ಕನ್ನಡಪ್ರಭ ವಾರ್ತೆ ತುಮಕೂರು
ಅವರು ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ತುರ್ತು ಪರಿಸ್ಥಿತಿ 50 ವರ್ಷ ಅಂದು-ಇಂದು ಎನ್ನುವ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಳುವ ವರ್ಗಗಳು ತಮ್ಮ ಅಧಿಕಾರವನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿಯನ್ನು ಹೇರುತ್ತವೆ. ಇದು ಅಪಾಯಕಾರಿ ಬೇಳವಣಿಗೆಯಾಗಿದ್ದು ಯಾವುದೇ ಸರ್ಕಾರಗಳು ತುರ್ತು ಪರಿಸ್ಥಿತಿಯನ್ನು ಹೇರಿದರೆ ಅದನ್ನು ವಿರೋಧಿಸಬೇಕು. ಇದರಿಂದ ರೈತರು, ಕಾರ್ಮಿಕರು ಮತ್ತು ಅಹಿಂದ ವರ್ಗಗಳು ಸಂಕಷ್ಠಗಳನ್ನು ಎದುರಿಸಬೇಕಾಗುತ್ತದೆ. ಈ ತುರ್ತು ಪರಿಸ್ಥಿತಿಯ ವಿರುದ್ದ ರೈತರು, ಕಾರ್ಮಿಕರು ಮತ್ತು ಅಹಿಂದ ವರ್ಗಗಳು ರಾಜಕೀಯ ಪರಿವರ್ತನೆಯ ಹೋರಾಟ ನಡೆಸಬೇಕು ಎಂದರು.ಇಂದು ಶಿಕ್ಷಣ, ಆರೋಗ್ಯ ಸಾಮಾನ್ಯ ಜನರ ಕೈಗೆಟುಕದಂತಾಗಿವೆ. ಕೇವಲ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವ ಬಿಜೆಪಿ ಜನರ ಸಮಸ್ಯೆಗಳನ್ನು ಮರೆಮಾಚಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜನರ ಮೇಲೆ ಹೇರಿದೆ ಎಂದರು.
ಪಂಡಿತ್ ಜವಹರ್ ಮಾತನಾಡಿ, ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದಾಗ ಜನತೆ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ, ಆ ಸಂದರ್ಭದಲ್ಲಿ ಒಂದಿಷ್ಟು ಒಳ್ಳೆಯ ಕೆಲಸಗಳು ನಡೆದಿದ್ದರೂ ಸಹ ತುರ್ತು ಪರಿಸ್ಥಿತಿಯನ್ನು ಒಪ್ಪುವಂತಿಲ್ಲ. ಇಂದು ನಮಗೆ ಅರಿವಿಲ್ಲದ ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪನ್ಯಾಸಕ ಅಶ್ವಥನಾರಾಯಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿ.ಜಿ.ಶಿವಲಿಂಗಯ್ಯ, ಸಿ. ಅಜ್ಜಪ್ಪ, ಸಮುದಾಯದ ಅಶ್ವಥಯ್ಯ, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ, ಎನ್.ಕೆ.ಸುಬ್ರಮಣ್ಯ, ಶಂಕರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.