ಬಸವಣ್ಣ ದೇವರ ಮಠದಲ್ಲಿ ಹಿತಚಿಂತಕರ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Nov 27, 2026, 02:00 AM IST
ನೆಲಮಂಗಲ ನಗರದ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಹಿತಚಿಂತಕರ ಅಭಿಯಾನಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ನೆಲಮಂಗಲ: ವಿಶ್ವ ಹಿಂದೂ ಪರಿಷದ್ ವಿಶ್ವದ ಇರುವ ಹಿಂದೂ ಸಮಾಜದ ಹಿತ, ಏಕತೆ, ಸಂಘಟನೆ ಹಾಗೂ ವಿಶ್ವ ಹಿಂದೂ ಪರಿಷದ್ ಸೇವೆಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸಂಘಟನೆ ಎಂದು ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ, ಪವಾಡ ಶ್ರೀ ಬಸವಣ್ಣದೇವರ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು

ನೆಲಮಂಗಲ: ವಿಶ್ವ ಹಿಂದೂ ಪರಿಷದ್ ವಿಶ್ವದ ಇರುವ ಹಿಂದೂ ಸಮಾಜದ ಹಿತ, ಏಕತೆ, ಸಂಘಟನೆ ಹಾಗೂ ವಿಶ್ವ ಹಿಂದೂ ಪರಿಷದ್

ಸೇವೆಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸಂಘಟನೆ ಎಂದು ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ, ಪವಾಡ ಶ್ರೀ ಬಸವಣ್ಣದೇವರ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನೆಲಮಂಗಲ ನಗರದ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್ ಹಿತಚಿಂತಕರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮೂರು ವರ್ಷಕ್ಕೊಮ್ಮೆ ನಡೆಯುವ ಹಿತಚಿಂತಕರ ಅಭಿಯಾನ-2026 ಹಿಂದೂ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಆಸಕ್ತಿ ಹೊಂದಿರುವ ಸಮಾಜದ ವಿವಿಧ ಸ್ತರಗಳ ಜನರನ್ನು ಸಂಘಟನೆಯೊಂದಿಗೆ ನೋಂದಾಯಿಸಿಕೊಳ್ಳುವ ವಿಶೇಷ ಅಭಿಯಾನವಾಗಿದೆ. ಹಿತಚಿಂತಕರ ಮೂಲಕ ಹಿಂದೂ ಸಮಾಜದ ಎಲ್ಲ ವರ್ಗದ ಜನರ ಹಿತಕ್ಕಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಗಮುಕ್ತ ಹಾಗೂ ಸದೃಢ ಸಮಾಜ ನಿರ್ಮಾಣ, ರೈತರಿಗೆ ಗೋ ಆಧಾರಿತ ಸಾವಯವ ಕೃಷಿ ಕುರಿತು ತರಬೇತಿ ಶಿಬಿರಗಳು, ಗೋ ಸಂರಕ್ಷಣೆ, ನೀರಿನ ಬಾವಿ, ದೇವಸ್ಥಾನ ಮತ್ತು ರುದ್ರಭೂಮಿಗಳಲ್ಲಿ ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷದ್ ಕೋಲಾರ ವಿಭಾಗ ಕಾರ್ಯದರ್ಶಿ ಗೌರಿಶಂಕರ್ ಮಾತನಾಡಿ, ಕಳೆದ 2023ರಲ್ಲಿ ನಡೆದ ಹಿತಚಿಂತಕರ ಅಭಿಯಾನದಲ್ಲಿ ಭಾರತದಲ್ಲಿ 64 ಲಕ್ಷಕ್ಕೂ ಅಧಿಕ ಹಿತಚಿಂತಕರು ನೋಂದಣಿಯಾಗಿದ್ದರು. ಪ್ರಸ್ತುತ 2026ರ ಅಭಿಯಾನದಲ್ಲಿ ದೇಶಾದ್ಯಂತ 1 ಕೋಟಿ ಹಿತಚಿಂತಕರನ್ನು ನೋಂದಾಯಿಸುವ ಮಹತ್ವಕಾಂಕ್ಷಿ ಗುರಿ ಹೊಂದಲಾಗಿದೆ. ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ದೇಶಾದ್ಯಂತ 7,500ಕ್ಕೂ ಅಧಿಕ ಸೇವಾ ಕೇಂದ್ರಗಳು ಹಾಗೂ 50,000ಕ್ಕೂ ಅಧಿಕ ವಿವಿಧ ಸೇವಾ ಚಟುವಟಿಕೆಗಳು ನಡೆಯುತ್ತಿವೆ. 2025ರಲ್ಲಿ ಒಂದು ಲಕ್ಷಕ್ಕೂ ಅಧಿಕ ಗೋವುಗಳ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಧರ್ಮಜಾಗೃತಿ, ಧರ್ಮರಕ್ಷಣೆ ಹಾಗೂ ಹಿಂದೂ ಸಮಾಜದ ಸಂಘಟನೆಗಾಗಿ ದೇಶಾದ್ಯಂತ 40,000 ಅಧಿಕ ಸತ್ಸಂಗ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಲಾಗುತ್ತದೆ ಎಂದರು.

ಬಜರಂಗದಳ ಕೋಲಾರ ವಿಭಾಗ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಹಿತಚಿಂತಕರ ಅಭಿಯಾನ ಕೇವಲ ನೋಂದಣಿ ಕಾರ್ಯಕ್ರಮವಲ್ಲ, ಸಮಾಜದ ಹಿತಕ್ಕಾಗಿ ಸೇವೆ, ಸಮರ್ಪಣೆ ಮತ್ತು ಸಂಘಟನೆಯೊಂದಿಗೆ ಕೈಜೋಡಿಸುವ ಮಹತ್ವದ ಅವಕಾಶವಾಗಿದೆ. ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಕ್ಕೂ ಹೆಚ್ಚು ಜನರ ಹಿತಚಿಂತಕ ಅಭಿಯಾನದ ಗುರಿ ಹೊಂದಲಾಗಿದೆ ಎಂದರು.

ಪೋಟೋ - 25ಕೆಎನ್ಎಲ್ಎಂ2 - ನೆಲಮಂಗಲದ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್ ಆಯೋಜಿಸಿದ್ದ ಹಿತಚಿಂತಕರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್