ಕನ್ನಡಪ್ರಭ ವಾರ್ತೆ ಅಥಣಿತಾಲೂಕಿನ ಪೂರ್ವ ಭಾಗದ ಹಳ್ಳಿಗಳ ರೈತರು ಕಾಲುವೆ ನೀರು ನಂಬಿ ಬಿತ್ತನೆ ಮಾಡಿದ್ದಾರೆ. ಆದರೆ, ಇರುವ ಅಲ್ಪ ಸ್ವಲ್ಪ ಬೆಳೆಗಳು ನೀರಿನ ಕೊರತೆಯಿಂದ ಕಮರಿ ಹೋಗುತ್ತಿವೆ. ಮುಂಗಾರು ಮಳೆ ಕೊರತೆಯಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಹೀಗಾಗಿ ನೀರಾವರಿ ಅಧಿಕಾರಿಗಳು ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಆ.27ರಂದು ವಿಜಯಪುರ-ಸಂಕೇಶ್ವರ ಹೆದ್ದಾರಿ ಸಂಚಾರ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಡಚಿ ಗ್ರಾಮದ ರೈತ ಮುಖಂಡ ಬೀರಪ್ಪಾ ಪೂಜಾರಿ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಪೂರ್ವ ಭಾಗದ ಹಳ್ಳಿಗಳ ರೈತರು ಕಾಲುವೆ ನೀರು ನಂಬಿ ಬಿತ್ತನೆ ಮಾಡಿದ್ದಾರೆ. ಆದರೆ, ಇರುವ ಅಲ್ಪ ಸ್ವಲ್ಪ ಬೆಳೆಗಳು ನೀರಿನ ಕೊರತೆಯಿಂದ ಕಮರಿ ಹೋಗುತ್ತಿವೆ. ಮುಂಗಾರು ಮಳೆ ಕೊರತೆಯಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಹೀಗಾಗಿ ನೀರಾವರಿ ಅಧಿಕಾರಿಗಳು ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಆ.27ರಂದು ವಿಜಯಪುರ-ಸಂಕೇಶ್ವರ ಹೆದ್ದಾರಿ ಸಂಚಾರ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಡಚಿ ಗ್ರಾಮದ ರೈತ ಮುಖಂಡ ಬೀರಪ್ಪಾ ಪೂಜಾರಿ ಎಚ್ಚರಿಸಿದರು.ಪಟ್ಟಣದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೃಷ್ಣಾ ನದಿಯಿಂದ ಕರಿಮಸೂತಿ ಏತ ನೀರಾವರಿ ಯೋಜನೆಗೆ ಕಳೆದ ಎರಡು ತಿಂಗಳ ಹಿಂದೆ ಕಾಲಿಗೆ ನೀರು ಹರಿಸಲಾಗುತ್ತಿದೆ. ಆದರೆ 2 ತಿಂಗಳು ಕಳೆದರೂ ಕರಿಮಸೂತಿ ಕಾಲುವೆ ವ್ಯಾಪ್ತಿಯಲ್ಲಿನ ಬಡಚಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ದೊರೆತಿಲ್ಲ. ಇದರಿಂದ ಬಡಚಿ ಗ್ರಾಮದ ರೈತರ ಬೆಳೆಗಳು ನೀರು ಸಿಗದೇ ಒಣಗುತ್ತಿವೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ನೀರು ಬಿಡುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಅಥಣಿ ತಾಲೂಕಾಡಳಿತ ಹಾಗೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣವೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದಲ್ಲಿ ಬಡಚಿ ಗ್ರಾಮದ ನೂರಾರು ರೈತರು ನೀರಾವರಿ ಇಲಾಖೆ ಕಚೇರಿಗಳಿಗೆ ಮುತ್ತಿಗೆ ಹಾಕುವುದಲ್ಲದೆ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಈ ವೇಳೆ ರೈತ ಮುಖಂಡರಾದ ದಶರಥ ಜಾಧವ, ಪುಂಡಲೀಕ ಪೂಜಾರಿ, ಹಣಮಂತ ಲೇಂಡೆ, ಮಹಾದೇವ ಕಮತಗಿ, ಶ್ಯಾಮು ನಾಯಿಕ, ಈರಪ್ಪಾ ದನದಮನಿ, ವಿಜಯಕುಮಾರ ಕಾಂಬಳೆ, ಪರಶುರಾಮ ದನದಮನಿ, ಸೇರಿದಂತೆ ಗ್ರಾಮದ ಹಲವು ರೈತರು ಉಪಸ್ಥಿತರಿದ್ದರು.