ಮಕ್ಕಳಲ್ಲಿ ವ್ಯವಹಾರಿಕ,ಸಾಮಾನ್ಯ ಜ್ಞಾನ ಬೆಳೆಸಬೇಕು: ತ್ಯಾಗರಾಜ್

KannadaprabhaNewsNetwork |  
Published : Jan 26, 2025, 01:31 AM IST
್ಿಿ | Kannada Prabha

ಸಾರಾಂಶ

ಶೃಂಗೇರಿಇಂದಿನ ಮುಂದುವರಿದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ಶಿಕ್ಷಣದ ಜೊತೆ ವ್ಯವಹಾರಿಕ, ಸಾಮಾನ್ಯ ಜ್ಞಾನ ಬೆಳೆಸ ಬೇಕು ಎಂದು ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಲ್. ತ್ಯಾಗರಾಜ್ ಹೇಳಿದರು.

ಬಿಆರ್ ವಿ, ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಶಾಲೆಯಲ್ಲಿ ಆಹಾರ ಮೇಳ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಇಂದಿನ ಮುಂದುವರಿದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ಶಿಕ್ಷಣದ ಜೊತೆ ವ್ಯವಹಾರಿಕ, ಸಾಮಾನ್ಯ ಜ್ಞಾನ ಬೆಳೆಸ ಬೇಕು ಎಂದು ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಲ್. ತ್ಯಾಗರಾಜ್ ಹೇಳಿದರು.

ಪಟ್ಟಣದ ಬಿಆರ್ ವಿ ಹಾಗೂ ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಪ್ರೌಡಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ ಬದುಕಿಗೆ ಪೂರಕವಾದ ಶಿಕ್ಷಣದ ಅನಿವಾರ್ಯತೆಯಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಕ್ಕಳು ವ್ಯವಹಾರಿಕವಾಗಿಯೂ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಣ ಪಡೆಯುವುದು ಹಕ್ಕು ಹಾಗೂ ಕರ್ತವ್ಯ. ಆದರೆ ಸಮಾಜದಲ್ಲಿ ಹೇಗೆ ವ್ಯವಹರಿಸಬೇಕು ಎಂಬ ಸಾಮಾನ್ಯ ಜ್ಞಾನ ಕಲಿಸಬೇಕು. ಅವರು ವ್ಯವಹಾರ ಜ್ಞಾನ ತಿಳಿಯುವುದರಿಂದ ಪೋಷಕರಿಗೆ ಸಹಕರಿಸಲು ಸಹಾಯವಾಗುತ್ತದೆ. ಈ ರೀತಿ ಜ್ಞಾನ ಗಳಿಸುವುದರಿಂದ ಭವಿಷ್ಯದಲ್ಲಿ ಬದುಕಿಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಪಟ್ಟಣ, ಗ್ರಾಮೀಣ ಪ್ರದೇಶಗಳು ಎನ್ನದೇ ಮಕ್ಕಳು ತಮ್ಮ ಸಂಪ್ರದಾಯ, ಆಹಾರ ಪದಾರ್ಥ ತಯಾರಿಸಿ ಇಂತಹ ಮೇಳಗಳಲ್ಲಿ ಪ್ರದರ್ಶಿಸುವುದರಿಂದ ಅವರಲ್ಲಿ ಸಾಕಷ್ಟು ಉತ್ಸಾಹ, ಉತ್ತೇಜನ ಮೂಡಿಸುತ್ತದೆ. ಆಹಾರ ಪದ್ಧತಿ, ಗ್ರಾಮೀಣ ಕಲೆಗಳು, ತರಕಾರಿಗಳು, ವಸ್ತುಗಳು ಹೀಗೆ ಎಲ್ಲವೂ ಬೆಳಕಿಗೆ ಬರುತ್ತದೆ. ವಿವಿಧ ರೀತಿಯಲ್ಲಿ ಉಪಯೋಗವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಹೇಶ್ವರಪ್ಪ, ಶಿಕ್ಷಕರು ಉಪಸ್ಥಿತರಿದ್ದರು.

ಬೆಳಿಗ್ಗೆಯಿಂದ ಮಕ್ಕಳು ಪ್ರತ್ಯೇಕವಾಗಿ ಮಳಿಗೆಗಳ ರೂಪದಲ್ಲಿ ಸಿಹಿ, ಖಾದ್ಯ ತಿಂಡಿ ತಿನಿಸುಗಳು, ಪಾನಿಯ, ಸಾಂಬಾರು ಪದಾರ್ಥಗಳು, ತರಕಾರಿಗಳು ಹೀಗೆ ವಿಧ ವಿಧದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಸಿದರು. ಗ್ರಾಹಕರು ಬೆಳಿಗ್ಗೆಯಿಂದಲೂ ಮೇಳದಲ್ಲಿ ಪಾಲ್ಗೊಂಡು ಮಕ್ಕಳಿಂದ ವಸ್ತುಗಳನ್ನು ಖರೀದಿಸಿದರು. ಮಕ್ಕಳ ಉತ್ಸಾಹ ಇಮ್ಮಡಿಗೊಂಡು ವ್ಯಾಪಾರದ ಭರಾಟೆ ಜೋರಾಗಿತ್ತು.

25 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಪ್ರೌಡಶಾಲೆಯಲ್ಲಿ ಮಕ್ಕಳಿಂದ ಆಹಾರ ಮೇಳ ಕಾರ್ಯಕ್ರಮ ನಡೆಯುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ