ವಚನ ಪಾಠಶಾಲೆಯ ವತಿಯಿಂದ ವರ್ಷವಿಡಿ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸ್ಕೃತಿ ಶಿಬಿರ, ರಸಪ್ರಶ್ನೆ, ವಿಚಾರಸಂಕಿರಣ, ನಾಟಕೋತ್ಸವಗಳನ್ನು ಆಯೋಜಿಸಲಾಗುವುದು.
ಗದಗ: ಬಸವಾದಿ ಶರಣರ ವಿಚಾರಗಳನ್ನು ಬಾಲ್ಯದಲ್ಲಿಯೇ ಅರಿತು ಆಚರಿಸಿದರೆ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ವಚನಗಳಲ್ಲಿರುವ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ವ್ಯಕ್ತಿ ಹಿತದ ಜತೆಗೆ ಸಮಾಜೋನ್ನತಿಯನ್ನು ಹೊಂದಿವೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ನಗರದ ತೋಂಟದಾರ್ಯ ಮಠದಲ್ಲಿ ವಚನ ಪಾಠಶಾಲೆಯ ವತಿಯಿಂದ ಜರುಗಿದ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವಚನ ಪಾಠಶಾಲೆಯ ವತಿಯಿಂದ ವರ್ಷವಿಡಿ ವಚನ ಕಂಠಪಾಠ, ವಚನ ನ್ಯತ್ಯ, ಶರಣ ಸಂಸ್ಕೃತಿ ಶಿಬಿರ, ರಸಪ್ರಶ್ನೆ, ವಿಚಾರಸಂಕಿರಣ, ನಾಟಕೋತ್ಸವಗಳನ್ನು ಆಯೋಜಿಸಲಾಗುವುದು ಎಂದರು.ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಶರಣರ ಚಿಂತನೆಗಳು ಅಗತ್ಯವಿದೆ. ಶಾಲೆಗಳಲ್ಲಿ ಸೀಮಿತ ವಿಚಾರಗಳಿದ್ದು, ಅವುಗಳನ್ನು ವ್ಯಾಪಕಗೊಳಿಸಲು ವಚನ ಪಾಠಶಾಲೆ ಕಾರ್ಯನಿರ್ವಹಿಸಬೇಕು. ಶ್ರೀಮಠದ ವಚನ ಪಾಠಶಾಲೆ ನಾಡಿನ ಎಲ್ಲ ಮಠಗಳಿಗೆ ಪ್ರೇರಣೆಯನ್ನು ನೀಡಲಿ ಎಂದರು. ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿವಿಧ ಸ್ಪರ್ಧೆಗಳು ಜರುಗಿದವು. ಎಸ್.ವಿ. ಪವಾಡಿಗೌಡ್ರ, ನಿಂಗು ಸೊಲಗಿ, ಎಸ್.ಯು. ಸಜ್ಜನಶೆಟ್ಟರ, ರಮೇಶ ಕಲ್ಲನಗೌಡರ, ಕೆ.ಎ. ಬಳಿಗೇರ, ಸುಧಾ ಹುಚ್ಚಣ್ಣವರ, ನೀಲಮ್ಮ ಅಂಗಡಿ, ಗಿರಿಜಾ ಹಸಬಿ, ರಾಜೇಶ್ವರ ಬಡ್ನಿ, ಗಿರಿಜಕ್ಕ ಧರ್ಮರೆಡ್ಡಿ, ನಿರ್ಮಲಾ ಪಾಟೀಲ, ಭಂಡಾರಿ, ಜ್ಯೋತಿ ಹೇರಲಗಿ, ರಶ್ಮಿ ಅಂಗಡಿ, ಎಸ್.ಎ. ಮುಗದ, ಅನ್ನದಾನಿ ಹಿರೇಮಠ, ಅರುಣಾ ಹಳಕಟ್ಟಿ, ಬಿ.ಎಲ್. ಚವ್ಹಾಣ, ಸಿ.ವಿ. ಬಡಿಗೇರ, ಬಸವರಾಜ ನೆಲಜೇರಿ, ಶಿವನಗೌಡ ಗೌಡರ, ಅಂದಯ್ಯ ಅರವಟಗಿಮಠ, ಸತೀಶ ಚನ್ನಪ್ಪಗೌಡ್ರ, ರಾಹುಲ ಗಿಡ್ನಂದಿ, ಅಮರೇಶ ರಾಂಪೂರ ಮೊದಲಾದವರು ಇದ್ದರು. ಸಂತೋಷ ಅಂಗಡಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ಸ್ವಾಗತಿಸಿದರು.ಸ್ಪರ್ಧಾ ವಿಜೇತರು: ವಚನ ಕಂಠಪಾಠ 1ರಿಂದ 4ನೇ ತರಗತಿ ವಿಭಾಗದಲ್ಲಿ ಪ್ರಣಮ್ಯ ಗುಜಮಾಗಡಿ ಲಯನ್ಸ್ ಶಾಲೆ ನರಗುಂದ(ಪ್ರಥಮ), ಅಪೂರ್ವ ವಡ್ಡರ ಜ್ಞಾನ ಮುದ್ರಾ ಪಬ್ಲಿಕ್ ಶಾಲೆ(ದ್ವಿತೀಯ), ನಿಶ್ಚಿತಾ ಪಾಟೀಲ ಗುರುಬಸವ ಶಾಲೆ(ತೃತೀಯ), ವಚನ ಕಂಠಪಾಠ 5ರಿಂದ 8ನೇ ತರಗತಿ ವಿಭಾಗದಲ್ಲಿ ತನುಶ್ರೀ ಬದಿ ಬಸವೇಶ್ವರ ಪ್ರೌಢಶಾಲೆ ಗದಗ(ಪ್ರಥಮ), ಕೃಷ್ಣಪ್ರಿಯ ಬದಿ ಬಸವೇಶ್ವರ ಪ್ರೌಢಶಾಲೆ ಗದಗ(ದ್ವಿತೀಯ), ಸಂಜನಾ ಗಾಜಿ ಸರ್ಕಾರಿ ಪ್ರೌಢಶಾಲೆ ಕಣವಿ(ತೃತೀಯ), ಪ್ರಬಂಧ ಸ್ಪರ್ಧೆ ಪ್ರೌಢಶಾಲಾ ವಿಭಾಗದಲ್ಲಿ ಶ್ರಾವಣಿ ಗುಡಗೂರ ಬಸವೇಶ್ವರ ಪ್ರೌಢಶಾಲೆ ಗದಗ(ಪ್ರಥಮ), ಸುಮಾ ನಾಯ್ಕಲ್ ತೋಂಟದಾರ್ಯ ಶಾಲೆ(ದ್ವಿತೀಯ), ಪೂಜಾ ಆಲೂರ ಕಿತ್ತೂರ ಚೆನ್ನಮ ಶಾಲೆ ಶಿರಹಟ್ಟಿ(ತೃತೀಯ), ಕಾಲೇಜು ವಿಭಾಗದಲ್ಲಿ ರಂಜಿತಾ ಮೋತಿಗೌಡರ ಪಿಪಿಜಿ ಬಿಎಡ್ ಕಾಲೇಜು ಗದಗ(ಪ್ರಥಮ), ಮಹಾಲಕ್ಷ್ಮಿ ಪಟ್ಟೇದ ಸರ್ಕಾರಿ ಪದವಿ ಮಹಿಳಾ ಕಾಲೇಜು ಗದಗ(ದ್ವಿತೀಯ), ಶೇಖರಗೌಡ ಪಾಟೀಲ ಸರ್ಕಾರಿ ಪಪೂ ಕಾಲೇಜು ಗದಗ(ತೃತೀಯ), ವಚನಾಧಾರಿತ ಚಿತ್ರಕಲಾ ಸ್ಪರ್ಧೆ ಪ್ರೌಢಶಾಲಾ ವಿಭಾಗದಲ್ಲಿ ಮೇಘನಾ ಲಕ್ಕುಂಡಿ ಜೆಸಿ ಪ್ರೌಢಶಾಲೆ ಗದಗ(ಪ್ರಥಮ), ಅನ್ವಿತಾ ಬಳ್ಳಾರಿ ಜೆಸಿ ಪ್ರೌಢಶಾಲೆ ಗದಗ(ದ್ವಿತೀಯ), ಲಕ್ಷ್ಮೀ ಬಸರಿ ಜೆಸಿ ಪ್ರೌಢಶಾಲೆ ಗದಗ(ತೃತೀಯ), ಕಾಲೇಜು ವಿಭಾಗದಲ್ಲಿ ಗಣೇಶ ಬದಿ ವಿಜಯ ಆರ್ಟ್ಸ್ ಕಾಲೇಜು ಗದಗ(ಪ್ರಥಮ), ವೀರೇಶ ವಿರಕ್ತಮಠ ವಿಜಯಕಲಾ ಮಂದಿರ ಗದಗ(ದ್ವಿತೀಯ), ಪ್ರೇಮಕುಮಾರ ವಿಜಯ ಕಲಾ ಮಂದಿರ ಗದಗ(ತೃತೀಯ) ಸ್ಥಾನವನ್ನು ಪಡೆದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.