ಬುರ್ರಾಕಥಾ ಜಾನಪದ ಕಲಾವಿದೆ ಲಕ್ಷ್ಮೀಬಾಯಿ ನಿಧನ

KannadaprabhaNewsNetwork |  
Published : Oct 19, 2026, 01:15 AM IST
ಲಕ್ಷ್ಮೀಬಾಯಿ ರೇವಲ್ | Kannada Prabha

ಸಾರಾಂಶ

ಬುಡ್ಗ ಜಂಗಮ ಸಮುದಾಯದ ಹಿರಿಯ ಚೇತನ, ಹೆಸರಾಂತ ಬುರ್ರಾಕಥಾ ಜಾನಪದ ಕಲಾವಿದೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀಬಾಯಿ ರೇವಲ್ (78) ಶುಕ್ರವಾರ ಸಂಜೆ 4:30ಕ್ಕೆ ಶಹಾಪುರ ನಗರದ ಬುಡ್ಗ ಜಂಗಮ ಕಾಲೋನಿಯ ತಮ್ಮ ಸ್ವಗೃಹದಲ್ಲಿ ವಯೋಸಹಜವಾಗಿ ಇಹಲೋಕ ತ್ಯಜಿಸಿದರು. ತಮ್ಮ ಜೀವನದುದ್ದಕ್ಕೂ ಬುರ್ರಾ ಕಥೆಯ ಮೂಲಕ ಜಾನಪದ ಕಲೆ ಉಳಿಸಿ ಬೆಳೆಸಿದ ಕೀರ್ತಿ ಅವರದ್ದು. 2014ರಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಬುಡ್ಗ ಜಂಗಮ ಸಮುದಾಯದ ಹಿರಿಯ ಚೇತನ, ಹೆಸರಾಂತ ಬುರ್ರಾಕಥಾ ಜಾನಪದ ಕಲಾವಿದೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀಬಾಯಿ ರೇವಲ್ (78) ಶುಕ್ರವಾರ ಸಂಜೆ 4:30ಕ್ಕೆ ಶಹಾಪುರ ನಗರದ ಬುಡ್ಗ ಜಂಗಮ ಕಾಲೋನಿಯ ತಮ್ಮ ಸ್ವಗೃಹದಲ್ಲಿ ವಯೋಸಹಜವಾಗಿ ಇಹಲೋಕ ತ್ಯಜಿಸಿದರು. ತಮ್ಮ ಜೀವನದುದ್ದಕ್ಕೂ ಬುರ್ರಾ ಕಥೆಯ ಮೂಲಕ ಜಾನಪದ ಕಲೆ ಉಳಿಸಿ ಬೆಳೆಸಿದ ಕೀರ್ತಿ ಅವರದ್ದು. 2014ರಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸಿದ್ದೇಶ್ವರ ಸ್ವಾಮೀಜಿ ಸಂಸ್ಥೆಯಿಂದ ಸಂತಾಪ: ಬುರ್ರಾಕಥಾ ಹಾಡುಗಳ ಮೂಲಕ ಜಾನಪದ ಕಲೆಯ ಸೊಗಡನ್ನು ಜನಸಾಮಾನ್ಯರಿಗೆ ತಲುಪಿಸಿ, ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಜಾನಪದ ಕಲಾವಿದೆ ಲಕ್ಷ್ಮಿಬಾಯಿ ರೇವಲ್ ಅಗಲಿಕೆಯಿಂದ ಜಾನಪದ ಕಲಾ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಬುರ್ರಾಕಥಾ ಹಾಡಿನ ಮೂಲಕ ಜನಪದ ಸಂಸ್ಕೃತಿ ಹಾಗೂ ಕಲೆಯ ಮಹತ್ವ ಸಾರಿದ ಲಕ್ಷ್ಮೀಬಾಯಿ ರೇವಲ್ ಅವರು ತಮ್ಮ ಕಲಾ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು. ಜನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಅದನ್ನು ಜನರಿಗೆ ಪರಿಚಯಿಸುವಲ್ಲಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ತಮ್ಮ ವಿಶಿಷ್ಟ ಗಾಯನ ಶೈಲಿ ಮತ್ತು ಕಲಾ ಪ್ರತಿಭೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಜಾನಪದ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಅವರ ಸುದೀರ್ಘ ಜಾನಪದ ಕಲಾ ಸೇವೆ ಗುರುತಿಸಿ 2014ರಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದರೊಂದಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ 34ಕ್ಕೂ ಹೆಚ್ಚು ಪ್ರಶಸ್ತಿ ಮತ್ತು ಗೌರವಗಳು ಅವರಿಗೆ ಲಭಿಸಿದ್ದವು. ಈ ಸಾಧನೆಗಳು ಅವರ ಕಲಾ ಪ್ರತಿಭೆ ಹಾಗೂ ಜಾನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ಸಾಕ್ಷಿಯಾಗಿವೆ. ಶಹಾಪುರ ನಗರದ ಹೊಸ ಬಸ್ ನಿಲ್ದಾಣದ ಬಸ್ ಡಿಪೋ ಹಿಂಭಾಗದ ಆಶ್ರಯ ಕಾಲೋನಿಯಲ್ಲಿ ಅವರು ವಾಸವಾಗಿದ್ದರು. ಅವರು ಆರು ಮಂದಿ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ ಬಸವೇಶ್ವರ ಸರ್ಕಲ್‌ನಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶೈಲಾ ಪ್ರದೀಪ ಅಣಬಿ, ಸುನೀಲ ಅಣಬಿ, ಭೀಮರಾಯ ಕಟ್ಟಿಮನಿ, ಅಮರೇಶ ಕಟ್ಟಿಮನಿ, ಭೋಜಪ್ಪ ಮುಂಡಾಸ, ಅಮರೇಶ ಶಿರವಾಳ, ಆಂಜನೇಯ, ದೇವು ಹಾದಿಮನಿ, ಕಾಶಪ್ಪ ಕಟ್ಟಿಮನಿ, ಪ್ರದೀಪ ಅಣಬಿ ಹಾಗೂ ಕಲಾಪ್ರೇಮಿಗಳು, ಯುವಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯಲ್ಲಿ ಬೀದಿ ವ್ಯಾಪಾರದ ವಿಚಾರಕ್ಕೆ ಗಲಾಟೆ
ಗ್ಯಾರಂಟಿಗಾಗಿ ರೈತರ ಸಾಲಮನ್ನಾ, ಹಳೇ ಪಿಂಚಣಿ ಜಾರಿಯಿಲ್ಲ: ಬಿಕೆ ಹರಿಪ್ರಸಾದ್‌