ಪುಸ್ತಕದ ಜ್ಞಾನದ ಜೊತೆಗೆ ವ್ಯಾಪಾರದ ಅನುಭವವೂ ಮುಖ್ಯ

KannadaprabhaNewsNetwork |  
Published : Nov 15, 2026, 01:15 AM IST
ಪುಸ್ತಕದ ಜ್ಞಾನದ ಜೊತೆಗೆ ವ್ಯಾಪಾರದ ಅನುಭವವೂ ಮುಖ್ಯ ಮಕ್ಕಳ ಸಂತೆ, ಆಹಾರ ಮೇಳದಲ್ಲಿ ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ | Kannada Prabha

ಸಾರಾಂಶ

ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣುಗಳು ಹಾಗೂ ತಿಂಡಿ-ತಿನಿಸುಗಳ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಗ್ರಾಹಕರನ್ನು ಆಕರ್ಷಿಸಿ, ವಸ್ತುಗಳ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್, ಮಕ್ಕಳಿಗೆ ಬಾಲ್ಯದಲ್ಲಿ ವ್ಯವಹಾರಿಕ ಜ್ಞಾನ ನೀಡುವುದು ಅತ್ಯಂತ ಉಪಯುಕ್ತ. ಇಂತಹ ಚಟುವಟಿಕೆಗಳಿಂದ ಮಾರುಕಟ್ಟೆಯಲ್ಲಿ ವ್ಯವಹರಿಸುವ ಕೌಶಲ್ಯ, ಹಣದ ಮೌಲ್ಯ ಹಾಗೂ ಸ್ವಾವಲಂಬನೆಯ ಅರಿವು ಮೂಡುತ್ತದೆ ಎಂದರು.

ಅರಸೀಕೆರೆ: ಪಠ್ಯಪುಸ್ತಕಗಳ ಮೂಲಕ ಪಡೆಯುವ ಶಿಕ್ಷಣದ ಜತೆಗೆ ದೈನಂದಿನ ಜೀವನದಲ್ಲಿ ಅಗತ್ಯವಾಗಿರುವ ಆರ್ಥಿಕ ಮತ್ತು ವ್ಯವಹಾರಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸ್ವತಃ ವ್ಯಾಪಾರ ಮಾಡುವ ಅನುಭವ ನೀಡುವ ಮೂಲಕ ಹಣದ ಮೌಲ್ಯ, ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಹಾಗೂ ಮಾರುಕಟ್ಟೆಯ ಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ರೋಟರಿ ಶಾಲೆಯಲ್ಲಿ ಆಹಾರ ಮೇಳ ಮತ್ತು ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣುಗಳು ಹಾಗೂ ತಿಂಡಿ-ತಿನಿಸುಗಳ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಗ್ರಾಹಕರನ್ನು ಆಕರ್ಷಿಸಿ, ವಸ್ತುಗಳ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್, ಮಕ್ಕಳಿಗೆ ಬಾಲ್ಯದಲ್ಲಿ ವ್ಯವಹಾರಿಕ ಜ್ಞಾನ ನೀಡುವುದು ಅತ್ಯಂತ ಉಪಯುಕ್ತ. ಇಂತಹ ಚಟುವಟಿಕೆಗಳಿಂದ ಮಾರುಕಟ್ಟೆಯಲ್ಲಿ ವ್ಯವಹರಿಸುವ ಕೌಶಲ್ಯ, ಹಣದ ಮೌಲ್ಯ ಹಾಗೂ ಸ್ವಾವಲಂಬನೆಯ ಅರಿವು ಮೂಡುತ್ತದೆ ಎಂದರು.ಸಿಆರ್‌ಪಿ ವಿಷ್ಣುವರ್ಧನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗಣಿತ ವಿಷಯದ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗುವುದರ ಜತೆಗೆ ವಸ್ತುಗಳ ಗುಣಮಟ್ಟ ಗುರುತಿಸುವುದು, ಬೆಲೆ ನಿರ್ಧರಿಸುವುದು ಮತ್ತು ಖರೀದಿ-ಮಾರಾಟದ ಬಗ್ಗೆ ತಿಳುವಳಿಕೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು. ಆಹಾರ ಮೇಳದಲ್ಲಿ ಚುರುಮುರಿ, ಪಾನಿಪುರಿ, ಜ್ಯೂಸ್, ವಿವಿಧ ಬಗೆಯ ಹಣ್ಣುಗಳು, ತರಕಾರಿಗಳು ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಳಿಗೆಗಳು ಗಮನ ಸೆಳೆದವು. ವಿದ್ಯಾರ್ಥಿಗಳು ವ್ಯಾಪಾರಿಗಳಾಗಿ, ಶಿಕ್ಷಕರು ಮತ್ತು ಪೋಷಕರು ಗ್ರಾಹಕರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಇನ್ನರ್‌ವ್ಹೀಲ್ ಅಧ್ಯಕ್ಷೆ ಶ್ವೇತಾ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೇ ಕಾರ್ಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ಘೇರಾವ್
ನಂದನ ಪ್ಯಾಲೇಸ್‌ನಿಂದ ಸಿಬ್ಬಂದಿಗೆ ಕಾರ್, ಬೈಕ್ ಗಿಫ್ಟ್‌