ರಾಮನಗರ: ಬೆಂಕಿ ಕಿಡಿಯಿಂದಾಗಿ ಹೂ, ಗಿಡಗಳು ಹೊತ್ತಿ ಉರಿದಿರುವಂತಹ ಘಟನೆ ಬೆಂ-ಮೈ ಎಕ್ಸ್ಪ್ರೆಸ್ ವೇನಲ್ಲಿ ಮಾಯಗಾನಹಳ್ಳಿ ಸಮೀಪ ನಡೆದಿದೆ. ಎಕ್ಸ್ ಪ್ರೆಸ್ ವೇ ಸುಂದರವಾಗಿ ಕಾಣಿಸಲೆಂದು ಹೆದ್ದಾರಿಯ ವಿಭಜಕ (ಡಿವೈಡರ್ )ನಲ್ಲಿ ಹೂ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಈ ಹೂವಿನ ಗಿಡಗಳು ಬೆಂಕಿಗಾಹುತಿಯಾಗಿವೆ. ಸಿಗರೇಟ್ ಸೇದಿ ಬಿಸಾಕಿದ ಪರಿಣಾಮ ಕಿಡಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಗೆ ಆವರಿಸಿಕೊಂಡಿತ್ತು. ನೀರಿನ ವಾಹನ ಬರಲು ತಡವಾದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರ ವಾಹನ ತಡೆದು ಬಾಟಲ್ ನೀರು ಹಾಕಿ ಬೆಂಕಿ ನಂದಿಸಿದರು.