ಸಂಸ್ಕಾರದಿಂದ ಉತ್ತಮ ಪ್ರಜೆ ನಿರ್ಮಾಣ: ಕಾಳಹಸ್ತೇಂದ್ರ ಶ್ರೀ

KannadaprabhaNewsNetwork |  
Published : Aug 27, 2026, 01:15 AM IST
ನೂಲಹುಣ್ಣಿಯಂಗವಾಗಿ, ಬುಧವಾರ ಯಾದಗಿರಿ ಜಿಲ್ಲೆಯ ಶಹಾಪುರ ಸಮೀಪದ ದೋರನಹಳ್ಳಿ ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ, ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಯಜ್ಞೋಪವೀತಧಾರಣೆ ಕಾರ್ಯಕ್ರಮದಲ್ಲಿ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುತ್ತಾನೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ನುಡಿದರು. ನೂಲಹುಣ್ಣಿ ಅಂಗವಾಗಿ ಬುಧವಾರ ಜಿಲ್ಲೆಯ ಶಹಾಪುರ ಸಮೀಪದ ದೋರನಹಳ್ಳಿ ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ, ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಯಜ್ಞೋಪವೀತ ಧಾರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುತ್ತಾನೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ನುಡಿದರು. ನೂಲಹುಣ್ಣಿ ಅಂಗವಾಗಿ ಬುಧವಾರ ಜಿಲ್ಲೆಯ ಶಹಾಪುರ ಸಮೀಪದ ದೋರನಹಳ್ಳಿ ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ, ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಯಜ್ಞೋಪವೀತ ಧಾರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವೈದಿಕ ಪದ್ಧತಿಯಲ್ಲಿ ಬದುಕುವ ಮನುಷ್ಯನ ಬದುಕಿಗೆ ಉಪನಯನದ ನಂತರ ಯಜ್ಞೋಪವೀತಧಾರಣೆ ಮಾಡಿಕೊಳ್ಳಲು ಯೋಗ್ಯನಾಗುತ್ತಾನೆ, ಇದು ಬದುಕಿನ ಮೊದಲ ಬುನಾದಿ. ಯಜ್ಞೋಪವೀತಧಾರಣೆಗೆ ಜನಿವಾರ ಧಾರಣ ಎಂತಲೂ ಕರೆಯುತ್ತಾರೆ. ಜನಿವಾರವನ್ನು "ಜ " ಎಂದು "ನಿವಾರ " ಎಂದು ಉಚ್ಚರಿಸಬೇಕು. ಜ ಎಂದರೆ "ಜನ್ಮ ", "ನಿವಾರ " ಎಂದರೆ ಬದುಕಿನಲ್ಲಿ ಮಾಡಿದ, ಮಾಡುವ ತಪ್ಪುಗಳನ್ನು ನಿವಾರಿಸಿ ಸರಿ ದಾರಿಗೆ ತರುವ ಸತ್ಕಾರ್ಯ ಎಂದರ್ಥವಾಗುತ್ತದೆ. ಇದನ್ನು ಉಪಾಕರ್ಮ ಎಂದೂ ಕೂಡ ಕರೆಯುತ್ತಾರೆ ಎಂದರು.

ಜನಿವಾರದಲ್ಲಿ ಒಂಭತ್ತು ಎಳೆಗಳು ಬರುತ್ತವೆ. ಅವುಗಳು ಬದುಕಿನ ಹಂತದಲ್ಲಿ ಸಂದೇಶ ಹೊಂದಿವೆ. ಉಪಕರ್ಮದ ನಂತರದ ಮೂರು ಎಳೆಗಳ ಜನಿವಾರ ಧರಿಸಬೇಕು. ಅವು ಸತ್ವ, ರಜ , ತವ ಎಂದರ್ಥ. ಮದುವೆಯ ನಂತರ ಆರು ಎಳೆ ಜನಿವಾರ ಧರಿಸಬೇಕು. ಅವು ಕಾಯಾ, ವಾಚಾ, ಮನಸ ಎಂದರ್ಥ. ತಂದೆ ಮರಣ ನಂತರ ಒಂಭತ್ತು ಎಳೆ ಪಿತೃ ಋಣ , ದೇವ ಋಣ , ಗುರು ಋಣ ಹೀಗೆ ಜನಿವಾರ ಶಕ್ತಿಯನ್ನು ಹೊಂದಿದೆ. ಜನಿವಾರವು ಗಾಯತ್ರಿ, ಸಾವಿತ್ರಿ, ಸರಸ್ವತಿಯ ಸ್ವರೂಪವಿದ್ದು, ವಾಚಿಕ ಜಪ, ಉಪಾಂಶು ಜಪ, ಮಾನಸಿಕ ಜಪ ಮೂರು ವಿಧಗಳಿಂದ ಧ್ಯಾನಿಸಿ ಸಂಸ್ಕಾರ ಪಾಲಿಸಬೇಕು ಎಂದರು.

ನಂತರ ಪೂಜ್ಯರ ಮಾರ್ಗದರ್ಶನದಲ್ಲಿ ಜನಿವಾರಧಾರಣೆ ಜರುಗಿ, ತುಲಾಭಾರ ಸೇವೆ, ಮಹಾಪ್ರಸಾದ ಜರುಗಿತು.

ಸಮಾಜದ ಅಧ್ಯಕ್ಷ ಚಂದ್ರಶೇಖರ ಪತ್ತಾರ, ಮಾನಪ್ಪ ಕಂಬಾರ, ಘಂಟೆಪ್ಪ ಪತ್ತಾರ, ಮನೋಹರ ಪತ್ತಾರ, ಕಾಳಪ್ಪ ಪತ್ತಾರ, ಇಂದ್ರಪ್ಪ ಕಂಚಗಾರ, ಪ್ರವೀಣ ಪತ್ತಾರ, ಕಾಳಪ್ಪ ಕಂಚಗಾರ, ಮೌನೇಶ ಕಂಚಗಾರ, ಗಂಗಾಧರ ಕಂಬಾರ, ಗಂಗಾಧರ ಪತ್ತಾರ, ಮಂಜುನಾಥ ಕಂಚಗಾರ, ವಿರೇಶ ಕಂಬಾರ, ಗುರುನಾಥ ಕಂಚಗಾರ, ಕಾಶಿನಾಥ , ಜಗನ್ನಾಥ ಶೃಂಗಾರ, ಮಹಾದೇವ ಶೃಂಗಾರ, ದೊಡಪ್ಪ ಕಂಬಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಾದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಹಸ್ತ