ಕನ್ನಡಪ್ರಭ ವಾರ್ತೆ ಕೊರಟಗೆರೆ
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ೬ ಮೊಬೈಲ್ ಆಪ್‌ಗಳಲ್ಲಿ ಒಂದೇ ಬಾರಿಗೆ ಪ್ರಗತಿ ಸಾಧಿಸುವಂತೆ ಒತ್ತಡ ಏರಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಉಂಟಾಗಿದ್ದು ಅಧಿಕ ಕೆಲಸದ ಒತ್ತಡದಿಂದ ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಹೃದಯಾಘಾತದಿಂದ ಮರಣ ಹೊಂದಿದ್ದು, ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಕೆಲಸಕ್ಕೆ ರಾಜಿನಾಮೆ ಸಲ್ಲಿಸುವ ಹಂತಕ್ಕೆ ತಲುಪಿದ್ದಾರೆ ಎಂದರು.ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದು ಸೆ.೨೬ ವರೆಗೆ ಸರ್ಕಾರ ಸಂಘದ ಬೇಡಿಕೆ ಈಡೇರದಿದ್ದರೆ ಸೆ.೨೬ ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಮತನಾಡಿ ಕೊರಟಗೆರೆ ತಾಲೂಕಿನಲ್ಲಿ ೩೩ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಕೇವಲ ೧೮ ಮಂದಿ ಕೆಲಸ ನಿರ್ವಹಿಸುತ್ತಿದ್ದು ೩ ಮಂದಿಗೆ ಪ್ರಭಾರ ಕಂದಾಯ ಅಧಿಕಾರಿಗಳ ಹೆಚ್ಚುವರಿ ಹುದ್ದೆಯನ್ನು ನಿರ್ವಹಿಸುವಂತೆ ಸೂಚಿಸಲಾಗಿದ್ದು, ತಾಲೂಕಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ೩೩ ಮಂದಿಯ ಕಾರ್ಯವನ್ನು ಕೇವಲ ೧೮ ಮಂದಿ ನಿರ್ವಹಿಸುತ್ತಿದ್ದು ತಾಲೂಕಿನಲ್ಲಿ ಖಾಲಿ ಇರುವ ೧೫ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಕ್ಷಣ ತುಂಬುವಂತೆ ಸರ್ಕಾರವನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಲ ಸಂಘದ ಗೌರವಾಧ್ಯಕ್ಷ ಭರತ್‌ಕುಮಾರ್, ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ಎಂ.ಸಲ್ಮಾನ್, ಸದಸ್ಯರುಗಳಾದ ರಮೇಶ್, ಸಬೀಹಾಬಾನು, ಹಾರಿಕಾ, ಮೋಹಿತ್, ಕೃಷ್ಣಮೂರ್ತಿ, ಸುಧೀಶ್, ಮಂಜುನಾಥ್, ಗುರುಶಂಕರ್, ಪರಶುರಾಮ್, ಸೇರಿದಂತೆ ಇತರರು ಇದ್ದರು.