ಬಸ್ಸಿನ ಚಾಲಕ-ನಿರ್ವಾಹಕರು ಪ್ರೀತಿಯ ಸೇವಕರು: ಗೋವಿಂದರಾಜ್

KannadaprabhaNewsNetwork |  
Published : Nov 09, 2026, 01:15 AM IST
8ಕೆಆರ್ ಎಂಎನ್ 5.ಜೆಪಿಜಿಕುದೂರು ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಪ್ರಯಾಣಿಕರು ಹೂವಿನ ಅಲಂಕಾರ ಮಾಡಿ ಆಯುಧ ಪೂಜೆ ಸಲ್ಲಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿದರು. ಯುವ ಮುಖಂಡ ಗೋವಿಂದರಾಜ್ ಹಾಜರಿದ್ದರು. | Kannada Prabha

ಸಾರಾಂಶ

ಕುದೂರು: ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಕೂಡಾ ಅವರು ಜನರ ಪಾಲಿನ ನಿಜವಾದ ಪ್ರೀತಿಯ ಸೇವಕರಾಗಿ ತಮ್ಮ ಕರ್ತವ್ಯ ಪಾಲಿಸುತ್ತಿರುವರು. ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಜೋಪಾನವಾಗಿ ಅವರವರ ಸ್ಥಳಗಳಿಗೆ ಸಾಗಿಸುವ ಬಂಧುಗಳಾಗಿದ್ದಾರೆ ಎಂದು ಯುವ ಮುಖಂಡ ಗೋವಿಂದರಾಜ್ ತಿಳಿಸಿದರು

ಕುದೂರು: ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಕೂಡಾ ಅವರು ಜನರ ಪಾಲಿನ ನಿಜವಾದ ಪ್ರೀತಿಯ ಸೇವಕರಾಗಿ ತಮ್ಮ ಕರ್ತವ್ಯ ಪಾಲಿಸುತ್ತಿರುವರು. ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಜೋಪಾನವಾಗಿ ಅವರವರ ಸ್ಥಳಗಳಿಗೆ ಸಾಗಿಸುವ ಬಂಧುಗಳಾಗಿದ್ದಾರೆ ಎಂದು ಯುವ ಮುಖಂಡ ಗೋವಿಂದರಾಜ್ ತಿಳಿಸಿದರು.

ಕುದೂರು ಗ್ರಾಮದಲ್ಲಿ ಆಯುಧಪೂಜೆ ಪ್ರಯುಕ್ತ ಸರ್ಕಾರಿ ಬಸ್ಸಿನ ಪ್ರಯಾಣಿಕರು ಸೇರಿ ಬಸ್ಸಿಗೆ ಹೂವಿನ ಅಲಂಕಾರ ಮಾಡಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಫಲಪುಷ್ಟ, ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಂದು ಕೆಲಸವನ್ನು ಗೌರವದಿಂದ ನೋಡಬೇಕು. ಜನರಿಗಾಗಿ ಸೇವೆ ಮಾಡುವ ಕೆಎಸ್‌ಆರ್‌ಟಿಸಿ ನೌಕರರನ್ನು ಸಮಾಜ ಕೃತಜ್ಞತೆಯಿಂದ ಅವರ ಸೇವೆಯನ್ನು ಶ್ಲಾಘಿಸಬೇಕು. ಆಗ ನಿಜಕ್ಕೂ ನಮ್ಮದು ನಾಗರೀಕ ಸಮಾಜ ಎನಿಸಿಕೊಳ್ಳುತ್ತದೆ. ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ಪರಸ್ಪರ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಚಾಲಕ ಹನುಮಂತರಾಜು ಮಾತನಾಡಿ, ನಾವು ಇಡೀ ಕರ್ನಾಟಕ ರಾಜ್ಯಾದ್ಯಂತ ವಾಹನ ಚಾಲನೆ ಮಾಡಿದರೂ ಕೆಲವೊಂದು ಊರುಗಳು ನಮ್ಮ ಸ್ವಂತ ಜನ್ಮಸ್ಥಳದಷ್ಟೇ ಪ್ರೀತಿ ತೋರುತ್ತವೆ. ಇದಕ್ಕೆ ಕಾರಣ ಅಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸ. ಅಂತಹ ಊರುಗಳಲ್ಲಿ ಕುದೂರು ಗ್ರಾಮ ನನನ್ನು ಇನ್ನೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಶಕ್ತಿ ನೀಡಿದೆ. ಇಲ್ಲಿನ ಜನರ ಪ್ರೀತಿ-ವಿಶ್ವಾಸ ನಮ್ಮ ಕೆಲಸ ಪ್ರೋತ್ಸಾಹದಾಯಕವಾಗಿದೆ. ನಮ್ಮನ್ನು ಪ್ರೀತಿ ಆದರದಿಂದ ನಡೆಸಿಕೊಂಡಿರುವ ಪ್ರಯಾಣಿಕರು ಗ್ರಾಮಸ್ಥರು ನಮ್ಮ ಸೇವಾವೃತ್ತಿಯಲ್ಲಿ ಅಚ್ಚಳಿಯದೆ ಶಾಶ್ವತವಾಗಿ ಉಳಿಯುತ್ತದೆ. ನಾವು ಕುದೂರು ಗ್ರಾಮಸ್ಥರು, ಪ್ರಯಾಣಿಕರಿಗೆ ಋಣಿಗಳು ಎಂದು ಹೇಳಿದರು.

ನಿರ್ವಾಹಕ ಮಾರುತಿ ಮಾತನಾಡಿ, ಬಸ್ಸುಗಳು ನಮ್ಮ ಪಾಲಿನ ದೇವ ಮಂದಿರಗಳಿದ್ದಂತೆ. ಇಲ್ಲಿಗೆ ಬಂದು ಪ್ರಯಾಣ ಮಾಡುವ ಜನರನ್ನೇ ದೇವರೆಂದು ಭಾವಿಸುತ್ತೇವೆ. ಅವರ ಪ್ರೀತಿ ಮತ್ತು ವಿಶ್ವಾಸ, ಸಣ್ಣ ಸಣ್ಣ ಕೋಪ, ಮುನಿಸುಗಳು ಎಲ್ಲವೂ ನಮ್ಮಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎನ್ನುವುದಕ್ಕೆ ಇಂದಿನ ಆಯುಧಪೂಜೆ ಸಮಾರಂಭ ಸಾರ್ವತ್ರಿಕವಾಗಿ ಪ್ರಕಟಿಸಿದೆ. ಗ್ರಾಮಸ್ಥರು ನಮಗೆ ನೀಡಿರುವ ಗೌರವ ಸನ್ಮಾನ, ಪ್ರೀತಿಯನ್ನು ನಾವೆಂದೂ ಮರೆಯಲಾಗದು. ತಮಗೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಗೋವಿಂದರಾಜ್ ಚಾಲಕರು ಮತ್ತು ನಿರ್ವಾಹಕರಿಗೆ ಹೊಸ ಉಡುಪು ಕೊಟ್ಟು ಗೌರವಿಸಿದರು. ಬೆರಳಚ್ಚುಗಾರ್ತಿ ರಜನಿ, ಶೇಖರ್, ಹುನುಮಂತರಾಯಪ್ಪ, ಶೇಖರ್, ಲೋಕೇಶ್, ಗಂಗರಾಜ್, ಗ್ರಾಮಸ್ಥರು ಹಾಜರಿದ್ದರು.

8ಕೆಆರ್ ಎಂಎನ್ 5.ಜೆಪಿಜಿ

ಕುದೂರು ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಪ್ರಯಾಣಿಕರು ಹೂವಿನ ಅಲಂಕಾರ ಮಾಡಿ ಆಯುಧ ಪೂಜೆ ಸಲ್ಲಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿದರು. ಯುವ ಮುಖಂಡ ಗೋವಿಂದರಾಜ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ