ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿಯ ನಂದೀಶ್ ಅಲಿಯಾಸ್ ಬೆಂಕಿ ನಂದ್ಯಾ ಉಮೇಶ ಸಕ್ರಪ್ಪನವರ (29) ಹಾಗೂ ಮಂಜುನಾಥ ಈರಪ್ಪ ಬಂಡಿವಡ್ಡರ (28) ಬಂಧಿತ ಆರೋಪಿಗಳು. ಕುಮಾರಸ್ವಾಮಿ ಲೇಔಟ್‌ನ ಪ್ಲಾಟ್ ನಂ.533ರ ನಿವಾಸಿ ಶಾಬು ದಿಲೀಪ ಕಾಂಬಳೆ ಅವರ ಮನೆಯಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳು ಕಳ್ಳತನವಾಗಿರುವ ಕುರಿತು 2025ರ ಮಾ.4ರಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ನಾಪತ್ತೆ ಎಂದು ಪರಿಗಣಿಸಲಾಗಿದ್ದರೂ, ನ್ಯಾಯಾಲಯದ ಆದೇಶದ ಮೇರೆಗೆ ಮರುತನಿಖೆ ಕೈಗೊಳ್ಳಲಾಗಿತ್ತು. ಎಪಿಎಂಸಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಯು.ಎಸ್. ಆವಟಿ ನೇತೃತ್ವದ ತಂಡ ಆ.22ರಂದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆರೋಪಿಗಳಿಬ್ಬರು ಎಪಿಎಂಸಿ ಠಾಣೆ ವ್ಯಾಪ್ತಿಯ ಇನ್ನೆರಡು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ₹5,89,380 ಮೌಲ್ಯದ 41.43 ಗ್ರಾಂ ಚಿನ್ನಾಭರಣ ಹಾಗೂ ₹22,146 ಮೌಲ್ಯದ 93.45 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು ₹6,11,526 ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ