ಮೃತಪಟ್ಟ ಹಸುವಿನ ಸುತ್ತಲೇ ಸುತ್ತುತ್ತಿರುವ ಕರುಗಳು

KannadaprabhaNewsNetwork |  
Published : Jul 17, 2024, 12:46 AM IST
ಫೋಟೋ : ೧೬ಎಚ್‌ಎನ್‌ಎಲ್೩ಎ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಹೇರೂರು ಗ್ರಾಮದಲ್ಲಿ ದೇವಿ ಆದಿಶಕ್ತಿ ಹೆಸರಿನಲ್ಲಿ ಸಾಂಪ್ರದಾಯಿಕವಾಗಿ ಬಿಟ್ಟ ಗೋವೊಂದು ಮಂಗಳವಾರ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು, ಇದರೊಂದಿಗಿದ್ದ ಎರಡು ಕರುಗಳು ಈ ಗೋವನ್ನು ಬಿಟ್ಟು ಕದಲದೇ ಅಲ್ಲಿಯೇ ರೋದಿಸುತ್ತಿರುವ ದೃಶ್ಯ ಮನ ಮಿಡಿಯುವಂತಿತ್ತು.

ಹಾನಗಲ್ಲ: ತಾಲೂಕಿನ ಹೇರೂರು ಗ್ರಾಮದಲ್ಲಿ ದೇವಿ ಆದಿಶಕ್ತಿ ಹೆಸರಿನಲ್ಲಿ ಸಾಂಪ್ರದಾಯಿಕವಾಗಿ ಬಿಟ್ಟ ಗೋವೊಂದು ಮಂಗಳವಾರ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು, ಇದರೊಂದಿಗಿದ್ದ ಎರಡು ಕರುಗಳು ಈ ಗೋವನ್ನು ಬಿಟ್ಟು ಕದಲದೇ ಅಲ್ಲಿಯೇ ರೋದಿಸುತ್ತಿರುವ ದೃಶ್ಯ ಮನ ಮಿಡಿಯುವಂತಿತ್ತು.

ಈ ಎರಡು ಕರುಗಳು ಮೇವು ತಿನ್ನದೆ ನೀರನ್ನೂ ಕುಡಿಯದೇ ಅಲ್ಲಿಯೇ ನಿಂತಿವೆ. ಇಲ್ಲಿಗೆ ಬಂದ ಜನರು ಈ ಕರುವನ್ನು ಬೇರೆಡೆಗೆ ಕಳಿಸಲು ಮಾಡಿದ ಯತ್ನವೂ ವಿಫಲವಾಗಿದೆ. ಈ ಕರುಗಳು ಇದೇ ಗೋವಿನ ಕರುಗಳಲ್ಲ. ಆದರೆ ಭಕ್ತರು ದೇವಿಗಾಗಿ ಬಿಟ್ಟ ಕರುಗಳು ಇವಾಗಿವೆ. ಆದಾಗ್ಯೂ ಈ ಹಿರಿಯ ಗೋವಿನೊಂದಿಗೆ ಅತ್ಯಂತ ಆಪ್ತವಾಗಿದ್ದವು ಎನ್ನಲಾಗಿದೆ. ಇದೆಲ್ಲವೂ ಊರ ಜನರಿಗೆ ಅಚ್ಚರಿಯ ಸಂಗತಿಯೂ ಆಗಿದೆ.

ಊರಿನಲ್ಲಿ ನಾಲ್ಕಾರು ದೇವರಿಗೆ ಬಿಟ್ಟ ಗೋವುಗಳಿವೆ. ಎಲ್ಲ ಗೋವುಗಳು ಒಟ್ಟಾಗಿದ್ದು ದಿನವಿಡಿ ಮೇವು ಸ್ವೀಕರಿಸಿ ಒಟ್ಟಾಗಿ ಜೀವಿಸುತ್ತಿದ್ದವು. ಈ ಗೋವುಗಳನ್ನು ಯಾರು ಮನೆಯಲ್ಲಿ ಕಟ್ಟುವ ಸಂಪ್ರದಾಯವಿಲ್ಲ. ಎಲ್ಲೆಂದರಲ್ಲಿ ಮೇವು ತಿಂದು ಬದುಕುವುದು ಹಾಗೂ ಇಡೀ ಊರಿನ ಜನರು ಈ ಗೋವುಗಳನ್ನು ಭಕ್ತಿ ಶ್ರದ್ಧೆಯಿಂದ ಕಾಣುವುದು ಇಲ್ಲಿನ ಸಂಪ್ರದಾಯ. ಮಂಗಳವಾರ ಬೆಳಗಿನ 3-4 ಗಂಟೆಯ ಹೊತ್ತಿಗೆ ಊರಿನಲ್ಲೇ ದೇವಿ ಮಂದಿರದ ಬಳಿ ಇರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಹರಿದು ಅದಕ್ಕೆ ಸ್ಪರ್ಶಿಸಿದ ಗೋವು ಸಾವನ್ನಪ್ಪಿದೆ ಎಂದು ತಿಳಿದಿದೆ.ಊರ ಜನರು ಈ ಗೋವಿನ ಶವವನ್ನು ಟ್ರ್ಯಾಕ್ಟರ್‌ನಲ್ಲಿ ಇಟ್ಟುಕೊಂಡು ಊರ ತುಂಬ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ಗುಬ್ಬಿ ಅಜ್ಜನ ಮಠದ ಬಳಿ ದಫನ್‌ ಮಾಡಲಾಯಿತು. ಇದರ ತಾಯಿಯನ್ನು ಸಹ ಇಲ್ಲೇ ದಫನ್‌ ಮಾಡಲಾಗಿದೆಯಂತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಸಿಎಂ ರಾಜೀನಾಮೆ - ಇಂದೇ ಸುದ್ದಿಗೋಷ್ಠಿಯಲ್ಲಿ ವಿದಾಯ ಭಾಷಣ ಸಾಧ್ಯತೆ?
ಇದೀಗ ಮೌನಕ್ಕೆ ಶರಣಾದ ಸಿಎಂ! ಸಿದ್ದು ರಹಸ್ಯ ನಡೆ ಅರಿಯದಾದ ಕಾಂಗ್ರೆಸ್‌ ಹೈಕಮಾಂಡ್‌