ಲಾರಿಗೆ ಬಸ್ ಡಿಕ್ಕಿ: ಮೂವರ ಸಾವು

KannadaprabhaNewsNetwork |  
Published : Aug 17, 2025, 01:34 AM IST
ಪೋಟೋ 10 : ಮೃತಪಟ್ಟ ಲಾರಿ ಚಾಲಕ ಆನಂದ್ | Kannada Prabha

ಸಾರಾಂಶ

ದಾಬಸ್‍ಪೇಟೆ: ಕುರಿ ಮತ್ತು ಮೇಕೆ ತುಂಬಿದ ಲಾರಿಗೆ ವೇಗವಾಗಿ ಬಂದ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಂಪುರ ಹೋಬಳಿಯ ಗುಂಡೇನಹಳ್ಳಿ ಗ್ರಾಮದ ಕಾಮಧೇನು ಹೋಟೆಲ್ ಬಳಿ ಸಂಭವಿಸಿದೆ.

ದಾಬಸ್‍ಪೇಟೆ: ಕುರಿ ಮತ್ತು ಮೇಕೆ ತುಂಬಿದ ಲಾರಿಗೆ ವೇಗವಾಗಿ ಬಂದ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಂಪುರ ಹೋಬಳಿಯ ಗುಂಡೇನಹಳ್ಳಿ ಗ್ರಾಮದ ಕಾಮಧೇನು ಹೋಟೆಲ್ ಬಳಿ ಸಂಭವಿಸಿದೆ.

ತುಮಕೂರು ಜಿಲ್ಲೆಯ ಮಡಕಶಿರಾ ಮೂಲದ ಸೀನಪ್ಪ(50), ಬೆಂಗಳೂರಿನ ಕಲಾಸಿಪಾಳ್ಯದ ನಜೀರ್ ಅಹ್ಮದ್ (36), ಬನಶಂಕರಿಯ ಆನಂದ್ (42) ಮೃತ ದುರ್ದೈವಿಗಳು.

ಮುಧೋಳದಿಂದ ಬೆಂಗಳೂರಿಗೆ ಲಾರಿಯೊಂದರಲ್ಲಿ ಕುರಿ ಮತ್ತು ಮೇಕೆಗಳನ್ನು ತುಂಬಿಕೊಂಡು ಶನಿವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಸಮೀಪದ ಕಾಮಧೇನು ಹೋಟೆಲ್ ಬಳಿ ಕೆಟ್ಟು ನಿಂತಿತ್ತು.

ರಸ್ತೆ ಪಕ್ಕ ಲಾರಿ ನಿಲ್ಲಿಸಿ ಕ್ಲೀನರ್ ಸೀನಪ್ಪ ಹಾಗೂ ನಜೀರ್ ಅಹ್ಮದ್ ಕೆಟ್ಟು ನಿಂತಿದ್ದ ಲಾರಿಯನ್ನು ಸರಿಪಡಿಸುತ್ತಿದ್ದರೆ, ಲಾರಿ ಚಾಲಕ ಆನಂದ್ ರಸ್ತೆ ಪಕ್ಕ ನಿಂತಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಸೀನಪ್ಪ ಸ್ಥಳದಲ್ಲೇ ಮೃತಪಟ್ಟರೆ, ನಜೀರ್ ಅಹ್ಮದ್ ಅವರ ಎರಡು ಕಾಲ ಮೇಲೆ ಬಸ್ ಚಕ್ರ ಹರಿದಿದೆ. ಆನಂದ್‌ಗೆ ತಲೆಗೆ ತೀವ್ರ ಗಾಯಗಳಾಗಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲಾರಿ ಕೆಟ್ಟು ರಸ್ತೆ ಪಕ್ಕದಲ್ಲಿ ನಿಂತಿದ್ದು, ಮತ್ತೊಂದು ಲಾರಿ ಬಂದಿದ್ದು, ಕೆಟ್ಟು ನಿಂತಿದ್ದ ಲಾರಿ ನೋಡಿ ಬಲಭಾಗಕ್ಕೆ ತಿರುಗಿಸಿದ್ದಾನೆ. ಲಾರಿ ಹಿಂದೆ ವೇಗವಾಗಿ ಬರುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಕೆಟ್ಟು ನಿಂತಿದ್ದ ಲಾರಿ ನೋಡದೆ ಡಿಕ್ಕಿ ಹೊಡೆದಿದೆ.

ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ವೆಂಕಟೇಶ್‌ ಪ್ರಸನ್ನ, ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ರವಿ ಭೇಟಿ ಪರಿಶೀಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಪೋಟೋ 8 : ಮೃತಪಟ್ಟ ಲಾರಿ ಕ್ಲೀನರ್ ಸೀನಪ್ಪ

ಪೋಟೋ 9 : ಮೃತಪಟ್ಟ ನಜೀರ್ ಅಹ್ಮದ್

ಪೋಟೋ 10 : ಮೃತಪಟ್ಟ ಲಾರಿ ಚಾಲಕ ಆನಂದ್

ಪೋಟೋ 11 : ಅಪಘಾತದಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿರುವುದು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ