ಆತ್ಮವಿಶ್ವಾಸದ ಬದುಕು ಕಟ್ಟಿಕೊಳ್ಳಿ

KannadaprabhaNewsNetwork | Published : Apr 13, 2025 2:04 AM

ಸಾರಾಂಶ

ಒಳ್ಳೆಯ ವಿಚಾರ, ಸಂದೇಶ, ಸಮಾಜಕ್ಕೆ ನೀಡುವಂತಹ ಆತ್ಮವಿಶ್ವಾಸದ ಬದುಕು ನಮ್ಮದಾಗಬೇಕು. ಏನೇ ಸಮಸ್ಯೆ ಬಂದರು ಎದೆಗೊಂದದೆ ಧೈರ್ಯದಿಂದ ಎದುರಿಸಿ ಬದುಕು ಹಸನ ಮಾಡಿಕೊಳ್ಳಬೇಕು.

ಕೊಪ್ಪಳ:

ಮಹಿಳೆಯರು ಅಕ್ಕಮಹಾದೇವಿ ಅಂತಹ ಮಹನೀಯರ ಆದರ್ಶ ಪಾಲಿಸುವ ಜತೆಗೆ ಆತ್ಮವಿಶ್ವಾಸದ ಬದುಕು ಕಟ್ಟಿಕೊಳ್ಳಬೇಕು. ಜೀವನದಲ್ಲಿ ವ್ಯಕ್ತಿ ಶಾಶ್ವತವಲ್ಲ ವ್ಯಕ್ತಿತ್ವ ಶಾಶ್ವತ. ಜೀವ ಶಾಶ್ವತವಲ್ಲ ಬದಲಾಗಿ ವಿಚಾರ ಶಾಶ್ವತ ಎಂದು ನಿರೂಪಕಿ ಡಾ, ಪ್ರಿಯಾ ಹರೀಶ ಹೇಳಿದರು.

ಅವರು ಶನಿವಾರ ನಗರದ ಕೋಟೆ ರಸ್ತೆಯಲ್ಲಿರುವ ಮಹೇಶ್ವರ ಮಂದಿರದಲ್ಲಿ ಶ್ರೀಅಕ್ಕಮಹಾದೇವಿ ಮಂಡಳ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಳ್ಳೆಯ ವಿಚಾರ, ಸಂದೇಶ, ಸಮಾಜಕ್ಕೆ ನೀಡುವಂತಹ ಆತ್ಮವಿಶ್ವಾಸದ ಬದುಕು ನಮ್ಮದಾಗಬೇಕು. ಏನೇ ಸಮಸ್ಯೆ ಬಂದರು ಎದೆಗೊಂದದೆ ಧೈರ್ಯದಿಂದ ಎದುರಿಸಿ ಬದುಕು ಹಸನ ಮಾಡಿಕೊಳ್ಳಬೇಕು ಎಂದ ಅವರು, ಅಕ್ಕಮಹಾದೇವಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಂಗಳೂರಿನ ಕೃಷಿ ಕ್ಷೇತ್ರದ ಸಾಧಕ ಶಿಕ್ಷಣ ಇಲಾಖೆಯ ಡಾ, ಕೃಷ್ಣಪ್ಪಗೌಡ ಪಡ್ಡಂ ಬೈಲ್ ಮಾತನಾಡಿ, ಸಾಮಾಜಿಕ, ಸಾಹಿತ್ತಿಕ, ಸಾಂಸ್ಕೃತಿಕ ಕ್ಷೇತ್ರ ವಿಸ್ತಾರವಾಗಿದ್ದು

ನಡೆದಷ್ಟು ದಾರಿ, ಪಡೆದಷ್ಟು ಭಾಗ್ಯ ಸಿಗಲಿದೆ ಎಂದರು.

ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಚಿಕೆ ಕುರಿತು ಸಾಹಿತಿ ಎಸ್.ಎಂ. ಕಂಬಾಳಿಮಠ, ಮಹೇಶ ಮನ್ನಾಪುರ ಮಾತನಾಡಿದರು.

ನವ ಪ್ರಗತಿ ಮಹಿಳಾ ಮಂಡಳದ ಉಪಾಧ್ಯಕ್ಷ ಚಂದಾ ಅಗಡಿ, ಮಹಿಳೆಯರ ಮತ್ತು ಮಹಿಳಾ ಸಂಘಟನೆಗಳ ಜವಾಬ್ದಾರಿ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ಮಂಡಲದ ಅಧ್ಯಕ್ಷೆ ಕೋಮಲಾ ಕುದುರೆಮೋತಿ, ಸದಸ್ಯರ ಸಹಕಾರದಿಂದ 25 ವರ್ಷದಿಂದ ಮಹಿಳಾ ಮಂಡಳದಿಂದ ಸಮಾಜ ಸೇವಾ ಕಾರ್ಯ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸಂಸಂದ ಕೆ. ರಾಜಶೇಖರ್ ಹಿಟ್ನಾಳ್ ಭೇಟಿ ನೀಡಿದ ಮಹಿಳಾ ಮಂಡಳಕ್ಕೆ ಶುಭ ಕೋರಿದರು. ಸಾಹಿತಿ ಶ್ರೀನಿವಾಸ ಚಿತ್ರಗಾರ, ಪತ್ರಕರ್ತ ಎಂ. ಸಾಧಿಕ್‌ ಅಲಿ, ಅನ್ನಪೂರ್ಣಮ್ಮ ಮನ್ನಪೂರ, ವಿಜಯಲಕ್ಷ್ಮಿ ಮುದ್ಗಲ್, ಜ್ಯೋತಿ ವಡ್ಡಟ್ಟಿ, ಗೀತಾ ಇಟಗಿ, ಲಲಿತಾ ಗುತ್ತಿ, ಪೂರ್ಣಿಮಾ ಶೆಟ್ಟರ್ ಇದ್ದರು.

Share this article