ಸಿ.ಕೃಷ್ಣಯ್ಯಚೆಟ್ಟಿ ಅ್ಯಂಡ್ ಸನ್ಸ್ ಆಭರಣ ಪ್ರದರ್ಶನ

KannadaprabhaNewsNetwork |  
Published : Aug 25, 2024, 01:56 AM IST
ಪೋಟೋ: 24ಎಸ್‌ಎಂಜಿಕೆಪಿ04 | Kannada Prabha

ಸಾರಾಂಶ

ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಸಿ.ಕೃಷ್ಣಯ್ಯಚೆಟ್ಟಿ ಅ್ಯಂಡ್ ಸನ್ಸ್ ಆಭರಣ ಪ್ರದರ್ಶನ, ಮಾರಾಟಕ್ಕೆ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನ ಹೆಸರಾಂತ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಆಭರಣಗಳ ಕಂಪನಿಯು ಇಂದಿನಿಂದ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಗರದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಕಲಿ ಯುಗ. ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಆದರೆ, ಕೃಷ್ಣಯ್ಯ ಚೆಟ್ಟಿ ಕಂಪನಿಯು ನಂಬಿಕೆಗೆ ಅರ್ಹವಾಗಿದೆ. ಸುಮಾರು 155 ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ರಾಜರ ಕಾಲದಿಂದ ಇವರ ಪೂರ್ವಜರು ಆಭರಣಗಳ ತಯಾರಿಕೆಯಲ್ಲಿ ಇದ್ದರು. ಶಿವಮೊಗ್ಗದ ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.

ಕಂಪನಿಯ ಶ್ರೀಚರಣ್ ಮಾತನಾಡಿ, 1869ರಿಂದ ನಮ್ಮ ಸಂಸ್ಥೆ ಜನರ ನಂಬಿಕೆಗೆ ಅನುಗುಣವಾಗಿ ಆಭರಣಗಳ ಮಾರಾಟ ಮಾಡುತ್ತಾ ಬಂದಿದೆ. ಶಿವಮೊಗ್ಗದ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಇದೆ. ಬಂಗಾರಕ್ಕೆ ಶೇ.4, ವಜ್ರಕ್ಕೆ ಶೇ.6, ಬೆಳ್ಳಿಗೆ ಶೇ. 2ರಷ್ಟು, 19 ಲಕ್ಷ ರು.ಗಿಂತ ಹೆಚ್ಚಿನ ವಜ್ರದ ಆಭರಣಗಳ ವ್ಯಾಪಾರ ಮಾಡಿದರೆ ಶೇ.9 ರಷ್ಟು ರಿಯಾಯಿತಿ ಇದೆ ಎಂದರು.

ಆ.23ರಿಂದ 25ರವರೆಗೆ ಬೆಳಗ್ಗೆ 10.30ರಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ವಿನ್ಯಾಸದ ಆಭರಣಗಳು ಕಂಡು ಬಂದವು. ತೋಳಬಂಧಿ, ಸೊಂಟದ ಪಟ್ಟಿ, ನೆಕ್ಲೇಸ್, ಉಂಗುರಗಳು, ಬಳೆ, ಓಲೆ, ಮೂಗುತಿ, ಜುಮುಕಿ, ಪ್ಲಾಟಿನಂ ಆಭರಣಗಳು, ಲಕ್ಷ್ಮಿ, ವೆಂಕಟೇಶ, ರುದ್ರಾಕ್ಷಿ ಮಣಿ ಸೇರಿದಂತೆ ವಿವಿಧ ವಿನ್ಯಾಸದ ಡಾಲರ್‌ಗಳು, ಪ್ರೇಮಿಗಳಿಗಾಗಿ ಪ್ರೀತಿ ಸಂಕೇತದ ಡಾಲರ್‌ಗಳು ಕಂಡು ಬಂದವು. 5 ಸಾವಿರ ರು.ನಿಂದ 50 ಲಕ್ಷ ರು.ಗೂ ಅಧಿಕ ಮೌಲ್ಯದ ಆಭರಣಗಳು, ಇದರ ಜೊತೆಗೆ ಸುಗಂಧ ದ್ರವ್ಯಗಳು, ಮುತ್ತು, ರತ್ನ, ನೀಲ ಮಾಣಿಕ್ಯ, ವೈಢೂರ್ಯ ಇಲ್ಲಿವೆ.

ಕಾರ್ಯಕ್ರಮದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ತ್ರಿವೇಣಿ ವಿನೋದ್, ತೇಜಸ್ಸು, ಗೋಪಾಲ್, ಗಣೇಶ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!