ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮುಖ್ಯ: ವೈ.ಕೆ.ತಿಮ್ಮೇಗೌಡ

KannadaprabhaNewsNetwork |  
Published : Feb 04, 2025, 12:33 AM IST
3ಕೆಎಂಎನ್ ಡಿ12 | Kannada Prabha

ಸಾರಾಂಶ

ಶಾಲೆಗೆ ಬಂದು ಅಕ್ಷರ ಕಲಿಸಿ, ಸಂತೆ ಮಾಡಿ ಲೆಕ್ಕ ಕಲಿ ಎನ್ನುವಂತಿತ್ತು. ಮೇಳಗಳಲ್ಲಿ ವ್ಯಾಪಾರ ವಹಿವಾಟು, ಲೆಕ್ಕಾಚಾರಗಳು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ, ಹಣದ ಬೆಲೆ ತಿಳಿಯಬಹುದು. ಮಕ್ಕಳು ಕೇವಲ ಅಂಕ ಗಳಿಸಿದರೆ ಸಾಲದು, ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನ ಕಲಿಯಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಿಗೆ ಪಠ್ಯದ ಜೊತೆ ವ್ಯವಹಾರಿಕ ಜ್ಞಾನ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾದಿಕಾರಿ ವೈ.ಕೆ.ತಿಮ್ಮೇಗೌಡ ಹೇಳಿದರು.

ಚಿಕ್ಕಮಂದಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಾತನಾಡಿ, ಮಕ್ಕಳು ಕೇವಲ ಅಂಕ ಗಳಿಸಿದರೆ ಸಾಲದು, ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನ ಕಲಿಯಬೇಕು ಎಂದರು.

ಸುತ್ತಮುತ್ತಲಿನ ದೈನಂದಿನ ಬದುಕಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸುವ ಜ್ಞಾನ ಬೇಕಿದೆ. ಮಕ್ಕಳ ಸಂತೆ ಮಕ್ಕಳಿಗೆ, ಪೋಷಕರಿಗೆ ಖುಷಿ ಕೊಡುವ ಜೊತೆಗೆ ಹಣಕಾಸಿನ ವ್ಯವಹಾರ ತಿಳಿಯಲಿದೆ ಎಂದರು.

ಶಾಲೆಗೆ ಬಂದು ಅಕ್ಷರ ಕಲಿಸಿ, ಸಂತೆ ಮಾಡಿ ಲೆಕ್ಕ ಕಲಿ ಎನ್ನುವಂತಿತ್ತು. ಮೇಳಗಳಲ್ಲಿ ವ್ಯಾಪಾರ ವಹಿವಾಟು, ಲೆಕ್ಕಾಚಾರಗಳು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ, ಹಣದ ಬೆಲೆ ತಿಳಿಯಬಹುದು ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮೇಗೌಡ ಮಾತನಾಡಿ, ಹಳ್ಳಿಗಾಡಿನ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿ, ಓದಿಗೆ ಮದ್ದಿನಂತೆ. ಇಂತಹ ಕಾರ್ಯಕ್ರಮಗಳು ಪ್ರೇರಕ ಶಕ್ತಿಯಾಗಲಿವೆ ಎಂದರು.

ಮಕ್ಕಳು ಮನೆಯಿಂದಲೇ ಪೋಷಕರಿಂದ ತಯಾರಿಸಿಕೊಂಡು ತಂದಿದ್ದ ಗೋಬಿ ಮಂಚೂರು, ವಡೆ, ಚುರುಮುರಿ, ಸೊಪ್ಪು, ತರಕಾರಿಯನ್ನು ತಂದು ಖುಷಿಯಿಂದ ಮಾರಾಟ ಮಾಡಿದರು. ಪೋಷಕರು ಖುಷಿಯಿಂದ ಮಕ್ಕಳು ತಂದು ಜೋಡಿಸಿಟ್ಟಿದ್ದ ಸಂತೆಯಲ್ಲಿ ಚೌಕಾಸಿ ಮಾಡಿ ಖರೀದಿಸಿ ಉತ್ತೇಜಿಸಿದರು.

ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂ ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರೈತಪರ ಹೋರಾಟಗಾರ್ತಿ ನಂದಿನಿ ಜಯರಾಮು, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಕೃಷ್ಣನಾಯಕ್, ಸಿಆರ್‌ಪಿ ಕೆ.ಎಸ್. ಜಯರಾಮ, ಶ್ರೀಕಾಂತರಾಜೆ ಅರಸ್, ಮುಖ್ಯ ಶಿಕ್ಷಕಿ ಬೇಬಿ, ಶಿಕ್ಷಕ ತಮ್ಮಯ್ಯ, ಜಿ.ಎಸ್. ಮಂಜು, ಪ್ರಕಾಶ್, ಅಣ್ಣಾಜಪ್ಪ,ರಾಜಪ್ಪ, ವೀಣಾ, ರೇವತಿ,ಗ್ರಾಪಂ, ಸದಸ್ಯೆ ನಿಂಗಮ್ಮ ಮಂಜೇಗೌಡ, ಎಸ್ಡಿಎಂಸಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ