- ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದ ಕಂಬದ ಬೀದಿ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ 5ನೇ ದಿನದಂದು ದೇವಿಗೆ ಸ್ಕಂದಮಾತಾ ಅಲಂಕಾರವನ್ನು ಬೆಣ್ಣೆಯಿಂದ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಣ್ಣೆ ಅಲಂಕಾರವನ್ನು ಕಣ್ತುಂಬಿಕೊಂಡು ಭಕ್ತ ಸಮೂಹ ದರ್ಶನ ಪಡೆದು ದೈವಿ ಕೃಪೆಗೆ ಪಾತ್ರರಾದರು ಎಂದು ದೇವಸ್ಥಾನದ ಶರನ್ನವರಾತ್ರಿ ಪೂಜಾರಿ ಕುಬೇರಸ್ವಾಮಿ ತಿಳಿಸಿದರು.ದೇವಾಲಯದ ಶರನ್ನವರಾತ್ರಿ ಮಹೋತ್ಸವದ ಸದಸ್ಯೆ ಜ್ಯೋತಿಶಿವನಗೌಡ ಮಾತನಾಡಿ ನವರಾತ್ರಿ ದೇವಿಯನ್ನು 9 ದಿನ ಆರಾಧಿಸುವ ಹಬ್ಬ. ಶರವನ್ನರಾತ್ರಿ ಆರಂಭವಾಗಿ ನಾಲ್ಕು ದಿನಗಳು ಪೂರ್ಣಗೊಂಡಿದ್ದು ಶ್ರೀ ದುರ್ಗಮ್ಮ ದೇವಿಗೆ ಪ್ರತಿದಿನವೂ ಅತ್ಯಂತ ವಿಶಿಷ್ಟ ಆಲಂಕಾರದೊಂದಿಗೆ ಪೂಜಿಸಲಾಗುತ್ತಿದೆ. ವಿವಿಧ ಸ್ವರೂಪದ ಆಲಂಕಾರದೊಂದಿಗೆ ಭಕ್ತ ಸಮೂಹವನ್ನು ಆಕರ್ಷಿಸಿದ್ದಾಳೆ. 5ನೇ ದಿನದಂದು ಸ್ಕಂದಮಾತಾ ಅಲಂಕಾರದಲ್ಲಿ ಬೆಣ್ಣೆಯಿಂದ ಸಿಂಗರಿಸಿ ಪೂಜಿಸಲಾಗಿದೆ.ಸ್ಕಂದದೇವಿ ಕಮಲದ ಹೂ ಹಿಡಿದು ಸಿಂಹದ ಮೇಲೆ ಕುಳಿತು ತನ್ನ ತೊಡೆ ಮೇಲೆ ಮಗುವನ್ನು ಕೂರಿಸಿಕೊಂಡು ತಾಯಿ ರೂಪದಲ್ಲಿ ದೇವಿ ಪ್ರೀತಿ, ವಾತ್ಸಲ್ಯ, ಸಹಾನುಭೂತಿ, ವಿನಮ್ರತೆ, ಸಂತೋಷ, ಹಾಗೂ ಕರುಣೆ ನೀಡಿ ತನ್ನ ಭಕ್ತರನ್ನು ಮಕ್ಕಳಂತೆ ರಕ್ಷಿಸುತ್ತಾಳೆಂಬ ನಂಬಿಕೆಇದೆ. ವಿಶೇಷವಾಗಿ ಸಂತಾನ ಬಯಸುವ ದಂಪತಿ ಈ ದಿನದ ಪೂಜೆಯಿಂದ ಅಪಾರ ಅನುಗ್ರಹ ಪಡೆಯುತ್ತಾರೆ ಎಂಬ ನಂಬಿಕೆ ಬೇರೂರಿದೆ ಎಂದರು.ಈ ದಿನದ ಸೇವಾಕರ್ತರಾದ ಜೀವಿತ ಕೃಷ್ಣಮೂರ್ತಿ ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು. ಸಂಜೆ ವಿವೇಕ ಜಾಗೃತಿ ಬಳಗ ಮಾತೆಯರಿಂದ ದೇವಿ ಹಾಡುಗಳು ನಂತರ ಮಹಾಮಂಗಳಾರತಿ ಹಾಗೂ ಮಾತೆಯರಿಂದ ನಿಂಬೆ ಹಣ್ಣಿನ ದೀಪ ದಿಂದ ದೇವಿಗೆ ಆರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.-
27ಕೆಟಿಆರ್.ಕೆ.1ಃ . ತರೀಕೆರೆ ಪಟ್ಟಣದ ಕಂಬದ ಬೀದಿಯ ಶ್ರೀ ದುರ್ಗಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ 5ನೇ ದಿನದ ಸ್ಕಂದಮಾತಾ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.