ಭೂಮಿ ಖರೀದಿಸಿ ಲೇಔಟ್ ನಿರ್ಮಾಣ ಮಾಡಿ ನಿವೇಶನ ಹಂಚಿಕೆ: ಬಸ್ತಿ ರಂಗಪ್ಪ

KannadaprabhaNewsNetwork |  
Published : Sep 23, 2024, 01:17 AM IST
22ಕೆಎಂಎನ್ ಡಿ16 | Kannada Prabha

ಸಾರಾಂಶ

ಇಂದಿನ ದಿನಮಾನದಲ್ಲಿ ಎಲ್ಲರೂ ಒಂದು ಸ್ವಂತ ಸೂರನ್ನು ಹೊಂದಬೇಕು ಎನ್ನುವುದು ನಮ್ಮ ಜೀವಿತದ ಜೀವಮಾನದ ಕೊನೆ ಆಸೆ. ಈ ಕನಸನ್ನು ಸಾಕಾರ ಮಾಡುವ ದಿಕ್ಕಿನಲ್ಲಿ ದೃಢವಾದ ಹೆಜ್ಜೆ ಹಾಕಿರುವ ಸಂಘವು ಪಟ್ಟಣದ ವ್ಯಾಪ್ತಿಯಲ್ಲಿ ಒಂದೂವರೆ ಎಕರೆ ಕೃಷಿ ಜಮೀನನ್ನು ಖರೀದಿಸಿ ಲೇಔಟ್ ನಿರ್ಮಾಣ ಮಾಡಿ ಶ್ರೀಸಾಮಾನ್ಯರ ಕೈಗೆಟಕುವ ದರದಲ್ಲಿ ನಿವೇಶನ ವಿತರಣೆ ಮಾಡಲು ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನ ವಿತರಿಸಲು ಪರಿಶಿಷ್ಟ ಜಾತಿ ಹಾಗೂ ವರ್ಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಭೂಮಿ ಖರೀದಿಸಿ ಲೇಔಟ್ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಸ್ತಿ ರಂಗಪ್ಪ ಪ್ರಕಟಿಸಿದರು.

ಪಟ್ಟಣದ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿಯೇ ತಮ್ಮ ಉಳಿತಾಯ ಖಾತೆ ತೆರೆದು ವ್ಯವಹರಿಸಿ ಷೇರುದಾರರಾಗಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಇಂದಿನ ದಿನಮಾನದಲ್ಲಿ ಎಲ್ಲರೂ ಒಂದು ಸ್ವಂತ ಸೂರನ್ನು ಹೊಂದಬೇಕು ಎನ್ನುವುದು ನಮ್ಮ ಜೀವಿತದ ಜೀವಮಾನದ ಕೊನೆ ಆಸೆ. ಈ ಕನಸನ್ನು ಸಾಕಾರ ಮಾಡುವ ದಿಕ್ಕಿನಲ್ಲಿ ದೃಢವಾದ ಹೆಜ್ಜೆ ಹಾಕಿರುವ ಸಂಘವು ಪಟ್ಟಣದ ವ್ಯಾಪ್ತಿಯಲ್ಲಿ ಒಂದೂವರೆ ಎಕರೆ ಕೃಷಿ ಜಮೀನನ್ನು ಖರೀದಿಸಿ ಲೇಔಟ್ ನಿರ್ಮಾಣ ಮಾಡಿ ಶ್ರೀಸಾಮಾನ್ಯರ ಕೈಗೆಟಕುವ ದರದಲ್ಲಿ ನಿವೇಶನ ವಿತರಣೆ ಮಾಡಲು ತೀರ್ಮಾನಿಸಿದೆ ಎಂದರು.

ನಿವೇಶನ ಹೊಂದಬೇಕೆಂಬ ಸಂಘದ ಸದಸ್ಯರು ಮೂರು ಲಕ್ಷ ರು.ಗಳ ಮೊದಲ ಕಂತನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನಿಗದಿಪಡಿಸುವ ದರವನ್ನು ಅಂತಿಮವಾಗಿ ನಿವೇಶನಕ್ಕೆ ಇಡಲಾಗುತ್ತದೆ. ಸಂಘದ ಬ್ಯಾಂಕಿಂಗ್ ಶಾಖೆಯಲ್ಲಿ ಉಳಿತಾಯ ಖಾತೆ ತೆರೆದು ವ್ಯವಹಾರ ಮಾಡುವ ಮೂಲಕ ಸಂಘದ ಮುನ್ನಡೆಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.

ಕಾರ್ಯನಿರ್ವಾಹಕ ಮಂಡಳಿ ಕಾರ್ಯದರ್ಶಿ ಚೆಲುವಯ್ಯ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎಚ್.ಪುಟ್ಟರಾಜು, ನಿರ್ದೇಶಕರಾದ ಕೆ.ನಂಜಪ್ಪ, ಎಚ್.ಕೃಷ್ಣ, ರಾಮದಾಸ್, ಪರಶಿವಮೂರ್ತಿ, ಎ.ಎಸ್.ಜಯಣ್ಣ, ಸಿಂದಘಟ್ಟ ಪುಟ್ಟರಾಜು, ಎಸ್.ಶಿವರಾಮು, ಮರಿಯಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಸೋಮಸುಂದರ್, ಬಲರಾಮ, ಲೋಕೇಶ್ವರಿ, ಸರಸ್ವತಮ್ಮ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ