ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನೇತೃತ್ವದಲ್ಲಿ ಗುರುವಾರ, ಖಾಸಗಿ ಬಸ್ ದರ ಮತ್ತು ಗ್ಯಾಸ್ ದರ ಹೆಚ್ಚಳ ವಿರೋಧಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಮಣಿಪಾಲ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನೇತೃತ್ವದಲ್ಲಿ ಗುರುವಾರ, ಖಾಸಗಿ ಬಸ್ ದರ ಮತ್ತು ಗ್ಯಾಸ್ ದರ ಹೆಚ್ಚಳ ವಿರೋಧಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಚಂದ್ರಶೇಖರ್ ವಿ., ಎಚ್. ನರಸಿಂಹ, ರಾಜು ಪಡುಕೋಣೆ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಭಾಕರ್ ಕುಂದರ್, ಉಮೇಶ್ ಕುಂದರ್, ಸುಭಾಸ್ ನಾಯಕ್, ಬಲ್ಕೀಸ್, ಪಕ್ಷದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ್ ಗೊಲ್ಲ, ಸದಸ್ಯರಾದ ಮಹಾಬಲ ಒಡೆಯರಹೋಬಳಿ, ನಳಿನಿ, ಶೀಲಾವತಿ, ಚಿಕ್ಕ ಮೊಗವೀರ, ನಾಗೇಶ್, ಸಿಐಟಿಯು ಮುಖಂಡರಾದ ಸುರೇಂದ್ರ, ಸುನೀತಾ ಶೆಟ್ಟಿ, ನಾಗರತ್ನ ಪಡುವರಿ, ಜಯಂತಿ, ಸಾರಿಕಾ, ಶಾರದ, ಶರ್ಮಿಳಾ, ಸೌಮ್ಯ ಮುಂತಾದರು ಭಾಗವಹಿಸಿದ್ದರು. ಪ್ರತಿಭಟಟನಾ ಕಾರ್ಯಕ್ರಮವನ್ನು ಸಿಪಿಐಎಂ ಪಕ್ಷ ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ ಎಸ್. ಕಾಂಚನ್ ನಿರ್ವಹಿಸಿದರು ಮತ್ತು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಾಗರತ್ನ ನಾಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.