ಹಣಕಾಸು ತಂತ್ರಜ್ಞಾನದಿಂದ ಪೂರಕ ವಾತಾವರಣ

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಆಧುನಿಕತೆಯ ಜಗತ್ತಿನಲ್ಲಿ ತಾಂತ್ರಿಕ ವ್ಯವಸ್ಥೆ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ದಾಟಿ ವಿಶ್ವವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಹಣಕಾಸು ತಂತ್ರಜ್ಞಾನವೂ ಸಹ ತನ್ನ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ಎಲ್ಲಾ ಕ್ಷೇತ್ರಗಳಂತೆ ಮುಂದೆ ಸಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಹಣಕಾಸು ತಂತ್ರಜ್ಞಾನ ಎನ್ನುವುದು ಹಣಕಾಸು ಸೇವೆ ನೀಡಲು ತಂತ್ರಜ್ಞಾನ ಬಳಸುವ ಕಂಪನಿಗಳಿಂದ ಕೂಡಿದ ಉದ್ಯಮವಾಗಿದ್ದು, ವಿಮೆ, ಆಸ್ತಿ ನಿರ್ವಹಣೆ ಮತ್ತು ಪಾವತಿ ಮತ್ತು ಹಲವಾರು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ವ್ಯವಸ್ಥೆಗೆ ಪೂರಕವಾದ ಮತ್ತು ಅನುಕೂಲವಾದ ವಾತಾವರಣ ನಿರ್ಮಾಣ ಮಾಡಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್.ಟಿ. ಬಾಗಲಕೋಟಿ ಅಭಿಪ್ರಾಯಪಟ್ಟರು.

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ತಂತ್ರಜ್ಞಾನವು ಭಾರತದಲ್ಲಿ ತುಲನಾತ್ಮಕವಾಗಿ ಹೊಸ ಉದ್ಯಮವಾಗಿ ಹೊರಹೊಮ್ಮಿದೆ. ಭಾರತೀಯ ಮಾರುಕಟ್ಟೆಯು ಫಿನ್‌ಟೆಕ್‌ನ್ನು ಅಳವಡಿಸಿಕೊಳ್ಳುವ ವಿವಿಧ ವಲಯಗಳಲ್ಲಿ ಬೃಹತ್ ಹೂಡಿಕೆಗಳಿಗೆ ಸಾಕ್ಷಿಯಾಗಿದೆ, ಇದು ದೇಶವನ್ನು ಡಿಜಿಟಲ್ ಆರ್ಥಿಕತೆಯತ್ತ ತಳ್ಳುತ್ತಿರುವ ದೃಢವಾದ ಮತ್ತು ಪರಿಣಾಮಕಾರಿ ಸರ್ಕಾರದ ಸುಧಾರಣೆಗಳಿಂದ ಭಾಗಶಃ ನಡೆಸಲ್ಪಟ್ಟಿದೆ. ಇದು ಬೆಳೆಯುತ್ತಿರುವ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್ ನುಗ್ಗುವಿಕೆಯಿಂದ ಸಹಾಯ ಮಾಡಲ್ಪಟ್ಟಿದೆ, ಇದು ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಗೆ ಮತ್ತು ದೇಶದಲ್ಲಿ ಫಿನ್‌ಟೆಕ್‌ನ ಉದಯಕ್ಕೆ ದಾರಿ ತೋರಿದೆ ಎಂದರು.

ಒಂದು ವರದಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಫಿನ್‌ಟೆಕ್ ಅಳವಡಿಕೆ ಸೂಚ್ಯಂಕದಲ್ಲಿ ಶೇ.೮೭ ದರದೊಂದಿಗೆ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. ಎಫ್‌ಐಎ ಗ್ಲೋಬಲ್‌ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಭಾರತಕ್ಕೆ ೨೦೨೧ರಲ್ಲಿ ಫಿನ್‌ಟೆಕ್ ಮಾರುಕಟ್ಟೆಯ ಒಟ್ಟಾರೆ ಅಂದಾಜು ೫೦ ಬಿಲಿಯನ್ ಡಾಲರ್ ಆಗಿದೆ. ಹಣಕಾಸು ಮತ್ತು ಹಣಕಾಸು ಸೇವೆಗಳಲ್ಲಿ ಡಿಜಿಟಲ್ ರೂಪಾಂತರದ ಸಂಕೀರ್ಣತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಆದ್ದರಿಂದ, ನಮ್ಮ ಪರಿವರ್ತಕ ತಂತ್ರಗಳು ಪರಿಸರ ವ್ಯವಸ್ಥೆಯಲ್ಲಿ ವಿಚ್ಛಿದ್ರಕಾರಕ ತಂತ್ರಜ್ಞಾನವನ್ನು ಸಾವಯವವಾಗಿ ತುಂಬುತ್ತವೆ, ಇದು ಹಣಕಾಸು ಸೇವೆಗಳ ಸಂಸ್ಥೆಗಳು ತಮ್ಮ ಆಪರೇಟಿಂಗ್ ಮಾದರಿಗಳನ್ನು ಮರು ವ್ಯಾಖ್ಯಾನಿಸಲು, ಅವರ ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಬೆಳವಣಿಗೆಯ ಹೊಸ ಮಾರ್ಗ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕುರಿತು ತುಲನಾತ್ಮಕವಾದ ವಿಚಾರಗಳನ್ನು ವಿಚಾರ ಸಂಕಿರಣಗಳ ಮೂಲಕ ವ್ಯವಸ್ಥೆಗೆ ಪೂರಕವಾಗುವಂತೆ ಮಾಹಿತಿ ಹಂಚುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಆಧುನಿಕತೆಯ ಜಗತ್ತಿನಲ್ಲಿ ತಾಂತ್ರಿಕ ವ್ಯವಸ್ಥೆ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ದಾಟಿ ವಿಶ್ವವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಹಣಕಾಸು ತಂತ್ರಜ್ಞಾನವೂ ಸಹ ತನ್ನ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ಎಲ್ಲಾ ಕ್ಷೇತ್ರಗಳಂತೆ ಮುಂದೆ ಸಾಗುತ್ತಿದೆ. ಸಾಮಾಜಿಕ ಮತ್ತು ಔದ್ಯೋಗಿಕವಾಗಿ ಉಪಯುಕ್ತ ಮಾದರಿಯಲ್ಲಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ. ಹಣಕಾಸು ತಾಂತ್ರಿಕ ಪದ್ಧತಿ ಇಂದು ಗ್ರಾಹಕ ಸ್ನೇಹಿಯಾಗಿ, ಉದ್ಯಮ ಬಂಧುವಾಗಿ ಪರಿವರ್ತನೆಯಾಗಿದ್ದು ಇದರ ಸಂಪೂರ್ಣ ಜ್ಞಾನವನ್ನು ಇಂತಹ ವಿಚಾರ ಸಂಕಿರಣಗಳ ಮುಖಾಂತರ ಪಡೆಯುವ ಅವಕಾಶ ದೊರೆತಿರುವುದು ಸಂತೋಷದ ವಿಷಯ ಎಂದರು.

ಬೆಂಗಳೂರಿನ ಹಣಕಾಸು ತಂತ್ರಜ್ಞಾನಿ ಡಾ. ಕಿರಣಕುಮಾರ ಕೆ.ವಿ., ಹಣಕಾಸು ಮಾಹಿತಿ ತಂತ್ರಜ್ಞ ಡಾ. ಸುಧೀಂದ್ರ ವಿ.ಆರ್. ಹಾಗೂ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ ಉಪಸ್ಥಿತರಿದ್ದರು. ಕಾಲೇಜು ಮಂಡಳಿ ಸದಸ್ಯ ಬಸವರಾಜ ಮಾಸೂರ, ಜೆ.ಎಸ್. ಅರಣಿ, ಎಸ್.ಎಂ. ಹುರಳಿಕುಪ್ಪಿ, ವಿಭಾಗದ ಮುಖ್ಯಸ್ಥ ಡಾ. ಎಂ.ಬಿ. ಯಾದಗುಡಿ ಇದ್ದರು. ಸ್ವಾತಿ ಗೌಳಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಜಿ.ಎಸ್. ಬಾರ್ಕಿ ಪರಿಚಯಿಸಿದರು. ಪ್ರೊ. ರಿಷಿಕಾ ಡಿ. ನಿರ್ವಹಿಸಿದರು. ಪ್ರೊ. ಆರ್.ಬಿ. ಅಜರಡ್ಡಿ ವಂದಿಸಿದರು.

Share this article