ಕನ್ನಡಪ್ರಭ ವಾರ್ತೆ ಮೈಸೂರುನಾಡಿನ ಉಳಿವಿಗಾಗಿ ರಾಯಣ್ಣ ತನ್ನ ಕೊನೆ ಉಸಿರು ಇರುವ ತನಕವೂ ಸೇನೆ ಕಟ್ಟಿಕೊಂಡು ಹೋರಾಡಿದ್ದಾಗಿ ಎಸ್.ಎಫ್.ಟಿ.ಇ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಎಂ. ಮಹದೇವೇಗೌಡ ತಿಳಿಸಿದರು.ನಗರದ ನಮನ ಕಲಾ ಮಂಟಪದಲ್ಲಿ ಬುಧವಾರ ಮೈಸೂರು ಕನ್ನಡ ವೇದಿಕೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಣ್ಣ ಗುಂಪು ಕಟ್ಟಿಕೊಂಡು ನಾಯಕನಾಗಿದ್ದ ಸಂಗೊಳ್ಳಿ ರಾಯಣ್ಣನನ್ನು ಕಿತ್ತೂರು ರಾಣಿ ಚೆನ್ನಮ್ಮ ಗುರುತಿಸಿದರು. ಬಳಿಕ ತನ್ನ ಸೇನೆಯ ದಂಡ ನಾಯಕನನ್ನಾಗಿ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದ್ದಾಗಿ ಅವರು ಹೇಳಿದರು.ಸಂಗೊಳ್ಳಿ ರಾಯಣ್ಣ ಬ್ರಿಟೀಷರಿಗೆ ಸಿಂಹ ಸ್ವಪ್ನರಾಗಿದ್ದರು. ಪರಕೀಯರ ವಿರುದ್ಧ ಮಾತೃಭೂಮಿ ಸಲುವಾಗಿ ಹೋರಾಡಿದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಬದುಕು ಇಂದಿನ ಯುವಜನರಿಗೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು.ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವೈದ್ಯ ಪಿ. ಮಾಲೇಗೌಡ, ಮುಂದಿನ ಪೀಳಿಗೆಗೆ ರಾಯಣ್ಣನ ದೇಶಭಕ್ತಿ ತಿಳಿಯಬೇಕಿದ್ದರೆ ಪಠ್ಯಗಳಲ್ಲಿ ರಾಯಣ್ಣನ ಜೀವನ ಚರಿತ್ರೆ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಬೇಕು ಎಂದರು. -- ಬಾಕ್ಸ್--