ಉದ್ಘಾಟನೆಗೆ ಮುನ್ನವೇ ಕಟ್ಟಡ ಬಿರುಕು

KannadaprabhaNewsNetwork |  
Published : Oct 10, 2026, 01:45 AM IST
7 ಬೀರೂರು 4ಬೀರೂರು ಪುರಸಭೆ ಹಿಂಭಾಗದಲ್ಲಿ ಲಕ್ಷಾಂತರ ಮೌಲ್ಯದ ವಾಹನಗಳು ಮತ್ತು ಗುಜರಿ ವಸ್ತುಗಳು ತುಕ್ಕು ಹಿಡಿದಿರುವುದು. | Kannada Prabha

ಸಾರಾಂಶ

ಬೀರೂರುಹಗಲಿರುಳೆನ್ನದೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿರ್ಮಿಸಿರುವ ಪೌರ ಕಾರ್ಮಿಕರ ವಿಶ್ರಾಂತಿ ಕಟ್ಟಡ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿದೆ.

ಪುರಸಭೆ ಹಿಂಭಾಗದಲ್ಲಿ ಕಟ್ಟಿದ್ದ ಪೌರಕಾರ್ಮಿಕರ ವಿಶ್ರಾಂತಿ ಗೃಹ । ಕಳಪೆ ಕಾಮಗಾರಿಗೆ ಸಾಕ್ಷಿ ಸಾರ್ವಜನಿಕರ ಆರೋಪ

ಕೆ.ಟಿ.ಗೀತಾ ಗಿರೀಶ್

ಕನ್ನಡಪ್ರಭ ವಾರ್ತೆ, ಬೀರೂರು

ಹಗಲಿರುಳೆನ್ನದೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿರ್ಮಿಸಿರುವ ಪೌರ ಕಾರ್ಮಿಕರ ವಿಶ್ರಾಂತಿ ಕಟ್ಟಡ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿದೆ.

ಪಟ್ಟಣದ ಪುರಸಭೆ ಹಿಂಭಾಗದಲ್ಲಿ ಬೆಳಗಿನ ಜಾವದಿಂದಲೇ ಬೀದಿ ಗುಡಿಸಿ, ತ್ಯಾಜ್ಯ ವಿಲೇವಾರಿಗೆ ಪೌರ ಕಾರ್ಮಿಕರು ಸಮವಸ್ತ್ರ ಬದಲಿಸಲು, ತುಸು ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳಗಳಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದುದನ್ನು ಪರಿಗಣಿಸಿ ನಗರೋತ್ಥಾನ ಯೋಜನೆಯಡಿ ಪುರಸಭೆ ₹29 ಲಕ್ಷ ವೆಚ್ಚದಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸ ಲಾಗಿತ್ತು. ಈ ಕಟ್ಟಡ ಉದ್ಘಾಟನೆ ಮುಂಚೆಯೇ ಬಿರುಕು ಬಿಟ್ಟಿರುವುದು ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಘಾಟನೆಯಾಗಿಲ್ಲ ಶೌಚಾಲಯ:

ಲಕ್ಷಾಂತರ ರು. ವ್ಯಯಿಸಿ ಈ ಕಟ್ಟಡದ ಪಕ್ಕದಲ್ಲೇ ಪುರಸಭೆ ನಿರ್ಮಿಸಿರುವ ಶೌಚಾಲಯವೂ ಉದ್ಘಾಟನೆ ಕಂಡಿಲ್ಲ. ಕಚೇರಿಗೆ ಬರುವ ಮಧುಮೇಹಿ ಸಾರ್ವಜನಿಕರು, ವೃದ್ಧರು, ಅಂಗವಿಕಲರು ಮತ್ತಿತರರು ಶೌಚಾಲಯ ವಿಲ್ಲದೇ ಬಯಲು ಶೌಚಾಲಯವನ್ನೇ ಅವಲಂಬಿಸುವ ಸ್ಥಿತಿಯಿದೆ ಹಾಗಿದ್ದರೂ ನಿರ್ಮಿಸುವ ಶೌಚಾಲಯ ಇನ್ನೂ ಸಾರ್ವಜನಿಕ ಬಳಕೆಗೆ ನೀಡಿಲ್ಲ. ಪುರಸಭೆಗೆ ಎಲ್ಲಾ ರೀತಿ ತೆರಿಗೆ ಕಟ್ಟಿದ್ದರೂ ಅಧಿಕಾರಿಗಳು ಜನರ ಸಮಸ್ಯೆ ಅರಿಯದಾಗಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ವಾಹನ, ಗುಜರಿ ವಸ್ತುಗಳಿಗೆ ತುಕ್ಕು:

ಪುರಸಭೆ ಹಿಂಭಾಗ ಪುರಸಭೆ ವಾಹನಗಳು ಕೆಟ್ಟು ನಿಂತಿದ್ದರೇ, ಕಬ್ಬಿಣ ಮತ್ತಿತರ ಸಾಮಾಗ್ರಿಗಳು ಮಳೆ ಮತ್ತು ಶೀತ ವಾತಾವರಣಕ್ಕೆ ತುಕ್ಕು ಹಿಡಿಯುತ್ತಿವೆ. ಲಕ್ಷಾಂತರ ಆದಾಯ ತರುವ ಈ ಸಾಮಾಗ್ರಿ ತುಕ್ಕು ಹಿಡಿಯುವ ಪರಿಸ್ಥಿತಿ ತಲುಪಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿವೆ.

-- ಕೋಟ್: --

ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ ಗೋಡೆ ಬಿರುಕು ಗಮನಕ್ಕೆ ಬಂದಿದ್ದು, ಗುತ್ತಿಗೆದಾರನಿಗೆ ಸರಿಪಡಿಸು ವಂತೆ ನೋಟೀಸ್ ನೀಡಲಾಗಿದೆ. ಶೌಚಾಲಯ ಸಮರ್ಪಕವಾಗಿರದ ಕಾರಣ ಅದನ್ನು ಕೆಡವಿ ಬೇರೆ ಬೇರೆ ನಿರ್ಮಿಸಲಾಗುವುದು. ಪುರಸಭೆ ಗುಜರಿ ವಾಹನ ಮತ್ತಿತರ ವಸ್ತುಗಳ ಹರಾಜಿಗೆ ಎರಡು ಬಾರಿ ಹರಾಜು ಕರೆದರು ಯಾರು ಮುಂದೆ ಬಂದಿಲ್ಲ. ಆರ್.ಟಿ.ಒ ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಮತ್ತು ಪುರಸಭೆ ಆರೋಗ್ಯ ನಿರೀಕ್ಷಕ ರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.

- ಮಂಜುನಾಥ್ ಪುರಸಭೆ ಮುಖ್ಯಾಧಿಕಾರಿ, ಬೀರೂರು.

- ಬಾಕ್ಸ್--

ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿ ನಡೆಸಿ

ಪುರಸಭೆ ಕಚೇರಿ ಕೆಲಸಗಳಿಗೆ ಆಗಮಿಸಿದಾಗ ಶೌಚಾಲಯದ್ದೆ ದೊಡ್ಡ ಸಮಸ್ಯೆ. ಪುರುಷರದ್ದು ಹೇಗೋ ನಡೆಯುತ್ತದೆ ಮಹಿಳೆಯರ ಪಾಡೇನು ? ಅಧಿಕಾರಿಗಳನ್ನು ಅವರ ಸಂಬಳದಿಂದ ಶೌಚಾಲಯ ಕಟ್ಟಿಸಿ ಎನ್ನುವುದಿಲ್ಲ. ತೆರಿಗೆ ಹಣದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿಗೆ ಹಣ ಬಳಸಲಿ ಪುರಸಭೆಯಲ್ಲಿ ಯಾವಾಗ ನೋಡಿದರು ಅಧಿಕಾರಿಗಳ ಕುರ್ಚಿ ಖಾಲಿ ಇರುತ್ತವೆ. ಜಿಲ್ಲಾಧಿಕಾರಿಗಳು ಪುರಸಭೆಗೆ ಭೇಟಿ ನೀಡಿ ಸಮಸ್ಯೆ ಶೀಘ್ರ ಬಗೆಹರಿಸಿ, ಅಧಿಕಾರಿಗಳಿಗೆ ಕಟುನಿಟ್ಟಾದ ಸೂಚನೆ ನೀಡಬೇಕು ಎನ್ನುತ್ತಾರೆ ಸ್ಥಳೀಯ ಮಲ್ಲಿಕಾರ್ಜುನ್ .

7 ಬೀರೂರು 2

ಬೀರೂರು ಪುರಸಭೆ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೌರಕಾರ್ಮಿಕರ ವಿಶ್ರಾತಿ ಗೃಹದ ಕಟ್ಟಡ ಬಿರುಕು ಬಿಟ್ಟಿರುವುದು.

7 ಬೀರೂರು 3

ಬೀರೂರು ಪುರಸಭೆ ಹಿಂಭಾಗ ನೂತನವಾಗಿ ನಿರ್ಮಾಣವಾದ ಶೌಚಾಲಯ ಉದ್ಘಾಟನೆ ಭಾಗ್ಯವನ್ನೆ ಕಾಣದೇ ಪಾಳು ಬಿದ್ದಿರುವುದು.

7 ಬೀರೂರು 4

ಬೀರೂರು ಪುರಸಭೆ ಹಿಂಭಾಗದಲ್ಲಿ ಲಕ್ಷಾಂತರ ಮೌಲ್ಯದ ವಾಹನಗಳು ಮತ್ತು ಗುಜರಿ ವಸ್ತುಗಳು ತುಕ್ಕು ಹಿಡಿದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸರವಳ್ಳಿ ಪಂಚಾಯಿತಿ ಹಸಲರ ವಾರ್ಡಿಗೆ ಬೇಕಿದೆ ಸಂಪರ್ಕ ಸೇತುವೆ
ಡಿ.12ಕ್ಕೆ ಜಿಲ್ಲೆಯಾದ್ಯಂತ ಲೋಕ್‌ ಅದಾಲತ್