ಕನ್ನಡಪ್ರಭ ವಾರ್ತೆ ಪಾಂಡವಪುರ
ನಂತರ ಅಧ್ಯಕ್ಷರಾಗಿ ಶೃತಿ, ಉಪಾಧ್ಯಕ್ಷೆಯಾಗಿ ಶಶಿರೇಖಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನಲ್ಲಿ ನಡೆದ ಬಹುತೇಕ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ ಎಂದರು.
ಈ ವೇಳೆ ನಿರ್ದೇಶಕರಾದ ದೇವಮ್ಮ, ಗೀತಾ, ರೇಣುಕಾ, ಪವಿತ್ರ, ದೇವಮ್ಮ, ಭಾಗ್ಯಲಕ್ಷ್ಮೀ, ಮುಖಂಡರಾದ ಪ್ರಾಣೇಶ್, ಯಜಮಾನರಾದ ಜಯರಾಮೇಗೌಡ, ಕೆಂಪೇಗೌಡ, ರಾಮೇಗೌಡ, ಸ್ವಾಮೀಗೌಡ, ಪ್ರಸನ್ನ, ರವಿ, ದೇವೇಗೌಡ, ಯೋಗರಾಜು, ದೇಶವಹಳ್ಳಿ ಪ್ರಭಾಕರ, ಜಗದೀಶ್, ನಿಂಗೇಗೌಡ, ಕೃಷ್ಣಮೂರ್ತಿ ಸೇರಿದಂತೆ ಶಂಕನಹಳ್ಳಿ ಗ್ರಾಮಸ್ಥರು, ಯಜಮಾನರು, ಮುಖಂಡರು ಹಾಜರಿದ್ದರು.ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜುಗೆ ಅಭಿನಂದನೆ
ಕೆ.ಎಂ.ದೊಡ್ಡಿ:ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜುರನ್ನು ತೊರೆಚಾಕನಹಳ್ಳಿ ಶ್ರೀಹನುಮಂತರಾಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಗ್ರಾಮದಲ್ಲಿ ಶ್ರೀಹನುಮಂತರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ಅಧ್ಯಕ್ಷ ತೊರೆಚಾಕನಹಳ್ಳಿ ಎಂ.ಸಂಪ್ರೀತ್‌ಕುಮಾರ್ ಅವರ ಮೂಲಕ ದೇವಾಲಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಜ್ಜಹಳ್ಳಿ ಬಸವರಾಜು, ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರು ಒಗ್ಗಟಾಗಿ ಶ್ರಮಿಸಬೇಕು. ಗ್ರಾಮಗಳು ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿಯಾಗುತ್ತದೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಈ ವೇಳೆ ಕ್ಯಾತಘಟ್ಟ ಗ್ರಾಪಂ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಚನ್ನೇಗೌಡ, ಯಜಮಾನ್ ಬೋರೇಗೌಡ, ಪುಟ್ಟಸ್ವಾಮಿ, ಟಿ. ಮಲ್ಲಯ್ಯ, ಜವರಾಯಿ, ನಾಗೇಶ್, ಯುವ ಮುಖಂಡ ಶಂಕರೇಗೌಡ ಸೇರಿದಂತೆ ಮತ್ತಿತರಿದ್ದರು.