ಗದಗ: ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಬಿಲ್ಡಿಂಗ್ ಮಟೀರಿಯಲ್ ಎಕ್ಸಪೋ ಬಿಲ್ಡ್‌ಮ್ಯಾಟ್- 2026 ಕಾರ್ಯಕ್ರಮ ಫೆ. 6ರಿಂದ ಫೆ. 8ರ ವರೆಗೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಮಲ್ಲಣ್ಣವರ ತಿಳಿಸಿದರು.
ಗದಗ ಸೇರಿದಂತೆ ಎಲ್ಲ ತಾಲೂಕುಗಳ ನಾಗರಿಕರಿಗೆ ನೇರವಾಗಿ ಉತ್ತಮ ಗುಣಮಟ್ಟದ ಸಾಮಗ್ರಿಗಳ ಮಾಹಿತಿ ನೀಡುವುದು, ಹೊಸ ತಂತ್ರಜ್ಞಾನ ಮತ್ತು ಆಧುನಿಕ ಕಟ್ಟಡ ಸಾಮಗ್ರಿಗಳ ಪರಿಚಯ, ಉತ್ಪಾದಕರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಇದು 9ನೇ ಬಿಲ್ಡ್‌ಮ್ಯಾಟ್ ಕಾರ್ಯಕ್ರಮ ಪ್ರತಿ ಎರಡು ವರ್ಷಕ್ಕೊಮ್ಮೆ ನಿರಂತರ ನಡೆಯುತ್ತಿರುವ ಎಕ್ಸಪೋ ಆಗಿದ್ದು, ನೂರಾರು ಬಿಲ್ಡಿಂಗ್ ಮಟೀರಿಯಲ್ ಸ್ಟಾಲ್‌ಗಳು ಜಿಲ್ಲೆಯೇ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಈ ವೇಳೆ ಪಿ.ಟಿ. ದಾಸಪ್ಪನವರ, ಐ.ಪಿ. ಸಮಗಂಡಿ, ರಾಜು ಗುಡಸಾಲಿ, ಎಂ.ಎನ್. ನದಾಫ್, ಇಬ್ರಾಹಿಂ ಕೊಪ್ಪಳ, ಬಸವರಾಜ ಶಲವಡಿ ಸೇರಿದಂತೆ ಇತರರು ಇದ್ದರು.ವಾರ್ಷಿಕ ಸ್ನೇಹ ಸಮ್ಮೇಳನ
ಗಜೇಂದ್ರಗಡ: ಪಟ್ಟಣದ ಕೆಎಸ್‌ಎಸ್ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎನ್‌ಎಸ್‌ಎಸ್ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.ಸಂಸ್ಥೆಯ ಚೇರಮನ್ ರವೀಂದ್ರನಾಥ ದಂಡಿನ ಮಾತನಾಡಿ, ಸಾಧನೆಗೆ ಸಾವಿರ ಮೆಟ್ಟಿಲುಗಳಿರುತ್ತವೆ. ಹೀಗಾಗಿ ಸಾಧನೆಯ ಶಿಖರವನ್ನು ಏರಲು ನಿರಂತರ ಅಧ್ಯಯನ ಎಂಬುದೇ ಸರಳ ಮಾರ್ಗ. ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಶರಣಪ್ಪ ರೇವಡಿ, ಕಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರವಿ ಗಡೇದ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಕೆ. ಹೊಸಳ್ಳಿ, ಸಿಆರ್‌ಪಿ ರಾಘವೇಂದ್ರ ಮ್ಯಾಕಲ್, ರವೀಂದ್ರ ಕವಡಿಮಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ಗೌಡರ, ಆರ್.ವಿ. ಪತ್ತಾರ, ಬಿ.ಕೆ. ಜಾಲಕ್ಕನವರ, ಪಿ.ಎಸ್. ಹಿರೇಮಠ, ಎಂ.ಎ. ಮಳಗಾವಿ, ದೇವು ಕಟ್ಟಿಮನಿ, ಲಕ್ಷ್ಮಿ ಮಾದರ ಸೇರಿ ಇತರರು ಇದ್ದರು.