ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಮಣಿಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಮತ್ತು ರೋವರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶದ ಖಾಸಗಿ ಕಾಲೇಜುಗಳಿಗೆ ಸಮನಾಗಿ ಕಾಲೇಜಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ನೀಡಿದ್ದೇವೆ. ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಶಿಕ್ಷಕರು ಸಹ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ವಿದ್ಯೆ ಸಾಧಕರ ಸ್ವತ್ತು. ವಿದ್ಯೆ ಕಲಿತವರು ವಿಶ್ವದಲ್ಲೆಡೆಯಾದರೂ ಬದುಕಬಹುದು. ಕಠಿಣ ಪರಿಶ್ರಮದಿಂದ ವ್ಯಾಸಂಗದಲ್ಲಿ ತೊಡಗಿ ವಿದ್ಯಾರ್ಥಿಗಳು ಸಾಧನೆ ಮಾಡಿ ಮಾದರಿಯಾಗಬೇಕು. ಎತ್ತರಕ್ಕೆ ಬೆಳದ ವಿದ್ಯಾರ್ಥಿ ಸೇವಾ ಮನೋಭಾದಿಂದ ಸಮಾಜದ ಪ್ರಗತಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಉನ್ನತ ವ್ಯಾಸಂಗಕ್ಕೆ ಮುನ್ನುಡಿ ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಷ್ಟವಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಈಗಿನಿಂದಲೇ ಪ್ರಯತ್ನಗಳನ್ನು ಆರಂಭಿಸಿ ಯಶಸ್ಸು ಸಾಧಿಸಬೇಕು ಕರೆ ನೀಡಿದರು.
ಇದೇ ವೇಳೆ ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ, ಗ್ರಾಪಂ ಅಧ್ಯಕ್ಷೆ ಸೌಭಾಗ್ಯ, ಪಿಡಿಓ ಸುಧಾ, ಸಿಡಿಸಿ ಸದಸ್ಯರಾದ ದಾಸೇಗೌಡ, ಅಭಿಷೇಕ್, ಕಬ್ಬಾಳಯ್ಯ, ಎನ್‌ಎಸ್‌ಎಸ್ ಸಂಚಾಲಕ ಪ್ರಸನ್ನ, ಪ್ರೊ.ಶೋಭಾ ಇತರರಿದ್ದರು.