ಸಂವಿಧಾನ ಪ್ರತಿ ನಾಗರಿಕನ ಬದುಕಿಗೆ ದಾರಿದೀಪ: ದಿನೇಶ್

KannadaprabhaNewsNetwork |  
Published : Nov 27, 2026, 01:45 AM IST
ಪೊಟೋ೨೬ಸಿಪಿಟಿ೨: ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ  ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ. ಸರ್ಕಾರಕ್ಕೆ ಮಾರ್ಗದರ್ಶಿ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ದಾರಿದೀಪ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ ಎಂದು ಕಾಂಗ್ರೆಸ್ ಮುಖಂಡ ಕೂಡ್ಲೂರು ದಿನೇಶ್ ಅಭಿಪ್ರಾಯಪಟ್ಟರು

ಚನ್ನಪಟ್ಟಣ: ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ. ಸರ್ಕಾರಕ್ಕೆ ಮಾರ್ಗದರ್ಶಿ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ದಾರಿದೀಪ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ ಎಂದು ಕಾಂಗ್ರೆಸ್ ಮುಖಂಡ ಕೂಡ್ಲೂರು ದಿನೇಶ್ ಅಭಿಪ್ರಾಯಪಟ್ಟರು.

ಎಸ್‌ಎಂಎಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ, ಕರ್ನಾಟಕ ಭೀಮಸೇನೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಪ್ರಯುಕ್ತ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಕೇವಲ ನ.೨೬ರಂದು ಸಂವಿಧಾನ ದಿನಾಚರಣೆ ಮಾಡದೆ, ಡಾ. ಅಂಬೇಡ್ಕರ್ ಅವರನ್ನು ದೇಶದ ಪ್ರತಿಯೊಬ್ಬರೂ ಸದಾ ಸ್ಮರಿಸಿ, ವಿದ್ಯಾವಂತರಾಗಿ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳನ್ನು ಅರಿತು ತಮ್ಮ ಹಕ್ಕುಗಳನ್ನು ಕಾಪಾಡಿಕೊಂಡು ಕರ್ತವ್ಯಗಳನ್ನು ಮಾಡಿದಾಗ ಅವರ ಆಶಯದಂತೆ ಸಮಾಜದಲ್ಲಿ ಸಮಾನತೆ ಮತ್ತು ಭ್ರಾತೃತ್ವದ ಮನೋಭಾವ ಬೆಳೆದು ಪ್ರಜಾಭುತ್ವ ಬಲಿಷ್ಠವಾಗುತ್ತದೆ ಎಂದರು.

ಕರ್ನಾಟಕ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ಜೈಪ್ರಕಾಶ್ ಮಾತನಾಡಿ, ಪ್ರತಿ ವರ್ಷ ನವೆಂಬರ್ ೨೬ರಂದು ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ೧೯೪೯ರ ನವೆಂಬರ್ ೨೬ರಂದು ನಮ್ಮ ಸಂವಿಧಾನ ಸಭೆಯು ಭಾರತದ ಸಂವಿಧಾನ ಅಂಗೀಕರಿಸಿತು. ೧೯೫೦ರ ಜನವರಿ ೨೬ರಂದು ಇದು ಅಧಿಕೃತವಾಗಿ ಜಾರಿಗೆ ಬಂದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಗಣರಾಜ್ಯವನ್ನಾಗಿ ರೂಪಿಸಿತು. .ಅಂಬೇಡ್ಕರ್, ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವವನ್ನು ತಂದು ಕೊಡಲು ಮತ್ತು ದೇಶದ ಏಕತೆ ಮತ್ತು ಸುಭದ್ರತೆಗಾಗಿ ೨ ವರ್ಷ ೧೧ ತಿಂಗಳು ೧೮ ದಿನ ಸತತವಾಗಿ ಶ್ರಮಿಸಿ ದೇಶಕ್ಕೆ ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನ ಕೊಡುಗೆ ನೀಡಿದ್ದಾರೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಮತ್ತು ಸಂವಿಧಾನವನ್ನು ಗೌರವಿಸಲು ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪತಿ ಮಂಗಳವಾರಪೇಟೆ, ಎಸ್‌ಎಂಎಸ್‌ ಟ್ರಸ್ಟ್ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಪಿ.ನಂದಿನಿ, ಸದಸ್ಯರಾದ ದಿನೇಶ್, ಶಶಿಕುಮಾರ್, ಸೋಮಶೇಖರ್, ಮಹಂತೇಶ್, ಪುಟ್ಟಮಾದೇಗೌಡ, ಕೂರಣಗೆರೆ ರಾಜು, ಕರ್ನಾಟಕ ಭೀಮಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೂರಣಗೆರೆ ಸುರೇಶ್, ಕದಂಬ ಶಿವಕುಮಾರ್, ಅಪ್ಪಗೆರೆ ಪ್ರದೀಪ್, ಡಿಎಸ್‌ಎಸ್ ವೆಂಕಟೇಶ್ ಇತರರಿದ್ದರು.

ಪೊಟೋ೨೬ಸಿಪಿಟಿ೨:ಚನ್ನಪಟ್ಟಣದಲ್ಲಿ ಎಸ್‌ಎಂಎಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ, ಕರ್ನಾಟಕ ಭೀಮಸೇನೆ ಸಂಘಟನೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್