ಬೈಂದೂರು ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ

KannadaprabhaNewsNetwork |  
Published : Feb 16, 2026, 02:30 AM IST
ಬೈಂದೂರಿನ ಸೆಲ್ಕೋಡ್‌ ನಲ್ಲಿ ದಾನಿ ಶಾರದಾ ಅವರು ಮನೆಯನ್ನು ಸ್ವಸ್ತಿಕ್ ಅವರಿಗೆ ಹಸ್ತಾಂತರಿಸಿದರು | Kannada Prabha

ಸಾರಾಂಶ

ಬೈಂದೂರು ತಾಲೂಕಿನ ಜಡ್ಕಲ್ ಬಳಿ ಸೆಲ್ಕೋಡ್‌ನಲ್ಲಿ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಅವರು, ತಮ್ಮ ಪತಿ ಕೃಷ್ಣಮೂರ್ತಿ ಕೆ. ಇವರ ಸ್ಮರಣೆಯಲ್ಲಿ, 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬೈಂದೂರು: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್ ( ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ಇವರ ಪುತ್ರ, ಎಸ್ ಎಸ್ ಎಲ್ ಸಿ ಯಲ್ಲಿ ಶೇ 97 ಅಂಕ) ಅವರಿಗೆ ಬೈಂದೂರು ತಾಲೂಕಿನ ಜಡ್ಕಲ್ ಬಳಿ ಸೆಲ್ಕೋಡ್‌ನಲ್ಲಿ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಅವರು, ತಮ್ಮ ಪತಿ ಕೃಷ್ಣಮೂರ್ತಿ ಕೆ. ಇವರ ಸ್ಮರಣೆಯಲ್ಲಿ, 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನನ್ನ ಪತಿ ಕೃಷ್ಣಮೂರ್ತಿಯವರ ಹಲವು ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಆಳವಾದ ಅಧ್ಯಯನವೂ ಒಂದು. ಅವರಿಗೆ ‘ಛಂದೋಗತಿ’ ಎಂಬ ಪುಸ್ತಕವನ್ನು ಬರೆಯಬೇಕೆಂಬ ಕನಸಿತ್ತು. ಅದು ಈಡೇರಿರಲಿಲ್ಲ. ಹಾಗಾಗಿ ಅವರ ಸ್ಮೃತಿಯಲ್ಲಿ ನೀಡಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಯಕ್ಷಗಾನ ಕಲಾರಂಗ ನನಗೊಂದು ವಿಸ್ಮಯವೇ ಆಗಿದೆ. ಅವರ ಸಾಮಾಜಿಕ-ಶೈಕ್ಷಣಿಕ-ಕಲಾ ಸಂಬಂಧಿ ಕಾರ್ಯಕ್ರಮಗಳ ವಿಶ್ವರೂಪ ಅನ್ಯ ಸಂಘಟನೆಗಳಿಂದ ಅಸಾಧ್ಯ. ಅವರ ಕ್ಲಪ್ತತೆ, ಪರಿಶ್ರಮ, ಪಾರದರ್ಶಕತೆ, ಬದ್ಧತೆ, ಅಚ್ಚುಕಟ್ಟುತನಕ್ಕೆ ಶರಣಾಗಿದ್ದೇನೆ ಎಂದರು. ಅಭ್ಯಾಗತರಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಮಾತನಾಡಿ ಆಹಾರ, ಔಷಧ, ಶಿಕ್ಷಣ ವಿಕ್ರಯ ಮಾಡಬಾರದೆಂದು ನಮ್ಮ ಮೂಲ ಸಂಸ್ಕೃತಿಯಲ್ಲಿದೆ. ಈ ಮೂರೂ ವಿಧದ ದಾನಗಳು ಈ ಸಂಸ್ಥೆಯಿಂದ ಆಗುತ್ತಿವೆ ಎಂದರು. ಕೃಷ್ಣಮೂರ್ತಿಯವರ ಶಿಷ್ಯ - ಸಹೋದ್ಯೋಗಿ ವಿಷ್ಣುಮೂರ್ತಿ ಪ್ರಭು ಅವರು ತಮ್ಮ ಗುರುಗಳ ಬಹುಭಾಷಾ ಪಾಂಡಿತ್ಯ ಮತ್ತು ವಿದ್ವತ್ ಶ್ರೀಮಂತಿಕೆಯನ್ನು ಸಭೆಗೆ ಪರಿಚಯಿಸಿದರು.

ವೇದಿಕೆಯಲ್ಲಿ ಖ್ಯಾತ ವಕೀಲರಾದ ರಾಮಚಂದ್ರ ಅಡಿಗ, ಬಿ. ಹರೀಶ್ ತಂತ್ರಿ, ಶಾರದಾ ಎಂ. ಅವರ ಸಹೋದರ ಕೃಷ್ಣ ಭಟ್ ಮತ್ತು ಅವರ ಪತ್ನಿ ಪರಮೇಶ್ವರೀ, ಸಹೋದರಿ ಸರೋಜ, ಸಹೋದ್ಯೋಗಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ. ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಇದು ಡಾ. ಶಾರದಾ ಎಂ. ಪ್ರಾಯೋಜಕತ್ವದ ಎರಡನೇ ಮನೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ