ಕನ್ನಡಪ್ರಭ ವಾರ್ತೆ ಮೈಸೂರು
ಈ ಸಭೆಯನ್ನು ಉದ್ಘಾಟಿಸಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ದಿನ ನಿತ್ಯ ಒಂದಲ್ಲ ಒಂದು ಜನ ವಿರೋಧಿ ನೀತಿಗಳನ್ನು ಎಗ್ಗಿಲ್ಲದೆ ಜಾರಿ ಮಾಡುತ್ತಿದೆ. ಒಂದು ಕಡೆ ನಿರಂತರವಾಗಿ ಬೆಲೆ ಏರಿಕೆಯಿಂದ ಜನರಿಗೆ ತತ್ತರಿಸುತ್ತಿದ್ದಾರೆ. ಆದರೆ, ಅವರ ಆದಾಯ ಮತ್ತು ಕೂಲಿ ಹಾಗೆಯೇ ಇದೆ. ಇದರಿಂದಾಗಿ ಅವರ ಜೀವನದ ಗುಣಮಟ್ಟ ಕುಸಿಯುತ್ತಿದ್ದೆ ಎಂದು ದೂರಿದರು.
ಜನರ ದುಡಿಮೆಯ ಅರ್ಧ ಹಣ ಶಿಕ್ಷಣ ಮತ್ತು ಆರೋಗ್ಯಕ್ಕೆ ವೆಚ್ಚವಾಗುತ್ತಿದೆ. ರೈತ- ಕಾರ್ಮಿರ ಪರಿಸ್ಥಿತಿಯು ಮತ್ತಷ್ಟು ಕೆಟ್ಟದಾಗಿ, ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಸಂಹಿತೆಯನ್ನಾಗಿಸಿ ಮಾಲೀಕರ ಶೋಷಣೆಗೆ ಅನುಕೂಲ ಮಾಡಿಕೊಟ್ಟಿದೆ. ಹಾಗೆಯೇ ರೈತರನ್ನು ಶೋಷಿಸುವ ಕಾಯ್ದೆಗಳನ್ನು ಎಗ್ಗಿಲ್ಲದೆ ಜಾರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದೆ. ಬಡವರು ಮತ್ತಷ್ಟು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಈ ಜನ ವಿರೋಧಿ ನೀತಿಗಳ ವಿರುದ್ಧ ಡಿ.21 ರಂದು ಬೆಂಗಳೂರಿನಲ್ಲಿ ಜನರ ಹಕ್ಕೊತ್ತಾಯಗಳಿಗೆ ಜನದನಿ ರ್ಯಾಲಿ ನಡೆಯಲಿದೆ ಎಂದರು.
ಕಾರ್ಮಿಕ ಮುಖಂಡರಾದ ಬಾಲಾಜಿ ರಾವ್, ಜಿ. ಜಯರಾಂ, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಸಮಿತಿ ಸದಸ್ಯರಾದ ಮೆಹಬೂಬ್, ಜಿ. ರಾಜೇಂದ್ರ, ಅಣ್ಣಪ್ಪ, ಕೃಷ್ಣಮೂರ್ತಿ, ಸುಬ್ರಹ್ಮಣ್ಯ, ಶ್ರೀಧರ್, ಲ. ಜಗನ್ನಾಥ್, ರಾಘವೇಂದ್ರ, ಅಭಿ, ಬಲಾರಾಂ, ಚೆನ್ನಪ್ಪ, ಈಶ್ವರ್, ಬಸವರಾಜ್, ಶ್ರೀಕಂಠಮೂರ್ತಿ ಮೊದಲಾದವರು ಇದ್ದರು.