ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಬೆಳಿಗ್ಗೆ ೮.೩೦ಕ್ಕೆ ಧ್ವಜಾರೋಹಣ ಮಾಡುವಾಗ ಆ ಶಾಲೆಯ ಸಿ.ಆರ್.ಸಿ ಬಾಬುರಾವ ಚವ್ಹಾಣ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ನೇರವೇರಿಸಿದ್ದಾರೆ. ಇದನ್ನು ಗಮನಿಸಿದ ಶಾಲೆ ಸುಧಾರಣೆ ಸಮಿತಿ ಅಧ್ಯಕ್ಷ ಕಲ್ಯಾಣರಾವ ಮತ್ತು ಉಪಾಧ್ಯಕ್ಷ ಮಹಾದೇವ ಹಾಗೂ ಸ್ಥಳೀಯರು ಗಮನಕ್ಕೆ ತಂದರು ಸಹ ಸಿಆರ್‌ಸಿ ಅವರು ಗ್ರಾಮಸ್ಥರ ಮಾತಿಗೆ ಗಮನಕೊಡದೇ ನೀವು ಅಧಿಕ ಪ್ರಸಂಗ ಮಾಡಬೇಡಿ ಎಂದು ಗ್ರಾಮಸ್ಥರಿಗೆ ಅವಾಚ್ಯ ಶಬ್ಧಗಳಿಂದ ಬೈದು ಕಳಿಸಿದ್ದಾರೆ. ಕಾರಣ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿಸಿದ ಸಿಆರ್‌ಸಿ ಬಾಬುರಾವ ಚವ್ಹಾಣ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವಂತೆ ಗ್ರಾಮಸ್ಥರಾದ ಮೀರಪಟೇಲ, ಸಂತೋಷ, ಲಾಲಪ್ಪ ಅನೀಲಕುಮಾರ ಗುರುಲಿಂಗ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ನೊಟೀಸ್: ದೇಶದ ತ್ರಿವರ್ಣ ಧ್ವಜವನ್ನು ಉಲ್ಟಾ ಮಾಡಿ ಧ್ವಜಾರೋಹಣ ನೇರವೇರಿಸಿದ ಬಾಬುರಾವ ಚವ್ಹಾಣ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗಿದೆ. ನೋಟಿಸ್‌ಗೆ ಉತ್ತರ ನೀಡಿದ ನಂತರ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಬಿಇಒ ಲಚಮಯ್ಯ ತಿಳಿಸಿದ್ದಾರೆ.