ಶ್ರೀಗಳ ಸಂಗೀತ ಚಿಕಿತ್ಸಾ ಪರಿಕಲ್ಪನೆ ಅದ್ಭುತ

KannadaprabhaNewsNetwork |  
Published : Sep 28, 2025, 02:00 AM IST
99 | Kannada Prabha

ಸಾರಾಂಶ

ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಗಳು ಧ್ಯಾನ ಮತ್ತು ಚಿಕಿತ್ಸೆಗೆ ಸಂಗೀತ ಎಂಬ ಮಹಾದರ್ಶನವನ್ನು ರೂಪಿಸುವುದರಲ್ಲಿ ಹಾಗೂ ವಿಶ್ವದಾದ್ಯಂತ ಹರಡುವುದರಲ್ಲಿ ದೀಪಸ್ತಂಭರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುಯೋಗ ಸಂಗೀತ ನಾದ ಭವನ ಎಂಬ ಪರಿಕಲ್ಪನೆಯೇ ಅದ್ಭುತ, ಇದೊಂದು ಪ್ರೇರಣದಾಯಕ ಶಕ್ತಿ, ಇದಕ್ಕೆ ಕಾರಣರು ದೈವ ಸ್ವರೂಪಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಣ್ಣಿಸಿದರು.ಶನಿವಾರ ಸಂಜೆ ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನದ ಉದ್ಘಾಟಿಸಿ ಅವರು ಮಾತನಾಡಿದರು.ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಗಳು ಧ್ಯಾನ ಮತ್ತು ಚಿಕಿತ್ಸೆಗೆ ಸಂಗೀತ ಎಂಬ ಮಹಾದರ್ಶನವನ್ನು ರೂಪಿಸುವುದರಲ್ಲಿ ಹಾಗೂ ವಿಶ್ವದಾದ್ಯಂತ ಹರಡುವುದರಲ್ಲಿ ದೀಪಸ್ತಂಭರಾಗಿದ್ದಾರೆ ಎಂದು ಅವರು ಕೊಂಡಾಡಿದರು.ಯೋಗ ಸಂಗೀತ ಜ್ಞಾನ ಚಿಕಿತ್ಸೆ ಜನತೆಗೆ ಅತ್ಯಂತ ಉಪಯುಕ್ತವಾದುದು. ಇದು ಶಾಂತಿ ನೆಮ್ಮದಿ ನೀಡುತ್ತದೆ. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಸ್ವಾಮೀಜಿಯವರ ಸಾಮಾಜಿಕ ಕಳಕಳಿ ನೋಡಿದರೆ ಇತರೆ ಮಠಮಾನ್ಯಗಳಿಗೆ ಅವಧೂತ ದತ್ತಪೀಠ ಮಾದರಿಯಾಗಿದೆ. ಶ್ರೀಗಳ ಸಂಗೀತ ಚಿಕಿತ್ಸಾ ಪರಿಕಲ್ಪನೆ ನಿಜಕ್ಕೂ ಅತಿ ಅದ್ಭುತವಾದದ್ದು. ಯೋಗ ಆರೋಗ್ಯಕ್ಕೆ ಅತ್ಯುತ್ತಮ. 2025 ರಲ್ಲಿ ಪ್ರಧಾನಿ ಮೋದಿ ಅವರು ಒಂದು ಭೂಮಿ ಒಂದು ಯೋಗ ಘೋಷ ವಾಕ್ಯದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಯೋಗ ಬಹುತೇಕ ಎಲ್ಲಾ ದೇಶಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.ವಿಶ್ವಸಂಸ್ಥೆಯಲ್ಲಿ ಇದನ್ನು ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿರುವುದು ನಮ್ಮ ನಾಡಿಗೆ ಹೆಮ್ಮೆ. ಯೋಗದಿಂದ ಮಾನಸಿಕ ಶಾಂತಿ, ನೆಮ್ಮದಿ, ದೈಹಿಕ ಆರೋಗ್ಯ ಸಿಗುತ್ತದೆ. ಸಂಗೀತ ಜ್ಞಾನ ಚಿಕಿತ್ಸೆ ಕೂಡ ನೆಮ್ಮದಿ, ಆರೋಗ್ಯವನ್ನುಕೊಡುತ್ತದೆ ಎಂದು ಅವರು ಹೇಳಿದರು.ನಾನು ಸಾಹಸ್ರಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ ದೇಶ ವಿದೇಶಗಳಲ್ಲೂ ನೋಡಿದ್ದೇನೆ. ಇಂತಹ ವಿಶೇಷ ಕಾರ್ಯಕ್ರಮ ಎಲ್ಲೂ ಕಂಡಿರಲಿಲ್ಲ.ಇಲ್ಲಿಗೆ ನಾನು ಬಂದುದು ನನ್ನ ಪೂರ್ವ ಜನ್ಮದ ಪುಣ್ಯಎಂದು ಅವರು ತಿಳಿಸಿದರು.ನಮ್ಮ ದೇಶ ನಡೆದು ಬಂದ ದಾರಿ ತಿಳಿದು,ನೆಮ್ಮದಿ ಮತ್ತು ಬಾಳ್ವೆಗೆ ಬೇಕಾದ ಸಲಕರಣೆಗಳನ್ನು ತಿಳಿದು ಶ್ರೀಗಳು ದೂರ ದೃಷ್ಟಿಯ ಚಿಂತನೆ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ನಿಜಕ್ಕೂ ಶ್ರೀಗಳು ಭಗವಂತನ ಅವತಾರವೇ ಸರಿ ಎಂದು ಸೋಮಣ್ಣ ಬಣ್ಣಿಸಿದರು.ವಿಶ್ವದ ಭೂಪಟದಲ್ಲಿ ಶ್ರೀ ಸ್ವಾಮೀಜಿಗಳು ಚಿರಪರಿಚಿತರು ಅವರ ನಾದ ಚಿಕಿತ್ಸೆಯನ್ನು ತಿಳಿದು ಅಳವಡಿಸಿಕೊಂಡು ನಾದವನ್ನು ಆಲಿಸಲೆಂದೇ ದತ್ತ ಪೀಠಕ್ಕೆ ವಿದೇಶಿಗರು ಬರುತ್ತಾರೆ ಎಂದರೆ ಅದು ನಿಜಕ್ಕೂ ಅದ್ಭುತ ಎಂದು ಮನದುಂಬಿ ನುಡಿದರು.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ಅವರು ನಮ್ಮ ಸಂಸ್ಕೃತಿ ಪರಂಪರೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಪಾದಗಳಿಗೆ ನಮಿಸುತ್ತೇನೆ ಎಂದು ತಿಳಿಸಿದರು.ಯಾವುದೇ ಕಾರಣಕ್ಕೂ ಬೇರೆ ಕಡೆ ಹೋಗದೆ ಮೈಸೂರಿನಲ್ಲೇ ನೆಲೆಸುವಂತೆ ನೋಡಿಕೊಳ್ಳಬೇಕು ಎಂದು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಲ್ಲಿ ಸೋಮಣ್ಣ ಮನವಿ ಮಾಡಿದರು.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ನಾವೆಲ್ಲರೂ ಸನಾತನ ಪದ್ದತಿಯನ್ನು ಪಾಲಿಸೋಣ ಎಂದು ಕರೆ ನೀಡಿದರು.ಮೇಡ್ ಇನ್ ಇಂಡಿಯಾ ಎಂಬುದನ್ನು ಮರೆಯಬಾರದು. ನಮ್ಮ ದೇಶದಲ್ಲೇ ತಯಾರಿಸಿದ ಪದಾರ್ಥಗಳನ್ನೇ ಎಲ್ಲರೂ ಕೊಂಡುಕೊಳ್ಳಬೇಕು, ಉತ್ತೇಜನ ನೀಡಬೇಕು. ಕೈನಲ್ಲಿ ನೇಯ್ದ ಸೀರೆಗಳನ್ನು ಕೊಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರತಿ ದಿನ ಯೋಗ ಮಾಡಿ ಪ್ರತಿದಿನ ನಡಿಗೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.ನಮ್ಮ ರಾಷ್ಟ್ರಕ್ಕೆ ಕರ್ನಾಟಕಕ್ಕೆ ಮತ್ತು ಎಲ್ಲಾ ಪ್ರಜೆಗಳಿಗೆ ಸುಖ, ಶಾಂತಿ, ನೆಮ್ಮದಿ ಸಿಗಲಿ ಉತ್ತಮ ಬೆಳೆಯಾಗಲಿ. ಎಲ್ಲರಿಗೂ ಸದ್ಭುದ್ದಿ ಕೊಡಲಿ. ನಾವೆಲ್ಲರೂ ಸನಾತನ ಪದ್ದತಿಯನ್ನು ಪಾಲಿಸೋಣ ಎಂದು ಸ್ವಾಮೀಜಿ ಕರೆ ನೀಡಿದರು.ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಶಾಸಕ ಟಿ.ಎಸ್‌. ಶ್ರೀವತ್ಸ ಇದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ