, ಪುಷ್ಪಲತಾ, ಇಬ್ರಾಹಿಂ, ಭಾಗ್ಯಮ್ಮ, ಸಾವಿತ್ರಮ್ಮ ಮತ್ತಿತರರು ಹಾಜರಿದ್ದರು.31ಕೆಆರ್ ಎಂಎನ್ 8.ಜೆಪಿಜಿ