ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರ ಎರಡು ದಿನಗಳ ಅಂತರ್‌ರಾಜ್ಯ ಮಟ್ಟದ ಗೆಡ್ಡೆಗೆಣಸು, ಸೊಪ್ಪು ಮೇಳದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕುಳಿತಲ್ಲಿಗೆ ಆಹಾರ ಪೂರೈಕೆಯಾಗುವ ಇಂದಿನ ಕಾಲದಲ್ಲಿ ಕಂದಮೂಲಗಳನ್ನು ಸಂರಕ್ಷಿಸುವ ಕೆಲಸಗಳು ಆಗಬೇಕಾಗಿದೆ. ಈ ದಿಶೆಯಲ್ಲಿ ಕಂದಮೂಲ ಮೇಳ ಆರಂಭಿಕ ದಿಟ್ಟ ಹೆಜ್ಜೆಯಾಗಿದೆ. ಆಧುನಿಕತೆಯ ಆಹಾರ ಪದ್ಧತಿಯನ್ನು ಬಳಸುವ ಮೂಲಕ ಸಂಪಾದನೆಯ ಬಹುಅಂಶವನ್ನು ಅನಾರೋಗ್ಯ ಕಾರಣ ಆಸ್ಪತ್ರೆಗೆ ಸುರಿಯುವಂತಾಗಿದೆ. ರೋಗನಿರೋಧಕ ಶಕ್ತಿ ಇರುವ ಗೆಡ್ಡೆಗೆಣಸು, ಸೊಪ್ಪುಗಳನ್ನು ದೈನಂದಿನ ಜೀವನದಲ್ಲಿ ಉಪಯೋಗಿಸಿದರೆ, ಕನಿಷ್ಠ ರೋಗದಿಂದ ದೂರ ಇರಲು ಸಾಧ್ಯವಿದೆ. ಅದಕ್ಕಾಗಿ ಗಡ್ಡೆಗೆಣಸು, ಸೊಪ್ಪು ಬೆಳೆಸುವ ಪ್ಯಾಕೆಜ್ ಮಾಡಿಕೊಟ್ಟರೆ, ಎಲ್ಲರ ಮನೆಗಳಲ್ಲೂ ಕಂದಮೂಲ ಬೆಳೆಸಲು ಅನುಕೂಲವಾಗಲಿದೆ, ಇದನ್ನು ಅಭಿಯಾನವಾಗಿ ಮಾರ್ಪಡಿಸಬೇಕು ಎಂದು ಅವರು ಆಶಿಸಿದರು.ವಿಷ ರಹಿತ ಅಡುಗೆ ಮನೆಗೆ ಸಂಕಲ್ಪಿಸಿ: ಕಾಸರಗೋಡು ಉಪ್ಪಳ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗಿಸಿ, ಗೆಡ್ಡೆಗೆಣಸನ್ನು ತುಂಡರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮನೆಯಲ್ಲಿ ಗೋ, ಕೃಷಿ: ನಾವು ಮನೆಯಲ್ಲಿ ವಿಷ ಉಣ್ಣುತ್ತೇವೆ, ಮಾತ್ರವಲ್ಲ ಮನೆಗೆ ಬರುವವರಿಗೂ ವಿಷವನ್ನೇ ಕೊಡುತ್ತೇವೆ. ವಿಷವಲ್ಲದ ಸಾವಯವ ಕೃಷಿಯತ್ತ ಮುಖಮಾಡಬೇಕು. ಅಂಗಳ, ಗದ್ದೆಗಳಲ್ಲಿ ಕೃಷಿ ಮಾಡಿದರೆ ಆಯಿಲ್, ಮಣ್ಣು, ಶಾಖದ ಸಂಹವನ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮ. ಮನೆ ಮಂದಿ ಯಾವಾಗಲೂ ಶುದ್ಧ ಆಹಾರ ಸೇವಿಸಬೇಕು. ಪ್ರತಿ ಮನೆಯಲ್ಲಿ ಗೋಸಾಕಾಣಿಕೆ ಆಗಬೇಕು, ಗ್ರಾಮಕ್ಕೊಂದು ಗೋ ಶಾಲೆ ಇರಬೇಕು. ಕೃಷಿಕರ ಬಳಗ ಆಗಬೇಕು. ಮನೆಗೆ ಬೇಕಾಗುವ ತರಕಾರಿಯನ್ನು ಮನೆಯಲ್ಲೇ ಬೆಳೆಸಬೇಕು ಎಂದು ಅವರು ಹೇಳಿದರು. ಕಂದಮೂಲ ಆಹಾರ ಸೇವಿಸಿ: ಗೆಡ್ಡೆಗೆಣಸು, ಸೊಪ್ಪು ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಿದ ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ನಮ್ಮ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಕಂದಮೂಲಗಳ ಆಹಾರವನ್ನು ಸೇವಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಗೆ ಹೆಚ್ಚಿನ ಗೆಡ್ಡೆಗೆಣಸು ಸೇವಿಸಬೇಕು ಎಂದರು.
ಕಂದಮೂಲ ಮೇಳದ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಹೈನುಗಾರಿಕೆ, ಕೃಷಿ ವಿಜ್ಞಾನದ ತಿಳಿವಳಿಕೆ ಇಂದಿನ ಅಗತ್ಯವಾಗಿದ್ದು, ಇಂತಹ ಮೇಳಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಮುಂದಿನ ವರ್ಷ ನನ್ನ ಸಂಸ್ಥೆಯಲ್ಲೂ ಕಂದಮೂಲ ಮೇಳ ಆಯೋಜಿಸಲಾಗುವುದು ಎಂದರು.
ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ ಡಾ.ವಾಮನ ಶೆಣೈ ಅವರು ಧ್ವಜಾರೋಹಣ ನೆರವೇರಿಸಿದರು.
ಭರತ್‌ರಾಜ್ ಸೊರಕೆ ಹಾಗೂ ಜಯಶ್ರೀ ಪ್ರವೀಣ್ ನಿರೂಪಿಸಿದರು.
ಸಮಾರಂಭದಲ್ಲಿ ಕಂಡದ್ದು...