ಮಕ್ಕಳಿಗೆ ವ್ಯವಹಾರ ಜ್ಞಾನ ಅತ್ಯಗತ್ಯ: ಬಿಇಓ ರಫೀಕ್

KannadaprabhaNewsNetwork |  
Published : Jan 29, 2024, 01:31 AM IST
ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಬಿಇಒ ಮಹಮ್ಮದ್‌ ರಫೀಕ್‌ ಖಾನ್‌ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳ ಸಂತೆ ನೈಜ ವಾರದ ಸಂತೆ ಮೀರಿಸುವಂತಿದ್ದು, ಇದಕ್ಕೆ ಕಾರಣರಾದ ಶಿಕ್ಷಕರ, ಪೋಷಕರ ಸಹಕಾರ ಮತ್ತು ಮಕ್ಕಳ ಪಾಲ್ಗೊಳ್ಳುವಿಕೆಯಿಂದ ಇದು ಸಾಧ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫೀಕ್ ಖಾನ್ ಹೇಳಿದರು.

- ಹರಗುವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಆಯೋಜನೆ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಿರಿಯ ವಯಸ್ಸಿನಿಂದಲೇ ಮಕ್ಕಳಿಗೆ ವ್ಯವಹಾರ ಜ್ಞಾನ ಅಗತ್ಯವಾಗಿದ್ದು, ಮಾರುಕಟ್ಟೆಯಲ್ಲಿನ ವಸ್ತುಗಳ ಗುಣಮಟ್ಟದ ಬಗ್ಗೆ ಮಾಹಿತಿ ಜತೆಗೆ ಭವಿಷ್ಯದಲ್ಲಿ ಜೀವನೋಪಾಯ ಕ್ಕಾಗಿ ಮಕ್ಕಳ ಸಂತೆಯು ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫೀಕ್ ಖಾನ್ ತಿಳಿಸಿದರು.

ತಾಲೂಕಿನ ಹರಗುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಹಮ್ಮಿಕೊಳ್ಳಲಾದ ಮಕ್ಕಳ ಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಂತೆ ನೈಜ ವಾರದ ಸಂತೆ ಮೀರಿಸುವಂತಿದ್ದು, ಇದಕ್ಕೆ ಕಾರಣರಾದ ಶಿಕ್ಷಕರ, ಪೋಷಕರ ಸಹಕಾರ ಮತ್ತು ಮಕ್ಕಳ ಪಾಲ್ಗೊಳ್ಳುವಿಕೆಯಿಂದ ಇದು ಸಾಧ್ಯವಾಗಿದೆ. ಮಕ್ಕಳ ಜೀವನಕ್ಕೆ ನೈಜ ಅನುಭವವನ್ನು ನೀಡುವಂತಹದ್ದಾಗಿದೆ, ವ್ಯಾಪಾರ ಚಾಕಚಕ್ಯತೆ ಲಾಭ ನಷ್ಟದ ಅರಿವಿನೊಂದಿಗೆ ಜೀವನೋಪಾಯವನ್ನು ಸಂತೆ ಕಲಿಸುತ್ತದೆ ಎಂದ ಅವರು, ಇದರಿಂದ ವಸ್ತುಗಳ ಕಳಪೆ ಉತ್ತಮ ಜತೆಗೆ ಯಾವಾಗ ಬಳಸಬೇಕು ಎಂಬುವಂತಹ ವೈವಿಧ್ಯದ ಜ್ಞಾನ ಸಂತೆ ಮೂಲಕ ದೊರೆಯಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ,ಈ ಮಕ್ಕಳ ಸಂತೆಯನ್ನು ನೋಡಿ ನಿಜವಾಗಲೂ ನಮ್ಮೂರಿನಲ್ಲಿ ಹೊಸದಾಗಿ ಸಂತೆ ಪ್ರಾರಂಭವಾಗಿದೆ ಎಂದು ಸಂತೋಷದಿಂದ ಮಕ್ಕಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶಿವಾನಂದಪ್ಪ ಬಿ, ಶಾಲಾ ಮಕ್ಕಳ ಸಂತೆಯ ಪರಿಕಲ್ಪನೆಯನ್ನು ಎಲ್ಲ ಶಿಕ್ಷಕರ ಸಲಹೆ ಸಹಕಾರದಿಂದ ಆಯೋಜಿಸಿದ್ದು, ವ್ಯಾಪಾರದಲ್ಲಿ ಪ್ರಾಮಾಣಿಕತೆ ಮುಖ್ಯವಾಗಿದ್ದು, ಕಲಬೆರಕೆಯಿಂದಾಗಿ ಹಲವಾರು ದುಷ್ಪರಿಣಾಮವಾಗುವುದನ್ನು ತಡೆಯಲು ಈ ಅನುಭವ ಮಕ್ಕಳಗೆ ನೆರವಾಗುವುದು. ಇದಕ್ಕೆ ಪೋಷಕರೆಲ್ಲರೂ ಸಹಕಾರ ನೀಡಲು ಮನವಿ ಮಾಡಿದರು.

ಪ್ರಭಾರಿ ಮುಖ್ಯ ಶಿಕ್ಷಕ ಮಧುಕೇಶ್ವರ ಎಚ್.ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ರಾಜೇಂದ್ರ,ರಾಘವೇಂದ್ರ, ಕಾಶಿನಾಥ್,ಸವಿತಾಬಾಯಿ,ಆಶಾ ರಾಣಿ ಮಕ್ಕಳ ಸಂತೆಗೆ ಸಹಕರಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರವಿಕುಮಾರ್, ಸಿಆರ್‌ಪಿ ಪ್ರವೀಣ್ ಹಾಗೂ ಗ್ರಾಮಸ್ಥರು ಪೋಷಕರು ಹಾಜರಿದ್ದು ಮಕ್ಕಳ ಸಂತೆಯಲ್ಲಿನ ಅಗತ್ಯ ವಸ್ತುಗಳನ್ನು ಖರೀದಿಸಿ ಮಕ್ಕಳಿಗೆ ಸಂತೆಯ ಸಂಭ್ರಮವನ್ನು ಅನುಭವಿಸಲು ಸಹಕರಿಸಿದರು. ಮಧುಕೇಶ್ವರ್‌ ಸ್ವಾಗತಿಸಿ,ಶಿವಾನಂದಪ್ಪ ನಿರೂಪಿಸಿ,ಪುಲಾವತಿ ವಂದಿಸಿದರು

ಫೋಟೋ .28 ಕೆ.ಎಸ್‌.ಕೆ.ಪಿ 2: ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಬಿಇಒ ಮಹಮ್ಮದ್‌ ರಫೀಕ್‌ ಖಾನ್‌ ಮಾತನಾಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ